• Home
  • »
  • News
  • »
  • sports
  • »
  • PSL 2022: ಕ್ಯಾಚ್​ ಬಿಟ್ಟಿದ್ದಕ್ಕೆ ಕಪಾಳಕ್ಕೆ ಹೊಡೆದ್ಬಿಟ್ಟ ಬೌಲರ್​, ಲೋ.. ನೀನೇನ್​ ಆಟಗಾರನಾ? ಎಂದು ನೆಟ್ಟಿಗರಿಂದ ಕ್ಲಾಸ್​!

PSL 2022: ಕ್ಯಾಚ್​ ಬಿಟ್ಟಿದ್ದಕ್ಕೆ ಕಪಾಳಕ್ಕೆ ಹೊಡೆದ್ಬಿಟ್ಟ ಬೌಲರ್​, ಲೋ.. ನೀನೇನ್​ ಆಟಗಾರನಾ? ಎಂದು ನೆಟ್ಟಿಗರಿಂದ ಕ್ಲಾಸ್​!

ಕಪಾಳಕ್ಕೆ ಹೊಡೆದ ಬೌಲರ್​

ಕಪಾಳಕ್ಕೆ ಹೊಡೆದ ಬೌಲರ್​

ಕ್ಯಾಚ್​ ಬಿಟ್ಟ ಅಂತ ಅದೇ ತಂಡದ ಬೌಲರ್​, ಅದೇ ತಂಡದ ಆಟಗಾರನಿಗೆ ಕಪಾಳಕ್ಕೆ ಹೊಡೆದಿದ್ದಾನೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ. ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಸ್ಟಾರ್ ಬೌಲರ್ ಹ್ಯಾರಿಸ್ ರೌಫ್ ಮೈದಾನದಲ್ಲೇ ತಮ್ಮದೇ ತಂಡದ ಆಟಗಾರ ಕಮ್ರಾನ್ ಗುಲಾಮ್ ಅವರ ಕಪಾಳಕ್ಕೆ ಹೊಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ.

ಮುಂದೆ ಓದಿ ...
  • Share this:

ಕ್ರಿಕೆಟ್ (Cricket)​ ಜೆಂಟಲ್​ಮ್ಯಾನ್​ ಗೇಮ್ (Gentleman Game​) ಅಂತ ಎಲ್ಲರಿಗೂ ಗೊತ್ತು. ಬೇರೆ ಕ್ರೀಡೆಗಳಲ್ಲಿ ಇರುವಷ್ಟು ಗಲಾಟೆ (Fight) ಕ್ರಿಕೆಟ್​ನಲ್ಲಿ ಆಗುವುದಿಲ್ಲ. ಹಾಗಂತ ಗಲಾಟೆಯೆ ಆಗುವುದಿಲ್ಲ ಅಂತಲ್ಲ, ಕೆಲವೊಂದು ಬಾರಿ ಕ್ರಿಕೆಟ್​ ಆಟಗಾರರು ಕೋಪದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುವುದನ್ನು ನೋಡಿದ್ದೇವೆ. ಆದರೆ, ಪರಸ್ಪರ ಹೊಡೆದಾಡುವ ಮಟ್ಟಕ್ಕೆ ಕ್ರಿಕೆಟ್​ ಆಟದಲ್ಲಿ ನಡೆದಿಲ್ಲ. ತಂಡದ ಆಟಗಾರ ಕ್ಯಾಚ್ ​(Catch) ಬಿಟ್ಟಾಗ ಬೈಯ್ಯುವುದು ಕಾಮನ್​. ಆತ ನಿಂತಿರುವ ಜಾಗದಿಂದ ಮತ್ತೊಂದು ಜಾಗಕ್ಕೆ ತಂಡದ ನಾಯಕ ಕಳುಹಿಸಿರುವುದನ್ನು ನೋಡಿದ್ದೇವೆ. ಶ್ರಿಶಾಂತ್​ ಹಾಗೂ ಹರಭಜನ್​ ಸಿಂಗ್​ ಗಲಾಟೆ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಆದರೆ, ಪಾಕಿಸ್ತಾನ ಪ್ರೀಮಿಯರ್​ ಲೀಗ್​(Pakistan Premier League)ನಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ. ಕ್ಯಾಚ್​ ಬಿಟ್ಟ ಅಂತ ಅದೇ ತಂಡದ ಬೌಲರ್ (Bowler)​, ಅದೇ ತಂಡದ ಆಟಗಾರನಿಗೆ ಕಪಾಳಕ್ಕೆ ಹೊಡೆದಿದ್ದಾನೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ. ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಸ್ಟಾರ್ ಬೌಲರ್ ಹ್ಯಾರಿಸ್ ರೌಫ್ (Harish Rauf) ಮೈದಾನದಲ್ಲೇ ತಮ್ಮದೇ ತಂಡದ ಆಟಗಾರ ಕಮ್ರಾನ್ ಗುಲಾಮ್ (Kamran Ghualm) ಅವರ ಕಪಾಳಕ್ಕೆ ಹೊಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ.


ಕಮ್ರಾನ್​ ಗುಲಾಮ್​ ಕಪಾಳಕ್ಕೆ ಬಾರಿಸಿದ ಹ್ಯಾರಿಸ್​ ರೌಫ್​!


ಕ್ರಿಕೆಟ್ ಜಗತ್ತು ತಲೆ ತಗ್ಗಿಸುವಂತಹ ಘಟನೆಗೆ ಪಾಕ್ ಸೂಪರ್ ಲೀಗ್​ ಸಾಕ್ಷಿಯಾಗಿದೆ. ಪಾಕ್ ಸ್ಟಾರ್ ಬೌಲರ್ ಹ್ಯಾರಿಸ್ ರೌಫ್ (Haris Rauf) ಮೈದಾನದಲ್ಲೇ ತಮ್ಮದೇ ತಂಡದ ಆಟಗಾರ ಕಮ್ರಾನ್ ಗುಲಾಮ್ ಅವರ ಕಪಾಳಕ್ಕೆ ಹೊಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ. ಜಂಟಲ್ ಮ್ಯಾನ್ ಗೇಮ್ ಕ್ರಿಕೆಟ್​ನಲ್ಲಿ ಈ ರೀತಿಯ ಘಟನೆ ನಡೆದಿರುವುದು ಅನೇಕ ಕ್ರಿಕೆಟ್ ಪಂಡಿತರ ಮತ್ತು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಪಿಎಸ್​ಎಲ್ 2022ರ ಸೋಮವಾರ ರಾತ್ರಿ ನಡೆದ ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ ನಡುವಣ ರೋಚಕ ಪಂದ್ಯದಲ್ಲಿ ಸಂಭವಿಸಿದೆ.


ಇದನ್ನೂ ಓದಿ : ಎಲ್ಲಾ ಮಾದರಿಯ ಕ್ರಿಕೆಟ್​​ಗೆ ಕನ್ನಡತಿ ವನಿತಾ ನಿವೃತ್ತಿ ಘೋಷಣೆ


ಕ್ಯಾಚ್​ ಬಿಟ್ಟ ಅಂತ ಕಪಾಳಕ್ಕೆ ಹೊಡೆದು ಬಿಟ್ಟ ಹ್ಯಾರೀಸ್​!


ಪೇಶಾವರ್ ಝಲ್ಮಿ ಬ್ಯಾಟಿಂಗ್​​ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಲಾಹೋರ್ ಖಲಂದರ್ಸ್ ತಂಡದ ಬೌಲರ್ ಹ್ಯಾರಿಸ್ ರೌಫ್ ಓವರ್​ನಲ್ಲಿ ಪೇಶಾವರ್ ತಂಡದ ಬ್ಯಾಟರ್ ಹರ್ಜತುಲ್ಲಾ ಝಝಾಯ್ ಅವರ ಕ್ಯಾಚನ್ನು ಕಮ್ರಾನ್ ಗುಲಾಮ್  ಕೈಚೆಲ್ಲಿದರು. ಇದರಿಂದ ರೌಫ್ ಕೋಪಗೊಂಡರು. ನಂತರ ಇದೇ ಓವರ್​ನಲ್ಲಿ ಮತ್ತೊಬ್ಬ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಅನ್ನು ರೌಫ್ ಪಡೆದುಕೊಂಡರು. ಫಾಹಾದ್ ಅಹ್ಮದ್ ಅದ್ಭುತ ಕ್ಯಾಚ್ ಹಿಡಿದರು.


ವಿಕೆಟ್ ಪಡೆದ ಖುಷಿಯಲ್ಲಿ ಸಹ ಆಟಗಾರರ ಜೊತೆ ರೌಫ್ ಸಂಭ್ರಮಿಸುತ್ತಿರುವಾಗ ಅಲ್ಲಿಗೆ ಕಮ್ರಾನ್ ಗುಲಾಮ್ ಕೂಡ ಖುಷಿಯಲ್ಲಿ ಪಾಲ್ಗೊಳ್ಳಲು ಬಂದರು. ಇನ್ನೇನು ಗುಲಾಮ್ ಕೈಕೊಟ್ಟು ಶುಭಕೋರಬೇಕು ಎನ್ನುವಷ್ಟರಲ್ಲಿ ರೌಫ್ ಇವರ ಕಪಾಳಕ್ಕೆ ಹೊಡೆದಿದ್ದಾರೆ.ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.


ಇದನ್ನೂ ಓದಿ:  ಸೂರ್ಯಕುಮಾರ್ ಭರ್ಜರಿ ಆಟದಿಂದ T-20 ಸರಣಿ ಕ್ಲೀನ್-ಸ್ವೀಪ್ ಮಾಡಿದ ಟೀಮ್ ಇಂಡಿಯಾ


ಪಾಕಿಸ್ತಾನ್​ ಲೀಗ್​ ಬಿಟ್ಟು ಹೋಗಿದ್ದ ಜೇಮ್ಸ್​ ಫಾಕ್ನರ್​


ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ (Pakistan Super League) ಮತ್ತೊಂದು ನಾಚಿಕೆ ಗೇಡಿನ ಘಟನೆ ನಡೆದಿದೆ. ಮೊನ್ನೆಯಷ್ಟೆ ಆಸ್ಟ್ರೇಲಿಯಾದ ಆಲ್​ರೌಂಡರ್​ ಜೇಮ್ಸ್ ಫಾಕ್ನರ್ ಅವರು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಒಪ್ಪಂದದಂತೆ ಹಣ ನೀಡದೇ ವಂಚಿಸಿದೆ ಎಂದು ಆರೋಪಿಸಿ ​ಲೀಗ್​ ಹಂತದಲ್ಲೇ ಟೂರ್ನಿಯನ್ನು ತ್ಯಜಿಸಿ ತವರಿಗೆ ಹಿಂತಿರುಗಿದ್ದರು. ಈ ಮೂಲಕ ಪಿಎಸ್​ಎಲ್​ನ ಕರಾಳ ಮುಖವನ್ನು ಬಯಲು ಮಾಡಿದ್ದರು.

Published by:Vasudeva M
First published: