Viral News: ವಿಶ್ವಕಪ್ ಟಿ 20 ಕ್ರಿಕೆಟ್‍ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವು ‘ಇಸ್ಲಾಂ ವಿಜಯ’ ಎಂದ ಪಾಕ್ ಸಚಿವ

India vs Pakistan T20 Match: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ, ಪಾಕಿಸ್ತಾನವು ಭಾರತದ ವಿರುದ್ಧ ಗೆದ್ದಿದ್ದೇ ತಡ, ಈ ಗೆಲುವು ‘ಇಸ್ಲಾಂನ ವಿಜಯ’ ಎಂದು ಶೇಖ್ ರಶೀದ್ (Sheikh Rasheed) ಅವರು ಹೇಳಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Stadium) ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ, ಪಾಕಿಸ್ತಾನವು ಭಾರತದ ವಿರುದ್ಧ ಗೆದ್ದಿದ್ದೇ ತಡ, ಈ ಗೆಲುವು ‘ಇಸ್ಲಾಂನ ವಿಜಯ’ (Islam Victory) ಎಂದು ಶೇಖ್ ರಶೀದ್ ಹೇಳಿಕೆ ನೀಡಿದ್ದಾರೆ. ವಿಶ್ವಕಪ್ ಕ್ರಿಕೆಟ್‍ನಲ್ಲಿ ಸದಾ ಭಾರತ ವಿರುದ್ಧ ಸೋಲುತ್ತಾ ಬಂದಿರುವ ಪಾಕಿಸ್ತಾನ ಈ ಬಾರಿ ಗೆಲುವು ಸಾಧಿಸಿದೆ. ಇದುವರೆಗೆ ಕಂಡೇ ಇರದ ಗೆಲುವಿನಿಂದಾಗಿ ಪಾಕಿಸ್ತಾನದ ಮಂತ್ರಿಯೊಬ್ಬರು ಖುಷಿಯಿಂದ ಕುಣಿದಾಡುತ್ತಿದ್ದಾರೆ. ಆ ಮಂತ್ರಿ ಬೇರೆ ಯಾರೂ ಅಲ್ಲ, ಸದಾ ವಿವಾದಿನ ಹೇಳಿಕೆಗಳನ್ನು ನೀಡುವುದಕ್ಕೆ ಕುಖ್ಯಾತಿ ಪಡೆದಿರುವ ಪಾಕಿಸ್ತಾನದ ಆಂತರಿಕ ಸಚಿವ ಶೇಕ್ ರಶೀದ್. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ, ಪಾಕಿಸ್ತಾನವು ಭಾರತದ ವಿರುದ್ಧ ಗೆದ್ದಿದ್ದೇ ತಡ, ಈ ಗೆಲುವು ‘ಇಸ್ಲಾಂನ ವಿಜಯ’ ಎಂದು ಶೇಖ್ ರಶೀದ್ (Sheikh Rasheed) ಅವರು ಹೇಳಿದ್ದಾರೆ.

    ಪಾಕಿಸ್ತಾನ ಕ್ರಿಕೆಟ್ ತಂಡವು, ಭಾರತ ತಂಡದೊಂದಿಗಿನ 2021 ರ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ 10 ವಿಕೆಟ್‍ಗಳಿಂದ ಗೆದ್ದ ಬೆನ್ನಲ್ಲೆ ರಶೀದ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಶೇಖ್ ಅವರ ಹೇಳಿಕೆ ಇರುವ ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಂದ್ಯಾವಳಿಯ ಸಮಯದಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಎಲ್ಲಾ ಮುಸ್ಲಿಮರು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದರು ಎಂದು ಅವರು ಆ ವಿಡಿಯೋದಲ್ಲಿ ಹೇಳಿದ್ದಾರೆ.

    ಪಾಕಿಸ್ತಾನ ತಂಡಕ್ಕೆ ಸಲಾಂ:

    “ನಾನು ಇಡೀ ಪಾಕಿಸ್ತಾನದ ಜನತೆಗೆ ಈ ಗೆಲುವಿಗಾಗಿ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ತಮ್ಮ ಸಾಂಪ್ರದಾಯಿಕ ಎದುರಾಳಿಯನ್ನು ಸೋಲಿಸಿರುವ ಪಾಕಿಸ್ತಾನಿ ತಂಡಕ್ಕೆ ನಾನು ಸಲಾಂ ಮಾಡುತ್ತೇನೆ. ನಮ್ಮ ಪಾಲಿಗೆ ಇಂದಿನ ಪಂದ್ಯವೇ ಅಂತಿಮ ಪಂದ್ಯವಾಗಿತ್ತು” ಎಂದು ಸಚಿವ ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

    ಪಾಕಿಸ್ತಾನದ ಆಟಗಾರರಾದ ಮೊಹಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಆಜಮ್ ಅವರ ಅದ್ಭುತ ಪ್ರದರ್ಶನದ ನಂತರ, ಶೇಕ್ ರಶೀದ್ ಅವರ ಸಂದೇಶವುಳ್ಳ ಈ ವಿಡಿಯೋವನ್ನು ಅಪ್‍ಲೋಡ್ ಮಾಡಲಾಗಿದೆ.ಈ ಪಂದ್ಯಾಟದಲ್ಲಿ ಬಾಬರ್ ಆಜಮ್ (Babar Azam) ಮತ್ತು ರಿಜ್ವಾನ್ (Rizwan) ಅರ್ಧ ಶತಕ ಬಾರಿಸಿದರು ಮತ್ತು ಶಹೀನ್ ಆಫ್ರಿದಿ ಮೂರು ವಿಕೆಟ್‍ಗಳನ್ನು ಕಬಳಿಸಿದರು. ಈ ಹಿಂದೆ ಟಿ 20 ವಿಶ್ವ ಕಪ್‍ನಲ್ಲಿ (T20 World Cup 2021) ಭಾರತದ ವಿರುದ್ಧ ಪಾಕಿಸ್ತಾನ ಸತತ ಐದು ಪಂದ್ಯಗಳಲ್ಲಿ ಸೋತಿತ್ತು.

    ಇದನ್ನೂ ಓದಿ: ಎಂಎಸ್ ಧೋನಿ ನುಡಿದ ಭವಿಷ್ಯ ಐದು ವರ್ಷ ಬಳಿಕ ನಿಜ ಆಯ್ತು

    ಈ ರೀತಿಯ ಹೇಳಿಕೆಗಳು ಮೊದಲೇನಲ್ಲ:

    ಶೇಖ್ ರಶೀದ್ ಅವರು ಸದಾ ಭಾರತದ ವಿರುದ್ಧ ಸೇರಿದಂತೆ, ಬೇರೆ ಬೇರೆ ಸಂಗತಿಗಳ ಕುರಿತು ವಿವಾದಿತ ಹಾಗೂ ವಿಲಕ್ಷಣ ಹೇಳಿಕೆಗಳನ್ನು ನೀಡುವ ಮೂಲಕ ಅನೇಕ ಬಾರಿ ಸಾಮಾಜಿಕ ಮಾಧ್ಯಮದಲ್ಲಿ (Social Media) ನಗೆಪಾಟಲಿಗೆ ಈಡಾಗಿದ್ದಾರೆ. ಅವರ ಚಿತ್ರ ವಿಚಿತ್ರ ವರ್ತನೆಗಳು ಅಥವಾ ಹೇಳಿಕೆಗಳುಳ್ಳ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ (Viral Video).

    ಇದನ್ನೂ ಓದಿ: T-20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲು; ಪಂಜಾಬ್‌ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ!

    ಪಾಕಿಸ್ತಾನದ ಗೆಲುವಿಗೆ ಧರ್ಮದ ಬಣ್ಣವನ್ನು ನೀಡಿರುವ ಶೇಖ್ ರಶೀದ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. “ ಅರೇ, ತುಂಬಾ ಭಾವುಕರಾಗಿಬಿಟ್ಟಿರಿ ರಶೀದ್ ಸಾಹೇಬರೇ. ಅರೇ ಇದು ಕ್ರಿಕೆಟ್ ಮ್ಯಾಚ್ ಆಗಿತ್ತು, ಇದಕ್ಕೂ ಇಡೀ ವಿಶ್ವದ ಮುಸ್ಲಿಮರಿಗೂ ಏನು ಸಂಬಂಧ? ಬಹುಷಃ 1-2 ಶೇಕಡ ಭಾರತೀಯ ಮುಸ್ಲಿಮರು ಪಾಕಿಸ್ತಾನವನ್ನು ಬೆಂಬಲಿಸಬಹುದು, ಉಳಿದವರು ಯಾವಾಗಲೂ ತಮ್ಮ ದೇಶ ಮತ್ತು ತಮ್ಮ ದೇಶದ ತಂಡವನ್ನೇ ಪ್ರೀತಿಸುತ್ತಾರೆ. ಆಟದಲ್ಲಿ ರಾಜಕೀಯವನ್ನು ತೂರಿಸಬೇಡಿ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದರೆ, “ಹಿಂದೂಸ್ತಾನದ ಮುಸ್ಲಿಮರು ನಿಮ್ಮ ಜೊತೆಗಿಲ್ಲ, ನಿಮ್ಮ ಹೇಳಿಕೆಯನ್ನು ಹಿಂಪಡೆಯಿರಿ” ಎಂದು ಬರೆದಿದ್ದಾರೆ.
    Published by:Sharath Sharma Kalagaru
    First published: