ಬೌಲರ್​ಗಳ ಹೆದರಿಕೆ ನೋಡಿದಾಗ ನನಗನಿಸುವುದು...: ಎದುರಾಳಿಗಳ ಬಗ್ಗೆ ಮನಬಿಚ್ಚಿದ ಕ್ರಿಸ್ ಗೇಲ್

ಈ ವರ್ಷಾರಂಭದಲ್ಲಿ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ್ದ ಕ್ರಿಸ್ ಗೇಲ್, 4 ಪಂದ್ಯಗಳಲ್ಲಿ 106 ರನ್​ಗಳ ಸರಾಸರಿಯಲ್ಲಿ 424 ರನ್​ಗಳನ್ನು ಬಾರಿಸಿದ್ದರು.

zahir | news18
Updated:May 24, 2019, 7:53 PM IST
ಬೌಲರ್​ಗಳ ಹೆದರಿಕೆ ನೋಡಿದಾಗ ನನಗನಿಸುವುದು...: ಎದುರಾಳಿಗಳ ಬಗ್ಗೆ ಮನಬಿಚ್ಚಿದ ಕ್ರಿಸ್ ಗೇಲ್
@Flipboard
  • News18
  • Last Updated: May 24, 2019, 7:53 PM IST
  • Share this:
ಮುಂಬರುವ ವಿಶ್ವಕಪ್​ಗಾಗಿ ವೆಸ್ಟ್​ ಇಂಡೀಸ್ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಅದರಲ್ಲೂ ಸ್ಪೋಟಕ ಹಿರಿಯ ಆಟಗಾರ ಕ್ರಿಸ್ ಗೇಲ್ ತಂಡದಲ್ಲಿ ಸ್ಥಾನಗಿಟ್ಟಿಸುವ ಮೂಲಕ ಏಕದಿನ ಕ್ರಿಕೆಟ್​ಗೆ ಮರಳಿದ್ದಾರೆ. ವಿಶ್ವದ ಎಲ್ಲಾ ಬೌಲರ್​ಗಳನ್ನು ಮನಸೊ ಇಚ್ಛೆ ದಂಡಿಸುವ ಗೇಲ್​, ಈ ಬಾರಿ ಕೂಡ ಅಬ್ಬರಿಸುವುದಾಗಿ ತಿಳಿಸಿದ್ದಾರೆ.

2003, 2007, 2011 ಮತ್ತು 2015 ರಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದ ಗೇಲ್, ಇದೀಗ 4ನೇ ಬಾರಿ ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಆಸೀಸ್​ನ ವೆಬ್​ಸೈಟ್​ವೊಂದು ಯುನಿವರ್ಸಲ್ ಬಾಸ್​ ಸಂದರ್ಶನ ನಡೆಸಿದ್ದು, ಈ ವೇಳೆ ವಿಶ್ವದ ಎಲ್ಲಾ ಬೌಲರ್​ಗಳು ತನಗೆ ಚೆಂಡೆಸೆಯಲು ಹೆದುರುತ್ತಾರೆ ಎಂದು ಹೇಳಿದ್ದಾರೆ.

ಎಲ್ಲಾ ತಂಡಗಳ ವೇಗಿಗಳು ತನಗೆ ಬೌಲಿಂಗ್ ಮಾಡಲು ಭಯ ಪಡುತ್ತಾರೆ. ಆದರೆ ಕ್ಯಾಮೆರಾ ಮುಂದೆ ಯಾರೂ ಕೂಡ ತೋರ್ಪಡಿಸುವುದಿಲ್ಲ. ಅವರ ಮನದಲ್ಲಿ ಯಾವಾಗಲೂ ಗೇಲ್ ​ ಅಪಾಯಕಾರಿ ಬ್ಯಾಟ್ಸ್​ಮನ್​ ಎಂಬುದು ಇರುತ್ತದೆ ಎಂದು ಗೇಲ್ ತಿಳಿಸಿದ್ದಾರೆ.

ಎದುರಾಳಿ ತಂಡಗಳು ನಿಮ್ಮನ್ನು ಭಯಪಡುತ್ತವೆಯೇ ಎಂಬ ಪ್ರಶ್ನೆಗೆ , ನೀವು ಆಯಾ ತಂಡಗಳನ್ನು ಕೇಳಿ, ಅವರು ಕ್ಯಾಮೆರಾ ಮುಂದೆ ಇಲ್ಲ ಎನ್ನುತ್ತಾರೆ. ಆದರೆ ಕ್ಯಾಮೆರಾ ಹಿಂದೆ ನನ್ನ ಬ್ಯಾಟಿಂಗ್ ಹೆದರಿಕೊಳ್ಳುತ್ತಾರೆ ಎಂದು ಗೇಲ್ ಹೇಳಿದರು.

ಇಂತಹ ಸವಾಲುಗಳನ್ನು ನಾನು ಇಷ್ಟಪಡುತ್ತೇನೆ ಎಂದು ತಿಳಿಸಿದ ಗೇಲ್, ಬೌಲರ್​ಗಳು ಹೆದರುವುದನ್ನು ಕಂಡಾಗ ನಾನು ಆನಂದಿಸುತ್ತಿರುತ್ತೇನೆ. ಇದು ಒಂದು ರೀತಿಯಲ್ಲಿ ನನಗೆ ಮಜಾ ಕೊಡುತ್ತಿದೆ. ಈ ರೀತಿಯ ಭಯ ಉತ್ತಮ ಬ್ಯಾಟಿಂಗ್ ಮಾಡಲು ಸ್ಪೂರ್ತಿ ನೀಡುತ್ತಿದೆ ಸ್ಪೋಟಕ ಆಟಗಾರ ತಿಳಿಸಿದ್ದಾರೆ.ಈ ವರ್ಷಾರಂಭದಲ್ಲಿ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ್ದ ಕ್ರಿಸ್ ಗೇಲ್, 4 ಪಂದ್ಯಗಳಲ್ಲಿ 106 ರನ್​ಗಳ ಸರಾಸರಿಯಲ್ಲಿ 424 ರನ್​ಗಳನ್ನು ಬಾರಿಸಿದ್ದರು. ಈ ಸರಣಿಯಲ್ಲಿ ಗೇಲ್ ಬ್ಯಾಟ್​ನಿಂದ ಸಿಡಿದಿರುವುದು ಬರೋಬ್ಬರಿ 39 ಸಿಕ್ಸರ್​ಗಳು. ಹಾಗೆಯೇ ಐಪಿಎಲ್​ನಲ್ಲಿ ಉತ್ತಮ ಫಾರ್ಮ್​ನಲ್ಲಿದ್ದ ಬ್ಯಾಟಿಂಗ್ ದೈತ್ಯ 13 ಪಂದ್ಯಗಳಿಂದ 490 ರನ್​ಗಳನ್ನು ಬಾರಿಸಿದ್ದರು. ಹೀಗಾಗಿ ಇಂಗ್ಲೆಂಡ್​ನಲ್ಲೂ ಕ್ರಿಸ್ ಗೇಲ್​ ಆರ್ಭಟ ಮುಂದುವರೆಯಲಿದೆ ಎನ್ನಲಾಗುತ್ತಿದೆ.

ಝೊಮಾಟೊ ಆಫರ್: ಯಾರಾಗಲಿದ್ದಾರೆ ಮುಂದಿನ ಪ್ರಧಾನಿ? ಈ ಪ್ರಶ್ನೆಗೆ ಉತ್ತರಿಸಿದರೆ ಸಿಗಲಿದೆ ಹಣ..!
First published:May 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ