RCB vs RR: ಡೇನಿಯಲ್ ಸ್ಯಾಮ್ಸ್ vs​ ಫಿನ್ ಅಲೆನ್: ಯಾರಿಗೆ ಸಿಗಲಿದೆ ಚಾನ್ಸ್​?

ರಾಜಸ್ಥಾನ್ ರಾಯಲ್ಸ್​ ವಿರುದ್ದದ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೆಲ ಬದಲಾವಣೆ ಕಾಣಿಸಿಕೊಳ್ಳಲಿದೆ. ಅದರಂತೆ ಇದೇ ಮೊದಲ ಬಾರಿ ಫಿನ್ ಅಲೆನ್ ಆರ್​ಸಿಬಿ ಜೆರ್ಸಿಯಲ್ಲಿ ಕಣಕ್ಕಿಳಿಯಬಹುದು.

RCB

RCB

 • Share this:
  ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈಗಾಗಲೇ 3 ಪಂದ್ಯಗಳನ್ನಾಡಿದ್ದು, ಅದರಲ್ಲಿ ಆರ್​ಸಿಬಿ ಹ್ಯಾಟ್ರಿಕ್ ಗೆಲುವು ದಾಖಲಿಸಿದರೆ, ಆರ್​ಆರ್​ ಕೇವಲ 1 ರಲ್ಲಿ ಮಾತ್ರ ಜಯ ಸಾಧಿಸಿದೆ. ಇತ್ತ ಚೆನ್ನೈನಲ್ಲಿ ಗೆದ್ದು ಬೀಗಿರುವ ಆರ್​ಸಿಬಿ ಇದೀಗ ಮುಂಬೈನಲ್ಲಿ ಮೊದಲ ಪಂದ್ಯವನ್ನಾಡುತ್ತಿರುವುದು ವಿಶೇಷ.

  ಮುಂಬೈ ಪಿಚ್ ಬ್ಯಾಟಿಂಗ್​ಗೆ ಸಹಕಾರಿ ಎಂಬುದು ಗೊತ್ತಿರುವ ವಿಷಯ. ಇಲ್ಲೇ ನಡೆದ ಪಂದ್ಯದಲ್ಲೇ ಪಂಜಾಬ್ ಕಿಂಗ್ಸ್​ ರಾಜಸ್ಥಾನ್ ರಾಯಲ್ಸ್ ವಿರುದ್ದ 221 ರನ್ ಬಾರಿಸಿತ್ತು. ಹಾಗೆಯೇ ಅದನ್ನು ಚೇಸಿಂಗ್ ಮಾಡಿದ ರಾಜಸ್ಥಾನ್ 217 ರನ್​ ಬಾರಿಸಿತ್ತು. ಹೀಗಾಗಿ ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದರೆ ಬೃಹತ್ ಮೊತ್ತ ಪೇರಿಸಲೇಬೇಕು. ಇಲ್ಲವಾದರೆ ಗೆಲುವು ತುಸು ಕಠಿಣ ಎಂದೇ ಹೇಳಬಹುದು.

  ಹೀಗಾಗಿಯೇ ರಾಜಸ್ಥಾನ್ ರಾಯಲ್ಸ್​ ವಿರುದ್ದದ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೆಲ ಬದಲಾವಣೆ ಕಾಣಿಸಿಕೊಳ್ಳಲಿದೆ. ಅದರಂತೆ ಇದೇ ಮೊದಲ ಬಾರಿ ಫಿನ್ ಅಲೆನ್ ಆರ್​ಸಿಬಿ ಜೆರ್ಸಿಯಲ್ಲಿ ಕಣಕ್ಕಿಳಿಯಬಹುದು. ಆರ್​ಸಿಬಿ ಆರಂಭಿಕರು 3 ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಅದರಲ್ಲೂ ಪವರ್​ಪ್ಲೇನಲ್ಲೇ ಆರಂಭಿಕರು ವಿಕೆಟ್ ಒಪ್ಪಿಸುತ್ತಿರುವುದು ಆರ್​ಸಿಬಿ ತಂಡದ ಚಿಂತೆಗೆ ಕಾರಣವಾಗಿದೆ. ಹೀಗಾಗಿ ರಜತ್ ಪಾಟಿದಾರ್ ಸ್ಥಾನದಲ್ಲಿ ಫಿನ್ ಅಲೆನ್​​ಗೆ ಚಾನ್ಸ್​ ನೀಡುವ ಸಾಧ್ಯತೆಯಿದೆ. 3ನೇ ಕ್ರಮಾಂಕದಲ್ಲಿ ಅಲೆನ್ ಕಣಕ್ಕಿಳಿದರೆ ಹೊಡಿಬಡಿ ಆಟದ ಮೂಲಕ ಪವರ್​ಪ್ಲೇಯ ಸಂಪೂರ್ಣ ಲಾಭ ಪಡೆದುಕೊಳ್ಳಬಹುದು.

  ಆದರೆ ಅತ್ತ ಆಲ್​​ರೌಂಡರ್ ಡೇನಿಯಲ್ ಸ್ಯಾಮ್ಸ್ ಕೂಡ ತಂಡಕ್ಕೆ ಮರಳಿದ್ದಾರೆ. ಕೊರೋನಾ ಕಾರಣದಿಂದ ಮೊದಲ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಸ್ಯಾಮ್ಸ್ 4ನೇ ಪಂದ್ಯದಲ್ಲಿ ಅವಕಾಶ ಪಡೆಯುವ ಆಟಗಾರರ ಪಟ್ಟಿಯಲ್ಲಿದ್ದಾರೆ. ಸ್ಯಾಮ್ಸ್​ಗೆ ಅವಕಾಶ ನೀಡಿದರೆ ಆರ್​ಸಿಬಿ ತಂಡದ ಬೌಲಿಂಗ್ ಲೈನಪ್​ ಮತ್ತಷ್ಟು ಬಲಪಡಿಸಿಕೊಳ್ಳಬಹುದು. ಏಕೆಂದರೆ ಆರ್​ಸಿಬಿ ತಂಡದಲ್ಲಿ ಎಡಗೈ ಬೌಲರ್ ಕೊರತೆಯಿದೆ. ಈ ಕೊರತೆಯನ್ನು ಸ್ಯಾಮ್ಸ್​ ಮೂಲಕ ನೀಗಿಸಿಕೊಳ್ಳಬಹುದು. ಅಲ್ಲದೆ ಕೆಳ ಕ್ರಮಾಂಕದಲ್ಲಿ ಆಲ್​ರೌಂಡರ್​ ಒಬ್ಬರನ್ನು ಸೆಟ್ ಮಾಡಿಟ್ಟುಕೊಳ್ಳಬಹುದು. ಹೀಗಾಗಿ ರಾಜಸ್ಥಾನ್ ವಿರುದ್ದದ ಪಂದ್ಯದಲ್ಲಿ ಚಾನ್ಸ್ ಪಡೆಯುವ ವಿಶ್ವಾಸದಲ್ಲಿದ್ದಾರೆ ಡೇನಿಯಲ್ ಸ್ಯಾಮ್ಸ್​.

  ಸ್ಯಾಮ್ಸ್​ ಅವಕಾಶ ಪಡೆದರೆ ಆರ್​ಸಿಬಿ ಪರ ಪಾದರ್ಪಣೆ ಮಾಡಲು ಫಿನ್ ಅಲೆನ್ ಮತ್ತಷ್ಟು ದಿನ ಕಾಯಬೇಕಾಗಿ ಬರಬಹುದು. ಏಕೆಂದರೆ ವಿದೇಶಿ ಆಟಗಾರರಾಗಿ ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡಿವಿಲಿಯರ್ಸ್ ಹಾಗೂ ಕೈಲ್ ಜೇಮಿಸನ್ ಈಗಾಗಲೇ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಹೀಗಾಗಿ ನಾಲ್ಕನೇ ಫಾರಿನ್ ಪ್ಲೇಯರ್ ಆಗಿ ಚಾನ್ಸ್ ಪಡೆಯಲು ಅಲೆನ್ ಹಾಗೂ ಸ್ಯಾಮ್ಸ್ ನಡುವೆ ಸ್ಪರ್ಧಾತ್ಮಕ ಪೈಪೋಟಿಯಿದೆ. ಏಕೆಂದರೆ ಈ ಇಬ್ಬರು ಆಟಗಾರರು ಇದುವರೆಗೆ ಆರ್​ಸಿಬಿ ಪರ ಆಡಿಲ್ಲ. 4ನೇ ಪಂದ್ಯದಲ್ಲಿ ಸಿಕ್ಕ ಅವಕಾಶದಲ್ಲಿ ಯಾರು ಮಿಂಚುತ್ತಾರೋ ಅವರೇ ಮುಂದಿನ ಪಂದ್ಯಗಳಲ್ಲಿ ಮುಂದುವರೆಯಲಿದ್ದಾರೆ.

  ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಅವಕಾಶಕ್ಕಾಗಿ ಇಬ್ಬರೂ ಆಟಗಾರರು ಎದುರು ನೋಡುತ್ತಿದ್ದಾರೆ. ಇವರಿಬ್ಬರಲ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್ ಯಾರಿಗೆ ಮಣೆ ಹಾಕಲಿದೆ ಕಾದು ನೋಡಬೇಕಿದೆ.

  ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್, ಹರ್ಷಲ್ ಪಟೇಲ್, ಡೇನಿಯಲ್ಸ್ ಸ್ಯಾಮ್ಸ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಆಡಮ್ ಝಂಪಾ, ಶಹಬಾಜ್ ಅಹ್ಮದ್, ಫಿನ್ ಅಲೆನ್, ಕೇನ್ ರಿಚರ್ಡ್ಸನ್, ಪವನ್ ದೇಶಪಾಂಡೆ, ಗ್ಲೆನ್ ಮ್ಯಾಕ್ಸ್ ವೆಲ್, ರಜತ್ ಪಟಿದಾರ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜೇಮಿಸನ್, ಡಾನ್ ಕ್ರಿಶ್ಚಿಯನ್, ಸುಯೇಶ್ ಪ್ರಭುದೇಸಾಯಿ, ಕೆ.ಎಸ್.ಭರತ್
  Published by:zahir
  First published: