ಬಾಡಿಗೆ ಬೇಡ ಎಂದ ಭಾರತೀಯ ಕ್ಯಾಬ್ ಚಾಲಕನಿಗೆ ಪಾಕ್ ಆಟಗಾರರಿಂದ ಡಿನ್ನರ್ ಪಾರ್ಟಿ!

ಎಷ್ಟೇ ಒತ್ತಾಯ ಮಾಡಿದರೂ ಭಾರತೀಯ ಡ್ರೈವರ್ ಹಣ ಪಡೆಯಲು ಒಪ್ಪದಿದ್ದಾಗ, ಈ ಐವರೂ ಪಾಕಿಸ್ಥಾನೀ ಆಟಗಾರರು ಕ್ಯಾಬ್ ಚಾಲಕನನ್ನು ತಮ್ಮ ಜೊತೆಯಲ್ಲೇ ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗಿ ಜೊತೆಯಲ್ಲೇ ಊಟ ಮಾಡಿಸಿದ್ದಾರೆ.

ಭಾರತೀಯ ಕ್ಯಾಬ್ ಚಾಲಕನ ಜೊತೆ ಪಾಕ್ ಕ್ರಿಕೆಟಿಗರು

ಭಾರತೀಯ ಕ್ಯಾಬ್ ಚಾಲಕನ ಜೊತೆ ಪಾಕ್ ಕ್ರಿಕೆಟಿಗರು

 • Share this:
  ಬೆಂಗಳೂರು (ನ. 26): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಮೊದಲ ಟೆಸ್ಟ್​ನಲ್ಲೇ ಸೋಲುಂಡಿದೆ. ಆದರೆ, ಇದೀಗ ಮೈದಾನದ ಹೊರಗಿನ ಘಟನೆಯೊಂದರಿಂದ ಪಾಕ್ ಆಟಗಾರರು ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನದ ಕೆಲ ಆಟಗಾರರು ಭಾರತೀಯನನ್ನು ನಡೆಸಿಕೊಂಡ ರೀತಿ ಭಾರಿ ಪ್ರಶಂಸೆಗೆ ಕಾರಣವಾಗಿದೆ.

  ಶಾಹೀನ್ ಶಾ ಅಫ್ರಿದಿ, ಯಾಸಿರ್ ಶಾ ಮತ್ತು ನಾಸೀಮ್ ಶಾ ಸೇರಿದಂತೆ ಪಾಕ್ ಕ್ರಿಕೆಟ್ ತಂಡದ ಐವರು ಆಟಗಾರರು ಊಟಕ್ಕೆಂದು ಬ್ರಿಸ್ಬೇನ್ ನಲ್ಲಿರುವ ಭಾರತೀಯ ರೆಸ್ಟೋರೆಂಟ್ ಒಂದಕ್ಕೆ ಕ್ಯಾಬ್ ಮೂಲಕ ತೆರಳಿದ್ದಾರೆ.

  RCB: ಆರ್​ಸಿಬಿ ತಂಡ ಈ ಮೂವರು ಆಟಗಾರರನ್ನು ಕೈ ಬಿಡದೆ ತಪ್ಪು ಮಾಡಿತೇ?

  ಈ ಕ್ಯಾಬ್ ಅನ್ನು ಭಾರತ ಮೂಲದ ವ್ಯಕ್ತಿಯೊಬ್ಬರು ಚಾಲನೆ ಮಾಡುತ್ತಿರುತ್ತಾರೆ. ತನ್ನ ಕ್ಯಾಬ್ ನಲ್ಲಿದ್ದ ಪಾಕಿಸ್ಥಾನೀ ಆಟಗಾರರನ್ನು ರೆಸ್ಟೋರೆಂಟ್​ಗೆ ಬಿಟ್ಟ ನಂತರ ಅವರ ಕೈಯಿಂದ ಬಾಡಿಗೆಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ.

  ಎಷ್ಟೇ ಒತ್ತಾಯ ಮಾಡಿದರೂ ಭಾರತೀಯ ಡ್ರೈವರ್ ಹಣ ಪಡೆಯಲು ಒಪ್ಪದಿದ್ದಾಗ, ಈ ಐವರೂ ಪಾಕಿಸ್ಥಾನೀ ಆಟಗಾರರು ಕ್ಯಾಬ್ ಚಾಲಕನನ್ನು ತಮ್ಮ ಜೊತೆಯಲ್ಲೇ ರೆಸ್ಟೋರೆಂಟ್​ಗೆ ಕರೆದುಕೊಂಡು ಹೋಗಿ ಜೊತೆಯಲ್ಲೇ ಊಟ ಮಾಡಿಸಿದ್ದಾರೆ.

     Syed Mushtaq Ali Trophy: ಪಾಂಡೆ- ರಾಹುಲ್ ವೈಫಲ್ಯ; ಸೂಪರ್ ಲೀಗ್​ನಲ್ಲಿ ರಾಜ್ಯಕ್ಕೆ ಮೊದಲ ಸೋಲು!

  ಈ ವಿಷಯವನ್ನು ರೆಡಿಯೋ ಉದ್ಘೋಷಕಿ ಅಲಿಸನ್ ಮಿಶೆಲ್ ಅವರು ಆಸೀಸ್ ಮಾಜೀ ಆಟಗಾರ ಮಿಶೆಲ್ ಜಾನ್ಸನ್ ಅವರಿಗೆ ಹೇಳುವ ಮೂಲಕ ಈ ವಿಚಾರ ಬೆಳಕಿಗೆ ಬಂದಿದೆ. ಪಾಕ್ ಕ್ರಿಕೆಟಿಗರ ಈ ನಡೆ ಭಾರತೀಯ ಕ್ಯಾಬ್​​ ಚಾಲಕನಿಗೆ ಮಾತ್ರವಲ್ಲದೇ ಉಭಯ ದೇಶದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.

     First published: