ವಿರಾಟ್​ ಕೊಹ್ಲಿಯಂತೆ ಬ್ಯಾಟ್ ಬೀಸುತ್ತಿರುವ ಪಾಕ್ ಯುವ ಕ್ರಿಕೆಟಿಗ: ವಿಡಿಯೋ ವೈರಲ್

ಇದೀಗ ಪಾಕ್ ತಂಡದ ಆಯ್ಕೆದಾರರ ಕಣ್ಣು ಉಸಾಮಾ ಮೇಲಿದ್ದು, ಮುಂದಿನ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಯುವ ದಾಂಡಿಗನಿಗೆ ಅವಕಾಶ ದೊರೆಯಲಿದೆ ಎನ್ನಲಾಗುತ್ತಿದೆ.

zahir | news18
Updated:May 15, 2019, 9:01 PM IST
ವಿರಾಟ್​ ಕೊಹ್ಲಿಯಂತೆ ಬ್ಯಾಟ್ ಬೀಸುತ್ತಿರುವ ಪಾಕ್ ಯುವ ಕ್ರಿಕೆಟಿಗ: ವಿಡಿಯೋ ವೈರಲ್
@twitter
  • News18
  • Last Updated: May 15, 2019, 9:01 PM IST
  • Share this:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಸಿಡಿಲಬ್ಬರದ ಬ್ಯಾಟಿಂಗ್​​ಗೆ ವಿಶ್ವದಾದ್ಯಂತ ಇರುವ ಕ್ರಿಕೆಟ್​​ ಅಭಿಮಾನಿಗಳು ತಲೆದೂಗಿದ್ದಾರೆ. ಅದರಲ್ಲೂ ಭಾರತದ ತಂಡದ ಸಾಂಪ್ರದಾಯಿಕ ಎದುರಾಳಿ ಪಾಕ್ ಆಟಗಾರರು ಸಹ ಕೊಹ್ಲಿಯ ಬ್ಯಾಟಿಂಗ್ ಚಾಕಚಕ್ಯತೆಯನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಪಾಕಿಸ್ತಾನದಲ್ಲೂ ಕೊಹ್ಲಿ ಸಾಕಷ್ಟು ಫ್ಯಾನ್ಸ್​ಗಳನ್ನು ಸಂಪಾದಿಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಉಸಾಮಾ ಬಲೂಚ್.

ಅಂತರಾಷ್ಟ್ರೀಯ ಕ್ರಿಕೆಟ್​ ಪಾದರ್ಪಣೆಯನ್ನು ಎದುರು ನೋಡುತ್ತಿರುವ ಉಸಾಮಾ ಬ್ಯಾಟ್​ ಬೀಸುವುದನ್ನು ನೋಡಿದ್ರೆ ಒಂದು ಕ್ಷಣ ವಿರಾಟ್​ ಕೊಹ್ಲಿ ಕಣ್ಣು ಮುಂದೆ ಬರುತ್ತಾರೆ. ಥೇಟ್ ಕೊಹ್ಲಿಯಂತೆ ಫುಟ್​ವರ್ಡ್​, ಶಾಟ್​ಗಳ ಮೂಲಕ 18 ರ ಉಸಾಮಾ ಇದೀಗ ಪಾಕ್​ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ವಿರಾಟ್ ಕೊಹ್ಲಿಯ ಕವರ್ ಶಾಟ್​ನ ಪ್ರತಿರೂಪವೆಂಬಂತೆ ಉಸಾಮಾ ಚೆಂಡನ್ನು ಬೌಂಡರಿಗಟ್ಟುವಲ್ಲಿ ನಿಪುಣತೆಯನ್ನು ಪಡೆದಿದ್ದಾರೆ. ಉಸಾಮಾ ಕ್ರೀಸ್​ನಲ್ಲಿದ್ದರೆ, ದೂರದಿಂದ ನೋಡುವವರಿಗೆ ಕೊಹ್ಲಿಯ ಬ್ಯಾಟಿಂಗ್ ಶೈಲಿ ಕಾಣಿಸುವುದರಲ್ಲಿ ಸಂಶಯವೇ ಇಲ್ಲ ಎಂದಿದ್ದಾರೆ ಪಾಕ್ ಕ್ರೀಡಾ ವರದಿಗಾರೊಬ್ಬರು.

ಬಾಲ್ಯದಿಂದಲೂ ಕ್ರಿಕೆಟ್​ ಅನ್ನು ಉಸಿರಾಗಿಸಿಕೊಂಡಿರುವ ಉಸಾಮಾ ಕೊಹ್ಲಿಯಂತೆ ಶ್ರೇಷ್ಠ ಆಟಗಾರನಾಗಬೇಕೆಂಬ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಕೊಹ್ಲಿ ಆಟವನ್ನೇ ನಕಲು ಮಾಡಿ ಹೊಡಿಬಡಿ ಆಟದೊಂದಿಗೆ ಮೈದಾನದಲ್ಲಿ ಮಿಂಚು ಹರಿಸಿದ್ದಾರೆ. ಇತ್ತೀಚೆಗೆ ನಡೆದ ಕರಾಚಿ ಪ್ರಿಮಿಯರ್ ಲೀಗ್​ನಲ್ಲಿ ಈ ಯುವ ಪ್ರತಿಭೆ ಬೆಳಕಿಗೆ ಬಂದಿದ್ದು, ಇದೀಗ ಉಸಾಮಾ ಬ್ಯಾಟಿಂಗ್ ವಿಡಿಯೋ ಭಾರೀ ವೈರಲ್ ಆಗಿದೆ.


ಉಸಾಮಾ, ಬರೀ ಬ್ಯಾಟಿಂಗ್​ನಲ್ಲಿ ಮಾತ್ರ ಕೊಹ್ಲಿಯನ್ನು ಅನುಸರಿಸುತ್ತಿದ್ದಾರೆ ಎಂದರೆ ತಪ್ಪಾಗಬಹುದು. ಏಕೆಂದರೆ ಇತ್ತೀಚೆಗೆ ಜೋಹರ್ ಬಿಯರ್ಸ್ ಪರವಾಗಿ ಉಸಾಮಾ ಕಣಕ್ಕಿಳಿದಾಗ ತಂಡದ ಮೊತ್ತ 5 ವಿಕೆಟ್ ನಷ್ಟಕ್ಕೆ 37 ರನ್. ಈ ಹಂತದಲ್ಲಿ ನಾನಿರುವುದೇ ಬೌಲರ್​ಗಳನ್ನು ದಂಡಿಸಲು ಎಂಬ ರೀತಿಯಲ್ಲಿ ಬ್ಯಾಟ್ ಮಾಡಿದ ಉಸಾಮಾ ಗಳಿಸಿದ್ದು 39 ಎಸೆತಗಳಲ್ಲಿ 69 ರನ್​ಗಳು. ಈ ವೇಳೆ ಯುವ ಆಟಗಾರ ಕೊಹ್ಲಿಯಂತೆ ಆತ್ಮ ವಿಶ್ವಾಸದಲ್ಲಿ ಬ್ಯಾಟ್ ಬೀಸಿದ್ದು ಎಲ್ಲರನ್ನು ಅಚ್ಚರಿಗೆ ದೂಡಿತ್ತು.ಇದೀಗ ಪಾಕ್ ತಂಡದ ಆಯ್ಕೆದಾರರ ಕಣ್ಣು ಉಸಾಮಾ ಮೇಲಿದ್ದು, ಮುಂದಿನ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಯುವ ದಾಂಡಿಗನಿಗೆ ಅವಕಾಶ ದೊರೆಯಲಿದೆ ಎನ್ನಲಾಗುತ್ತಿದೆ. ಪಾಕ್ ಪರವಾಗಿ ಅಂತರಾಷ್ಟ್ರೀಯ ಪಂದ್ಯವಾಡಬೇಕೆಂಬ ಕನಸು ಕಂಡಿರುವ ಯುವ ಕ್ರಿಕೆಟಿಗನ ಆಕ್ರಮಣಕಾರಿ ಬ್ಯಾಟಿಂಗ್ ವಿಡಿಯೋ ಇದೀಗ ಭಾರತದಲ್ಲೂ ವೈರಲ್​ ಆಗಿದ್ದು, ಉಸಾಮಾ ಬ್ಯಾಟಿಂಗ್​ ಶೈಲಿಯಲ್ಲಿ ಕೊಹ್ಲಿಯ ಹೋಲಿಕೆ ಇದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 'ಗಜ'ನ ಫೋಟೋಗೆ ದುಬಾರಿ ಬೆಲೆ ಕೊಟ್ಟ ಚಿಕ್ಕಣ್ಣ: ಕಾಮಿಡಿ ನಟನ ಕಳಕಳಿಗೆ 'ಡಿ ಬಾಸ್' ಬಹುಪರಾಕ್

First published:May 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading