ಪಾಕಿಸ್ತಾನ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್​ಗೆ 3 ವರ್ಷ ನಿಷೇಧ

ಈ ನಿಷೇಧದ ಅವಧಿ ಫೆ. 20ರಿಂದಲೇ ಪ್ರಾರಂಭವಾಗುತ್ತದೆ. ಅಂದರೆ 2023, ಫೆ. 20ರವರೆಗೂ ಉಮರ್ ಅಕ್ಮಲ್ ಅವರು ಯಾವುದೇ ಮಾದರಿಯ ಕ್ರಿಕೆಟ್ ಆಡುವಂತಿಲ್ಲ.

news18-kannada
Updated:April 27, 2020, 8:17 PM IST
ಪಾಕಿಸ್ತಾನ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್​ಗೆ 3 ವರ್ಷ ನಿಷೇಧ
ಪಾಕಿಸ್ತಾನ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್
  • Share this:
ಮ್ಯಾಚ್ ಫಿಕ್ಸಿಂಗ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ಮೂರು ವರ್ಷ ಕಾಲ ನಿಷೇಧಿಸಲಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ. ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದ್ದುದನ್ನು ಆಡಳಿತದ ಗಮನಕ್ಕೆ ತರದ ಆರೋಪ ಅಕ್ಮಲ್ ಮೇಲಿತ್ತು. ಪಾಕ್ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ ಅಕ್ಮಲ್ ಅವರ ಮೇಲೆ ನಿಷೇಧ ಹೇರುವ ನಿರ್ಧಾರ ಪ್ರಕಟಿಸಿತು.

ಬುಕ್ಕಿ ಅಥವಾ ಯಾರೇ ಆಗಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಆಟಗಾರನ ಬಳಿ ಬಂದು ಕೇಳಿದರೆ, ಆ ವಿಚಾರವನ್ನು ಆ ಆಟಗಾರ ಮಂಡಳಿಯ ಗಮನಕ್ಕೆ ತರಬೇಕು. ಇದು ಮಂಡಳಿಯ ಶಿಷ್ಟಾಚಾರಗಳಲ್ಲೊಂದಾಗಿದೆ. ಆದರೆ, ಅಕ್ಮಲ್ ಅವರು ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿರುವುದು ಗೊತ್ತಿದ್ದರೂ ಆಡಳಿತದ ಗಮನಕ್ಕೆ ತಂದಿರಲಿಲ್ಲ. ಆದ್ದರಿಂದ ಭ್ರಷ್ಟಾಚಾರ ವಿರೋಧಿ ನಿಯಮಗಳ ಪ್ರಕಾರ ಪಾಕ್ ಕ್ರಿಕೆಟ್ ಮಂಡಳಿಯು ಫೆಬ್ರುವರಿ 20ರಂದು ಉಮರ್ ಅವರನ್ನು ನಿಷೇಧಿಸಿತ್ತು. ಈಗ ಶಿಸ್ತು ಪಾಲನಾ ಸಮಿತಿ 3 ವರ್ಷ ನಿಷೇಧ ಪ್ರಕಟಿಸಿದೆ. ಈ ನಿಷೇಧದ ಅವಧಿ ಫೆ. 20ರಿಂದಲೇ ಪ್ರಾರಂಭವಾಗುತ್ತದೆ. ಅಂದರೆ 2023, ಫೆ. 20ರವರೆಗೂ ಉಮರ್ ಅಕ್ಮಲ್ ಅವರು ಯಾವುದೇ ಮಾದರಿಯ ಕ್ರಿಕೆಟ್ ಆಡುವಂತಿಲ್ಲ.

ಇದನ್ನೂ ಓದಿ : ಜ್ವರ, ನೆಗಡಿ, ಕೆಮ್ಮಷ್ಟೇ ಅಲ್ಲ ಇನ್ನೂ ಇವೆ ಕೊರೋನಾ ಲಕ್ಷಣಗಳು: ಅಮೆರಿಕದ CDC ಪಟ್ಟಿ

ಉಮರ್ ಅಕ್ಮಲ್ 2009ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸೆಂಚುರಿ ಸಿಡಿಸಿದ್ದರು. ಕಳೆದ ವರ್ಷ ಶ್ರೀಲಂಕಾ ವಿರುದ್ಧ ಎರಡು ಟಿ20 ಪಂದ್ಯ ಆಡಿದ್ದೇ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈವರೆಗೂ ಅವರು 16 ಟೆಸ್ಟ್, 121 ಏಕದಿನ ಹಾಗೂ 84 ಟಿ20 ಪಂದ್ಯಗಳನ್ನ ಪಾಕ್ ಪರವಾಗಿ ಆಡಿದ್ಧಾರೆ.
First published: April 27, 2020, 8:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading