Game Changer: ಆತನೊಬ್ಬ ಸ್ವಾರ್ಥಿ: ಅಫ್ರಿದಿ ವಿರುದ್ಧ ತಿರುಗಿಬಿದ್ದ ಪಾಕ್​ ಕ್ರಿಕೆಟಿಗ

ಪಾಕ್ ತಂಡದ ಸ್ಪೋಟಕ ಆಟಗಾರರಾಗಿ ಗುರುತಿಸಿಕೊಂಡಿದ್ದ ಅಫ್ರಿದಿ ಇತ್ತೀಚೆಗಷ್ಟೇ ತಮ್ಮ ವೃತ್ತಿ ಜೀವನದ ಕಹಾನಿಗಳನ್ನೊಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿದ್ದರು.

zahir | news18
Updated:May 9, 2019, 2:45 PM IST
Game Changer: ಆತನೊಬ್ಬ ಸ್ವಾರ್ಥಿ: ಅಫ್ರಿದಿ ವಿರುದ್ಧ ತಿರುಗಿಬಿದ್ದ ಪಾಕ್​ ಕ್ರಿಕೆಟಿಗ
@Scroll.in
  • News18
  • Last Updated: May 9, 2019, 2:45 PM IST
  • Share this:
ಕುತೂಹಲದೊಂದಿಗೆ ಭಾರೀ ವಿವಾದ ಸೃಷ್ಟಿಸಿರುವ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಆತ್ಮಚರಿತ್ರೆ 'ಗೇಮ್​ ಚೇಂಜರ್' ವಿರುದ್ಧ ಪಾಕಿಸ್ತಾನದ ಮಾಜಿ ಆಟಗಾರ ಇಮ್ರಾನ್ ಫರ್ಹಾತ್ ವಾಗ್ದಾಳಿ ನಡೆಸಿದ್ದಾರೆ. ಅಫ್ರಿದಿ ಒರ್ವ ಸ್ವಾರ್ಥ ಕ್ರಿಕೆಟಿಗನಾಗಿದ್ದು, ತಮ್ಮ ಸ್ವಾರ್ಥಕ್ಕೋಸ್ಕರ ಅನೇಕ ಕ್ರಿಕೆಟಿಗರ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂತಹವರು ಇಂದು ಆತ್ಮಕಥೆಯ ಮೂಲಕ ಲೆಜೆಂಡ್​ ಆಟಗಾರ ಬಗ್ಗೆ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಂತ 20 ವರ್ಷಗಳ ಕಾಲ ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ ಆಟಗಾರನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂಬಂತೆ ಫರ್ಹಾತ್​ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೇಮ್​ ಚೇಂಜರ್ ಪುಸ್ತಕವನ್ನು ಓದಿರುವುದಾಗಿ ತಿಳಿಸಿದ ಫರ್ಹಾತ್, ಆತ್ಮಚರಿತ್ರೆಯಲ್ಲಿ ಅಫ್ರಿದಿ ಹೇಳಿರುವ ವಿಷಯಗಳಿಗೆ ನಾಚಿಕೆ ಪಡುವೆ. ಏಕೆಂದರೆ ಸುಳ್ಳು ಹೇಳಿಯೇ ಕ್ರಿಕೆಟ್​ ಜೀವನವನ್ನು ಪೂರೈಸಿರುವ ಆಟಗಾರ ಕ್ರಿಕೆಟ್​​ ಜಗತ್ತಿನ ದಂತಕಥೆ ಎನ್ನಲಾದ ಜಾವೇದ್ ಮಿಯಾಂದಾದ್, ವಾಕರ್ ಯೂನಿಸ್ ಸೇರಿದಂತೆ ಹಲವರ ಬಗ್ಗೆ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ವಯಸ್ಸಿನ ಬಗ್ಗೆಯೇ ಸುಳ್ಳು ಹೇಳಿ ಮೋಸ ಮಾಡಿದ್ದ ಅಫ್ರಿದಿ ಮುಂದೆ ರಾಜಕಾರಣಿಯಾಗಲು ಅರ್ಹರು ಎಂದು ವ್ಯಂಗ್ಯವಾಡಿದ್ದಾರೆ.

ಪಾಕ್ ತಂಡದ ಸ್ಪೋಟಕ ಆಟಗಾರರಾಗಿ ಗುರುತಿಸಿಕೊಂಡಿದ್ದ ಅಫ್ರಿದಿ ಇತ್ತೀಚೆಗಷ್ಟೇ ತಮ್ಮ ವೃತ್ತಿ ಜೀವನದ ಕಹಾನಿಗಳನ್ನೊಳಗೊಂಡ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ತನ್ನ ನಿಜವಾದ ವಯಸ್ಸನ್ನು ಪ್ರಸ್ತಾಪಿಸಿ ಗಮನ ಸೆಳೆದಿದ್ದರು. ಈ ಹಿಂದೆ ಪಾಕ್ ತಂಡಕ್ಕೆ ಅಫ್ರಿದಿ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಅವರ ವಯಸ್ಸು 16 ಎನ್ನಲಾಗಿತ್ತು. ಅತೀ ಕಡಿಮೆ ವಯಸ್ಸಿನಲ್ಲೇ ಪಾಕ್ ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಆಟಗಾರ ಎಂಬ ದಾಖಲೆ ಸಹ ಅಫ್ರಿದಿ ಪಾಲಾಗಿತ್ತು. ಆದರೆ ಇವರ ವಯಸ್ಸಿನ ಬಗ್ಗೆ ಹಲವು ಬಾರಿ ಸಂಶಯಗಳು ಮೂಡಿ ಬಂದಿತ್ತಾದರೂ ಅಫ್ರಿದಿ ಎಲ್ಲೂ ಕೂಡ ಬಾಯಿ ಬಿಟ್ಟಿರಲಿಲ್ಲ. ಖದ್ದು ತಮ್ಮ ಆತ್ಮಚರಿತ್ರೆಯಲ್ಲಿ  ತಾವು ಮೊದಲ ಪಂದ್ಯವಾಡಿದಾಗ ತನ್ನ ವಯಸ್ಸು 21 ವರ್ಷವಾಗಿತ್ತು ಎಂದು ತಿಳಿಸಿದ್ದರು.

ಅಷ್ಟೇ ಅಲ್ಲದೆ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಬಗ್ಗೆ ಉಲ್ಲೇಖಿಸಿ, ಈ ಆಟಗಾರ ಯಾವುದೇ ಹೇಳಿಕೊಳ್ಳುವಂತಹ ದಾಖಲೆಗಳನ್ನು ಬರೆಯದಿದ್ದರೂ, ಈತನ ದುರಹಂಕಾರಕ್ಕೆ ಏನು ಕಡಿಮೆಯಿಲ್ಲ ಎಂದು ಪುಸ್ತಕದಲ್ಲೂ ಗೌತಿಯ ಕಾಲೆಳೆದಿದ್ದರು. ಇದು ಇಬ್ಬರು ಮಾಜಿ ಆಟಗಾರರ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಬಳಿಕ ಇಬ್ಬರು ಆಟಗಾರರ ನಡುವಿನ 'ಹುಚ್ಚಾ'ಟದ ಹೇಳಿಕೆಗಳ ಸಾಕಷ್ಟು ಸುದ್ದಿಯಾಗಿತ್ತು.'ಗೇಮ್ ಚೇಂಜರ್' ಪುಸ್ತಕದಲ್ಲಿ ಪಾಕ್​ನ ಹಿರಿಯ ಕ್ರಿಕೆಟಿಗರ ಚಾರಿತ್ರ್ಯವಧೆಗೆ ಕಾರಣವಾಗುಂತಹ ಅಂಶಗಳಿವೆ ಎನ್ನಲಾಗುತ್ತಿದೆ. ಇದರ ನಡುವೆಯೇ ಇದೀಗ ಮಾಜಿ ಪಾಕ್ ಆಟಗಾರ ಅಫ್ರಿದಿ ವಿರುದ್ದವೇ ಸ್ವಾರ್ಥಿ ಹೇಳಿಕೆಯೊಂದಿಗೆ ಕಣಕ್ಕಿಳಿದಿದ್ದಾರೆ. ಪಾಕ್ ಪರ 40 ಟೆಸ್ಟ್​ ಹಾಗೂ 58 ಏಕದಿನ ಪಂದ್ಯಗಳನ್ನಾಡಿರುವ ಇಮ್ರಾನ್ ಫರ್ಹಾತ್, ಅಫ್ರಿದಿ ಪುಸ್ತಕದಲ್ಲಿ  ಪ್ರಸ್ತಾಪಿಸಿದ ಆಟಗಾರರು ಇದು  ಸುಳ್ಳು ಎಂದು ಧೈರ್ಯದಿಂದ ಹೇಳಬೇಕೆಂದು ಒತ್ತಾಯಿಸಿದ್ದಾರೆ. ಈ ಮೂಲಕ ಅಫ್ರಿದಿ ನಿಜಮುಖವನ್ನು ಜಗತ್ತಿಗೆ ತೆರೆದಿಡಲು ಫರ್ಹಾತ್ ತಿಳಿಸಿದ್ದಾರೆ.
First published:May 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading