ವಿಶ್ವಕಪ್ ಫೈನಲ್​ನಲ್ಲಿ ವಿವಾದಿತ ಬೌಂಡರಿ; ಸೆಪ್ಟೆಂಬರ್​​ನಲ್ಲಿ ವಿಶ್ವಕಪ್ ಕ್ರಿಕೆಟ್ ಕಮಿಟಿಯಿಂದ ಪರಿಶೀಲನೆ

ವಿಶ್ವಕಪ್ ಫೈನಲ್​ನಲ್ಲಿ ಗೆಲುವಿನ ತಕ್ಕಡಿ ನ್ಯೂಜಿಲೆಂಡ್‌ನತ್ತ ವಾಲಿತ್ತು. ಆದರೆ, ಮುಂದಿನ ಎಸೆತದಲ್ಲಿ ಚಿತ್ರಣ ಸಂಪೂರ್ಣ ಬದಲಾಯಿತು. ಅದಕ್ಕೆ ಕಾರಣವಾಗಿದ್ದು ಆ ಆರು ರನ್‌ಗಳು.

Vinay Bhat | news18
Updated:August 13, 2019, 11:38 AM IST
ವಿಶ್ವಕಪ್ ಫೈನಲ್​ನಲ್ಲಿ ವಿವಾದಿತ ಬೌಂಡರಿ; ಸೆಪ್ಟೆಂಬರ್​​ನಲ್ಲಿ ವಿಶ್ವಕಪ್ ಕ್ರಿಕೆಟ್ ಕಮಿಟಿಯಿಂದ ಪರಿಶೀಲನೆ
ಬೆನ್ ಸ್ಟೋಕ್ಸ್​
Vinay Bhat | news18
Updated: August 13, 2019, 11:38 AM IST

ಬೆಂಗಳೂರು (ಆ. 13): 2019 ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ವಿಚಾರ ಈಗ ಹಳೆಯದು. ಆದರೆ, ಟೂರ್ನಿ ಮುಗಿದು ಸುಮಾರು ಒಂದು ತಿಂಗಳು ಆಗುತ್ತಾ ಬಂದರು ವಿವಾದಿತ ಬೌಂಡರಿ ವಿಚಾರ ಮಾತ್ರ ಇನ್ನೂ ಅಂತ್ಯಕಂಡಿಲ್ಲ.


ಸದ್ಯ ಬಗ್ಗೆ ವಿಶ್ವಕಪ್ ಕ್ರಿಕೆಟ್ ಕಮಿಟಿ ಮಾಹಿತಿ ನೀಡಿದ್ದು, ಪುರುಷರ ಐಸಿಸಿ ವಿಶ್ವಕಪ್ ಫೈನಲ್ನಲ್ಲಿ ಕ್ರಿಕೆಟ್ ಓವರ್ ಥ್ರೋಗೆ ಸಂಭಂದ ಪಟ್ಟ 19.8 ಕಾನೂನಿನ ಪ್ರಕಾರ ನಾವು ಚರ್ಚೆ ನಡೆಸಿದ್ದೇವೆ. ಸೆಪ್ಟೆಂಬರ್ನಲ್ಲಿ ಕಾನೂನು ಉಪ ಸಮಿತಿ ಈಬಗ್ಗೆ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಹೇಳಿದೆ.


ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ನೀಡಿದ್ದ 241 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ 9 ರನ್ಬೇಕಿದ್ದವು. ಗೆಲುವಿನ ತಕ್ಕಡಿ ನ್ಯೂಜಿಲೆಂಡ್ನತ್ತ ವಾಲಿತ್ತು. ಆದರೆ, ಮುಂದಿನ ಎಸೆತದಲ್ಲಿ ಚಿತ್ರಣ ಸಂಪೂರ್ಣ ಬದಲಾಯಿತು. ಅದಕ್ಕೆ ಕಾರಣವಾಗಿದ್ದು ಆರು ರನ್ಗಳು.ಏಕದಿನದಲ್ಲಿ ಕೊಹ್ಲಿ ಒಟ್ಟು ಎಷ್ಟು ಶತಕ ಸಿಡಿಸಬಹುದು?; ಮಾಜಿ ಆಟಗಾರ ಕೊಟ್ಟ ಉತ್ತರ ನೀವೆ ಕೇಳಿ


ಆಲ್ರೌಂಡರ್ಬೆನ್ಸ್ಟೋಕ್ಸ್‌ 2ನೇ ರನ್ಗಳಿಸುವ ಹಾದಿಯಲ್ಲಿ ಕ್ರೀಸಿಗೆ ಡೈವ್ಹೊಡೆಯುವಾಗ ಅವರನ್ನು ರನೌಟ್ಮಾಡಲು ಮಾರ್ಟಿನ್ಗಪ್ಟಿಲ್ಸ್ಟಂಪ್ಗೆ ಗುರಿಯಿಟ್ಟ ಚೆಂಡು ಅಕಸ್ಮಾತ್ಸ್ಟೋಕ್ಸ್ಬ್ಯಾಟಿಗೆ ತಗುಲಿ ಬೌಂಡರಿ ಗೆರೆ ತಲುಪಿತ್ತು. ತಕ್ಷಣವೇ ಅಂಪೈರ್ಕುಮಾರ್ಧರ್ಮಸೇನಾ ಇನ್ನೊಬ್ಬ ಅಂಪೈರ್ಎರಾಸ್ಮಸ್ಜತೆ ಸಮಾಲೋಚಿಸಿ ಇಂಗ್ಲೆಂಡ್ತಂಡಕ್ಕೆ 6 ರನ್ನೀಡಿದರು.


IPL 2020: ರಾಜಸ್ಥಾನ್ ರಾಯಲ್ಸ್​ ತಂಡದ ಸ್ಟಾರ್ ಆಟಗಾರನ ಖರೀದಿಗೆ ಮುಂದಾದ ಡೆಲ್ಲಿ

ಐಸಿಸಿ ನಿಯಮ 19.8 ಪ್ರಕಾರ, ಓವರ್ಥ್ರೋ ಸಂದರ್ಭದಲ್ಲಿ ಬ್ಯಾಟ್ಸ್ಮನ್ಗಳು ಒಂದು ರನ್ಪೂರ್ಣಗೊಳಿಸಿ 2ನೇ ರನ್ಗಳಿಸುವ ಪ್ರಕ್ರಿಯೆಯಲ್ಲಿದ್ದರೆ ಓವರ್ಥ್ರೋ (ಫೋರ್‌) ರನ್ಗಳಿಗೆ ರನ್ಕೂಡ ಸೇರ್ಪಡೆಯಾಗುತ್ತದೆ. ಇಲ್ಲಿ ಬೆನ್ಸ್ಟೋಕ್ಸ್‌ 2ನೇ ರನ್ಪೂರ್ತಿಗೊಳಿಸುವುದಕ್ಕಾಗಿ ಡೈವ್ಹೊಡೆದಿದ್ದಾಗ ಚೆಂಡು ಅವರ ಬ್ಯಾಟಿಗೆ ಬಡಿದಿತ್ತು. ಹೀಗಾಗಿ ಅಂಪೈರ್ಗಳ ಪ್ರಕಾರ ಬ್ಯಾಟ್ಸ್ಮನ್‌ 2ನೇ ರನ್ಕೂಡ ಪೂರ್ಣಗೊಳಿಸಿದ್ದರು. ಸದ್ಯ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...