• Home
 • »
 • News
 • »
 • sports
 • »
 • Mohammad Hafeez: ಪಾಕಿಸ್ತಾನ್ ಆಲ್​ರೌಂಡರ್ ಮೊಹಮ್ಮದ್ ಹಫೀಜ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ

Mohammad Hafeez: ಪಾಕಿಸ್ತಾನ್ ಆಲ್​ರೌಂಡರ್ ಮೊಹಮ್ಮದ್ ಹಫೀಜ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ

ಮೊಹಮ್ಮದ್ ಹಫೀಜ್

ಮೊಹಮ್ಮದ್ ಹಫೀಜ್

Pakistan All-rounder Mohammad Hafeez retirement: ಸುಮಾರು 18 ವರ್ಷ ಕಾಲ 55 ಟೆಸ್ಟ್, 218 ಏಕದಿನ ಮತ್ತು 119 ಟಿ20 ಪಂದ್ಯಗಳಿಂದ 12 ಸಾವಿರಕ್ಕೂ ಹೆಚ್ಚು ರನ್ ಕಲೆಹಾಕಿರುವ ಆಲ್​ರೌಂಡರ್ ಮೊಹಮ್ಮದ್ ಹಫೀಜ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ಧಾರೆ.

 • Share this:

  ಇಸ್ಲಾಮಾಬಾದ್: ಪಾಕಿಸ್ತಾನದ ಪರ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 18 ವರ್ಷಗಳಷ್ಟು ಸುದೀರ್ಘ ಕಾಲ ಕ್ರಿಕೆಟ್ ಆಡಿರುವ ಆಲ್​ರೌಂಡರ್ ಮೊಹಮ್ಮದ್ ಹಫೀಜ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಮೂರು ವರ್ಷಗ ಹಿಂದೆಯೇ, ಅಂದರೆ 2018ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಹಫೀಜ್ ಇಂದು ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ರಿಟೈರ್ ಆಗಲು ನಿರ್ಧರಿಸಿದ್ದಾರೆ. 41 ವರ್ಷದ ಮೊಹಮ್ಮದ್ ಹಫೀಜ್ ಅವರು ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಒಂದೆರಡು ವರ್ಷ ಆಟ ಮುಂದುವರಿಸುವ ನಿರೀಕ್ಷೆ ಇದೆ.


  ಇತ್ತೀಚೆಗೆ ನಡೆದ ಟಿ20 ವಿಶ್ವಕಪ್​ನಲ್ಲಿ ಮೊಹಮ್ಮದ್ ಹಫೀಜ್ ಒಂದೆರಡು ಪಂದ್ಯಗಳಲ್ಲಿ ಬಿಡುಬೀಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸೋತಿತು. ಮೊಹಮ್ಮದ್ ಹಫೀಜ್ ಅವರಿಗೆ ಅದೇ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ.


  2003ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಫ್ ಸ್ಪಿನ್ನರ್ ಆಗಿರುವ ಅವರು ಬ್ಯಾಟಿಂಗ್​ನಲ್ಲೂ ಸಾಕಷ್ಟು ಬಾರಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಕುತೂಹಲವೆಂದರೆ ಹಫೀಜ್ ತಮ್ಮ ವೃತ್ತಿಜೀವನದಲ್ಲಿ 32 ಬಾರಿ ಪಂದ್ಯಶ್ರೇಷ್ಠ ಗರಿಮೆಗೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಎನಿಸಿರುವ ಆಟಗಾರರ ಸಾಲಿನಲ್ಲಿ ಹಫೀಜ್ ನಾಲ್ಕನೆಯವರಾಗಿದ್ದಾರೆ. ಶಾಹಿದ್ ಅಫ್ರಿದಿ 943), ವಾಸಿಂ ಅಕ್ರಮ (39) ಮತ್ತು ಇಂಜಮಮ್-ಉಲ್-ಹಕ್ (33) ಅವರು ಮಾತ್ರ ಹಫೀಜ್ ಅವರಿಗಿಂತ ಹೆಚ್ಚು ಬಾರಿ ಪಂದ್ಯಶ್ರೇಷ್ಠರೆನಿಸುವ ಆಟಗಳನ್ನ ಆಡಿದವರು.


  ಮೊಹಮ್ಮದ್ ಹಫೀಜ್ ಅವರು ಒಟ್ಟಾರೆ 55 ಟೆಸ್ಟ್, 218 ಏಕದಿನ ಮತ್ತು 119 ಟಿ20 ಪಂದ್ಯಗಳನ್ನ ಆಡಿದ್ದಾರೆ. ಈ ಮೂರು ಮಾದರಿ ಕ್ರಿಕೆಟ್​ನ ಪಂದ್ಯಗಳಿಂದ ಒಟ್ಟು 12,780 ರನ್ ಕಲೆಹಾಕಿದ್ದಾರೆ. ಹಾಗೆಯೇ, ಒಟ್ಟಾರೆ 253 ವಿಕೆಟ್ ಕೂಡ ಸಂಪಾದಿಸಿದ್ದಾರೆ. ತಮ್ಮ ಈ ಸುದೀರ್ಘ ಕ್ರಿಕೆಟ್ ಹಾಗು ಪಾಕ್ ಕ್ರಿಕೆಟ್​ನ ಯಶಸ್ಸಿಗೆ ತಮ್ಮದೇ ಕೊಡುಗೆ ಕೊಟ್ಟಿರುವ ಬಗ್ಗೆ ಮೊಹಮ್ಮದ್ ಹಫೀಜ್ ತೃಪ್ತಿ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ: ಭಾರತೀಯನ ಇತಿಹಾಸ: ವಿಂಟರ್ ಒಲಿಂಪಿಕ್ಸ್​ನ 2 ಸ್ಲಾಲೋಮ್ ಸ್ಪರ್ಧೆಗೆ ಅರ್ಹತೆ; ಏನಿದು ಸ್ಲಾಲೋಮ್?


  “ತೃಪ್ತಿ ಮತ್ತು ಗರ್ವದಿಂದ ನಾನು ಇಂದು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುತ್ತೇನೆ. ನಾನು ಆರಂಭದಲ್ಲಿ ಭಾವಿಸಿದ್ದಕ್ಕಿಂತ ಹೆಚ್ಚು ಗಳಿಸಿದ್ದೇನೆ, ಸಾಧಿಸಿದ್ದೇನೆ. ಅದಕ್ಕಾಗಿ ನನ್ನ ಸಹ-ಆಟಗಾರರು, ಕ್ಯಾಪ್ಟನ್​ಗಳು, ಕೋಚಿಂಗ್ ಸಿಬ್ಬಂದಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಲ್ಲರಿಗೂ ಋಣಿಯಾಗಿದ್ದೇನೆ” ಎಂದು ಮೊಹಮ್ಮದ್ ಹಫೀಜ್ ನೀಡಿರುವ ಹೇಳಿಕೆಯನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.


  “18 ವರ್ಷ ಕಾಲ ಪಾಕಿಸ್ತಾವನ್ನು ಪ್ರತಿನಿಧಿಸಲು ನಾನು ಯೋಗ್ಯ ಎಂದು ಪರಿಗಣಿಸಿದ್ದು ನನ್ನ ಅದೃಷ್ಟ ಮತ್ತು ನನಗೆ ಹೆಮ್ಮೆ…. ನನ್ನ ಸಾಧನೆಗೆ ಶ್ರೇಯೋಭಿಲಾಷಿಗಳಾಗಿ ಬಹಳ ದೊಡ್ಡ ತ್ಯಾಗ ಮಾಡಿದ ನನ್ನ ಕುಟುಂಬಕ್ಕೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಹಫೀಜ್ ಹೇಳಿದ್ದಾರೆ.


  ಇದನ್ನೂ ಓದಿ: ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ Team India ಆಟಗಾರರು.. ವೈರಲ್​​ ವಿಡಿಯೋ ಇಲ್ಲಿದೆ ನೋಡಿ


  ಹಫೀಜ್ ಕ್ರಿಕೆಟ್ ವೃತ್ತಿಜೀವನ ವಿವರ:


  ಟೆಸ್ಟ್ ಕ್ರಿಕೆಟ್: 55 ಪಂದ್ಯ 3652 ರನ್, 10 ಶತಕ, 12 ಅರ್ಧಶತಕ, 53 ವಿಕೆಟ್


  ಏಕದಿನ ಕ್ರಿಕೆಟ್: 218 ಪಂದ್ಯ 6614 ಪಂದ್ಯ, 11 ಶತಕ, 38 ಅರ್ಧಶತಕ, 139 ವಿಕೆಟ್


  ಟಿ20 ಕ್ರಿಕೆಟ್: 119 ಪಂದ್ಯ 2514 ರನ್, 14 ಅರ್ಧಶತಕ, 61 ವಿಕೆಟ್


  ಪ್ರಥಮ ದರ್ಜೆ ಕ್ರಿಕೆಟ್: 210 ಪಂದ್ಯ 12169 ರನ್, 26 ಶತಕ, 56 ಅರ್ಧಶತಕ, 253 ವಿಕೆಟ್.

  Published by:Vijayasarthy SN
  First published: