Shoaib Malik: ಪಾಕಿಸ್ತಾನ್ ಕ್ರಿಕೆಟಿಗ ಶೊಯೇಬ್ ಮಲಿಕ್ ಕಾರು ಅಪಘಾತ..!

ಪಾಕ್ ತಂಡವನ್ನು ಪ್ರತಿನಿಧಿಸಿರುವ 38 ವರ್ಷ ಶೋಯೆಬ್ ಮಲಿಕ್ 287 ಏಕದಿನ ಪಂದ್ಯಗಳಿಂದ 7534 ರನ್, 158 ವಿಕೆಟ್‌ ಕಬಳಿಸಿದ್ದಾರೆ. ಹಾಗೆಯೇ 116 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 2335 ರನ್, 28 ವಿಕೆಟ್ ಉರುಳಿಸಿದ್ದಾರೆ.

ಶೋಯೆಬ್ ಮಲಿಕ್ ಕಾರ್

ಶೋಯೆಬ್ ಮಲಿಕ್ ಕಾರ್

 • Share this:
  ಪಾಕಿಸ್ತಾನ್ ಕ್ರಿಕೆಟ್ ತಂಡದ ಸ್ಟಾರ್ ಆಲ್​ರೌಂಡರ್ ಶೋಯೆಬ್ ಮಲಿಕ್ ಅವರ ಕಾರು ಅಪಘಾತಕ್ಕೀಡಾಗಿದೆ. 2021ರ ಪಾಕಿಸ್ತಾನ್ ಸೂಪರ್ ಲೀಗ್ ಡ್ರಾಫ್ಟ್​ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುವಾಗ ಈ ಘಟನೆ ಸಂಭವಿಸಿದೆ. ಲಾಹೋರ್​ನ ಸ್ಥಳೀಯ ರೆಸ್ಟೋರೆಂಟ್ ಬಳಿ ನಿಲ್ಲಿಸಿದ್ದ ಟ್ರಕ್‌ಗೆ ಮಲಿಕ್ ಕಾರು ಗುದ್ದಿದ್ದು, ಗಂಭೀರ ಗಾಯದಿಂದ ಪಾರಾಗಿದ್ದಾರೆ.

  ಶೊಯೇಬ್ ಮಲಿಕ್ ಓಡಿಸುತ್ತಿದ್ದ ಕಾರು ಸ್ಪೋರ್ಟ್​​ ಕಾರಾಗಿದ್ದು, ಈ ವೇಳೆ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಮಲಿಕ್, ನಾನು ಸಂಪೂರ್ಣ ಕ್ಷೇಮವಾಗಿದ್ದೇನೆ. ಇದೊಂದು ಸಣ್ಣ ಅಪಘಾತ. ಸರ್ವಶಕ್ತನಾದ ದೇವರು ಕಾಪಾಡಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲಾ ಪ್ರೀತಿ ಮತ್ತು ಕಾಳಜಿಗೆ ನಾನು ಚಿರಋಣಿ' ಎಂದು ತಿಳಿಸಿದ್ದಾರೆ.


  ಶೋಯೆಬ್ ಮಲಿಕ್ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಪತಿ. ಪಾಕ್ ತಂಡವನ್ನು ಪ್ರತಿನಿಧಿಸಿರುವ 38 ವರ್ಷ ಶೋಯೆಬ್ ಮಲಿಕ್ 287 ಏಕದಿನ ಪಂದ್ಯಗಳಿಂದ 7534 ರನ್, 158 ವಿಕೆಟ್‌ ಕಬಳಿಸಿದ್ದಾರೆ. ಹಾಗೆಯೇ 116 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 2335 ರನ್, 28 ವಿಕೆಟ್ ಉರುಳಿಸಿದ್ದಾರೆ. ಇನ್ನು ಹಲವು ವರ್ಷಗಳ ಕಾಲ ಪಾಕ್ ತಂಡದ ತಂಡನಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ 2019ರ ವಿಶ್ವಕಪ್ ಕಪ್ ಬಳಿಕ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.
  Published by:zahir
  First published: