Babar Azam: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಕಾಮಕಾಂಡ ಬಯಲು; ಹಳೇ ಕತೆ ಬಿಚ್ಚಿಟ್ಟ ಮಾಜಿ ಪ್ರೇಯಸಿ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಬಾಬರ್ ಅಜಂ

ಬಾಬರ್ ಅಜಂ

 • Share this:
  ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ಒಂದೊಂದೆ ಕರ್ಮಕಾಂಡ ಬಯಲಾಗುತ್ತಿದೆ. ಹಲವು ತಿಂಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಆಟಗಾರ ಇಮಾಮ್ ಉಲ್ ಹಕ್ ಅವರು ಅನೇಕ ಯುವತಿಯರೊಂದಿಗೆ ಸಂಬಂಧ ಹೊಂದಿ ಮೋಸ ಮಾಡಿದ್ದಾರೆ ಎಂದು ಟ್ವಿಟ್ಟರ್ ಖಾತೆದಾರರೊಬ್ಬರು ಸಾಕ್ಷಿ ಸಮೇತ ಸಾಭೀತು ಮಾಡಿದ್ದರು. ಇದಾದ ಬೆನ್ನಲ್ಲೇ ಯುವ ವೇಗಿ ಶಾಹಿನ್ ಅಫ್ರಿದಿ ತನ್ನ ಗುಪ್ತಾಂಗ ತೋರಿಸಿದ್ದಲ್ಲದೆ ಹಸ್ತಮೈಥುನ ಮಾಡಿದ್ದಾರೆ ಎಂದು ಪಾಕ್ ಟಿಕ್​ಟಾಕ್​ ಮಾಡೆಲ್ ಹರೀಮ್ ಷಾ ತನಗಾಗಿರುವ ನೋವಿನ ಬಗ್ಗೆ ಹೇಳಿಕೊಂಡಿದ್ದರು.

  ಸದ್ಯ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆತ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಗರ್ಭವತಿಯನ್ನಾಗಿ ಮಾಡಿದ್ದ, ನನಗೆ ಹಲ್ಲೆಯನ್ನು ನಡೆಸಿ ಬೆದರಿಕೆಯನ್ನು ಒಡ್ಡಿ ನನ್ನನ್ನು ಬಳಸಿಕೊಂಡಿದ್ದ ಎಂದು ಆರೋಪವನ್ನು ಮಾಡಿದ್ದಾರೆ.

  India vs Australia 2nd ODI Live

  ನಾನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂನ ಕ್ಲಾಸ್‌ಮೇಟ್ ಎಂದು ಹೇಳಿಕೊಂಡ ಮಹಿಳೆ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. "2010ರಲ್ಲಿ ಬಾಬರ್ ಅಜಂ ನನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದರು. ಆದರೆ, ಕ್ರಿಕೆಟಿಗನಾಗಿ ಖ್ಯಾತಿ ಪಡೆದ ನಂತರ ಭರವಸೆಯಿಂದ ಹಿಂದಕ್ಕೆ ಸರಿದಿದ್ದಾರೆ. ಸಾಕಷ್ಟು ಬಾರಿ ಲೈಂಗಿಕ ಕಿರುಕುಳವನ್ನು ನೀಡಿದ್ದು ಪೊಲೀಸರಿಗೆ ದೂರು ನೀಡಲು ಹೋದಾಗ ಜೀವಬೆದರಿಕೆಯನ್ನೂ ಹಾಕಿದ್ದಾರೆ."

  "ನಾನು ಬಾಬರ್​ಗೆ ಅನೇಕ ಬಾರಿ ಸಹಾಯ ಮಾಡಿದ್ದೇನೆ. ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಸಾಕಷ್ಟು ಹಣಕಾಸಿನ ವ್ಯವಸ್ಥೆ ಕೂಡ ಮಾಡಿದ್ದೆ. ಆ ಸಂದರ್ಭ ಬಾಬರ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ, ನನ್ನನ್ನು ಗರ್ಭವತಿಯನ್ನಾಗಿ ಮಾಡಿ ಬಳಸಿಕೊಂಡಿದ್ದ" ಎಂದು ಆರೋಪವನ್ನು ಮಾಡಿದ್ದಾರೆ.

  ಪಾಕಿಸ್ತಾನದ ಖ್ಯಾತ ಪತ್ರಕರ್ತ ಸಾಜ್ ಸಿದ್ದೀಕ್ ಮಹಿಳೆ ಪತ್ರಿಕಾಗೋಷ್ಠಿ ನಡೆಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  ಪಾಕ್ ಕ್ರಿಕೆಟಿಗರ ಮೇಲೆ ಈರೀತಿಯ ಆರೋಪ ಕೇಳಿಬರುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಇಮಾಮ್ ಉಲ್ ಹಖ್, ಏಳರಿಂದ ಎಂಟು ಯುವತಿಯರೊಂದಿಗೆ ವಾಟ್ಸ್​ಆ್ಯಪ್​ನಲ್ಲಿ ಸಂಬಂಧ ಹೊಂದಿದ್ದಾರೆ ಎಂಬ ಖಾಸಗಿ ಚಾಟಿಂಗ್​​ನ ಸ್ಕ್ರೀನ್​​ ಶಾಟ್​ಗಳನ್ನು ಟ್ವಿಟ್ಟರ್​​ನಲ್ಲಿ ಮಹಿಳೆಯೊಬ್ಬರು ಅಪ್ಲೋಡ್ ಮಾಡಿದ್ದರು.

  ಪಾಕ್ ತಂಡದ ಸ್ಟಾರ್ ಯುವ ವೇಗಿ ಶಾಹಿನ್ ಅಫ್ರಿದಿ ಮೇಲೂ ಆರೋಪ ಕೇಳಿಬಂದಿತ್ತು. ಫೆರಿಹಾ ಎಂಬರು ‘ಫ್ಲರ್ಟ್​​ ಮಾಡುವ ವಿಚಾರದಲ್ಲಿ ಶಾಹಿನ್ ಒಂದುರೀತಿಯ ಸಮುದ್ರದ ತಿಮಿಂಗಿಲವಿದ್ದಂತೆ' ಎಂದಿದ್ದರು.
  Published by:Vinay Bhat
  First published: