On This Day in 2020 IPL| ಐಪಿಎಲ್​ ಇತಿಹಾಸದಲ್ಲಿ ಎರಡೆರಡು Super Over ನಲ್ಲಿ Punjab Kings ಗೆದ್ದ ದಿನ ಇಂದು!

18 ಅಕ್ಟೋಬರ್, 2020 ಐಪಿಎಲ್ ಇತಿಹಾಸದಲ್ಲಿ ಎಂದೂ ಮರೆಯದ ದಿನ. ಏಕೆಂದರೆ ಈ ದಿನ ಐಪಿಎಲ್​ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಂತ ರೋಚಕ ಎರಡು ಬ್ಯಾಕ್-ಟು-ಬ್ಯಾಕ್ ಸೂಪರ್ ಓವರ್‌ ಪಂದ್ಯಗಳಿಗೆ ಐಪಿಎಲ್​ (IPL 2020) ಸಾಕ್ಷಿಯಾಗಿತ್ತು.

ಪಂಜಾಬ್ ಕಿಂಗ್ಸ್.

ಪಂಜಾಬ್ ಕಿಂಗ್ಸ್.

 • Share this:
  18 ಅಕ್ಟೋಬರ್, 2020 ಐಪಿಎಲ್ ಇತಿಹಾಸದಲ್ಲಿ ಎಂದೂ ಮರೆಯದ ದಿನ. ಏಕೆಂದರೆ ಈ ದಿನ ಐಪಿಎಲ್​ ಇತಿಹಾಸದಲ್ಲಿ (First Time in IPL History) ಮೊದಲ ಬಾರಿಗೆ ಅತ್ಯಂತ ರೋಚಕ ಎರಡು ಬ್ಯಾಕ್-ಟು-ಬ್ಯಾಕ್ ಸೂಪರ್ ಓವರ್‌ ಪಂದ್ಯಗಳಿಗೆ ಐಪಿಎಲ್​ (IPL 2020) ಸಾಕ್ಷಿಯಾಗಿತ್ತು. ಈ ಪೈಕಿ ಎರಡನೇ ಪಂದ್ಯದಲ್ಲಿ ಪಂಜಾಬ್ ಗೆಲುವು ಸಾಧಿಸುವ ಮೂಲಕ ಜಯದ ಕೇಕೆ ಹಾಕಿತ್ತು. ವರ್ಷದ ಹಿಂದೆ ಇದೇ ದಿನ ಸಂಜೆ ವೇಳೆ ನಡೆದ ಪಂದ್ಯದಲ್ಲ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ (Punjab Kings) ಗೆಲುವಿಗಾಗಿ ಸೆಣಸಿತ್ತು. ಆದರೆ, ಪಂದ್ಯ ಟೈ ಆಗಿದ್ದ ಕಾರಣ ಎರಡೂ ತಂಡಗಳು ಸೂಪರ್​ ಓವರ್​ನಲ್ಲಿ (Super Over) ಹೋರಾಡುವ ಅನಿವಾರ್ಯತೆ ಉಂಟಾಗಿತ್ತು.

  ಟೈ ಆಗಿತ್ತು ಪಂದ್ಯ:

  ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್ ಗೆ 176 ರನ್ ಕಲೆ ಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಪಂಜಾಬ್ ತಮ್ಮ ನಾಯಕ ಕೆಎಲ್ ರಾಹುಲ್ ಅವರ 51 ಎಸೆತಗಳಲ್ಲಿ 77 ರನ್ ಗಳಿಸಿದ ಆರ್ಭಟದ ಆಟದ ನೆರವಿನಿಂದ ಗೆಲ್ಲುವ ಹಂತಕ್ಕೆ ತಲುಪಿದ್ದರೂ ಸಹ ಕೊನೆಗೆ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಪರಿಣಾಮ ಸೂಪರ್​ ಓವರ್​ ನಲ್ಲಿ ಎರಡೂ ತಂಡಗಳು ಮತ್ತೆ ಕಣಕ್ಕಿಳಿದಿದ್ದವು.

  ಮೊದಲ ಸೂಪರ್ ಓವರ್:

  ಸೂಪರ್​ ಓವರ್​ನಲ್ಲಿ ಪಂಜಾಬ್ ನಾಯಕ ಕೆ.ಎಲ್​. ರಾಹುಲ್ ಮತ್ತು ನಿಕೋಲಸ್ ಬ್ಯಾಟಿಂಗ್ ಮಾಡಲು ಕಣ ಪ್ರವೇಶಿಸಿದ್ದರು. ಮತ್ತೊಂದೆಡೆ ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ಹೊಣೆ ಹೊತ್ತಿದ್ದರು. ಮೊದಲ ಎಸೆತದಲ್ಲಿ ಒಂಟಿ ರನ್ ಬಂದಿದ್ದರೆ, ಎರಡನೇ ಎಸೆತದಲ್ಲಿ ಪೂರನ್ ಔಟ್ ಆಗಿ ಪೆವಿಲಿಯನ್ ತೆರಳಿದ್ದರು. ಈ ಸೂಪರ್​ ಓವರ್​ನಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಸಹ ಪಂಜಾಬ್ ಗಳಿಸಲು ಸಾಧ್ಯವಾದದ್ದು ಕೇವಲ 5 ರನ್ ಮಾತ್ರ.

  ಅವರು ಮುಂಬೈಗೆ 3 ವಿಕೆಟ್ ಗೆ 24 ರನ್ ಗಳಿಸಿದ ಅತ್ಯುತ್ತಮ ಅಂಕಿಗಳನ್ನು ಹೊಂದಿದ್ದರು, ಪಂಜಾಬ್ ನಾಯಕ ಕೆಎಲ್ ರಾಹುಲ್ ಮತ್ತು ಹಾರ್ಡ್-ಹಿಟ್ಟರ್ ನಿಕೋಲಸ್ ಪೂರನ್ ಅವರನ್ನು ಒಳಗೊಂಡಂತೆ ಚೆಂಡನ್ನು ಹಸ್ತಾಂತರಿಸಲಾಯಿತು. ರಾಹುಲ್ ಮೊದಲ ಎಸೆತದಲ್ಲಿ ಒಂದು ಸಿಂಗಲ್ ತೆಗೆದುಕೊಂಡರು ಮತ್ತು ಪೂರನ್ ಸ್ಟ್ರೈಕ್‌ಗೆ ಬಂದರು, ಅವರು ಹೆಚ್ಚು ಮಾಡಲು ಸಾಧ್ಯವಾಗಲಿಲ್ಲ ಮತ್ತು ಎರಡನೇ ಎಸೆತದಲ್ಲಿ ಔಟಾದರು.

  6 ರನ್ ಗಳಿಸಿದರೆ ಜಯ ಎಂಬ ಗುರಿಯನ್ನು ಬೆನ್ನಟ್ಟಲು ಮುಂಬೈ ಪರವಾಗಿ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿಕಾಕ್ ಅಂಗಳ ಪ್ರವೇಶಿಸಿದ್ದರು. ಆದರೆ, ಬೆಂಕಿಯ ಉಂಡೆಯಂತಹ ಬೌಲಿಂಗ್ ಮಾಡಿದ್ದ ಶಮಿ ಈ ಟೋಟಲ್ ಅನ್ನು ಸಹ ಡಿಫೆಂಡ್ ಮಾಡಿಕೊಂಡಿದ್ದರು. ಮುಂಬೈ ಮೊದಲ 5 ಎಸೆತಗಳಲ್ಲಿ ಕೇವಲ 4 ರನ್ ಮಾತ್ರ ಗಳಿಸಿತ್ತು. ಕೊನೆಯ ಚೆಂಡಿನಲ್ಲಿ 2 ಅಗತ್ಯವಿದ್ದಾಗ ಡಿ ಕಾಕ್ ಎಷ್ಟೇ ಪ್ರಯತ್ನಪಟ್ಟರೂ ಸಹ ಸಾಧ್ಯವಾಗಲಿಲ್ಲ. ಪರಿಣಾಮ ಈ ಪಂದ್ಯವೂ ಸಹ ಟೈ ಆಗಿತ್ತು.  ಇದನ್ನೂ ಓದಿ: T20 World Cup 2021| ಶಾರ್ಜಾ ದಿಂದ ಶೇಖ್ ಜಾಯೆದ್​ ವರೆಗೆ ವಿಶ್ವಕಪ್ ಪಂದ್ಯ ನಡೆಯಲಿರುವ ಎಲ್ಲಾ ಅಂಗಳದ ಮಾಹಿತಿ ಇಲ್ಲಿದೆ!

  ಎರಡನೇ ಸೂಪರ್ ಓವರ್:

  ಎರಡನೇ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಮುಂಬೈ ಇಂಡಿಯನ್ಸ್ ಬಂದಿತ್ತು. ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಅವರನ್ನು ಕಡಿಮೆ ಮೊತ್ತಕ್ಕೆ ನಿರ್ಬಂಧಿಸುವ ಜವಾಬ್ದಾರಿಯನ್ನು ಕ್ರಿಸ್ ಜೋರ್ಡಾನ್‌ಗೆ ನೀಡಲಾಯಿತು. ಪರಿಣಾಮ ಅವರು 6 ಎಸೆತಗಳಲ್ಲಿ 11/1 ಮೊತ್ತವನ್ನು ಬಿಟ್ಟುಕೊಟ್ಟರು. ಪಾಂಡ್ಯ-ಪೊಲಾರ್ಡ್​ ಮ್ಯಾಜಿಕ್ ಅಂದು ಕೆಲಸ ಮಾಡಿರಲಿಲ್ಲ.

  ಇದನ್ನೂ ಓದಿ: T20 World Cup 2021: ವಿರಾಟ್​ ಕೊಹ್ಲಿಗಾಗಿ ಈ ವರ್ಷ ಟಿ-20 ವಿಶ್ವಕಪ್ ಗೆಲ್ಲಿ; ಟೀಂ ಇಂಡಿಯಾಗೆ ರೈನಾ ಸಂದೇಶ!

  ಆದರೆ, ಈ ಬಾರಿ ಪಂಜಾಬ್ ಎಡವಿರಲಿಲ್ಲ. ಅಂಕಣ ಪ್ರವೇಶಿಸಿದ ಮಯಾಂಕ್ ಅಗರ್‌ವಾಲ್ ಮತ್ತು ಕ್ರಿಸ್ ಗೇಲ್ ಗೆಲುವಿನ ಭರವಸೆ ನೀಡಿದ್ದರು. ಕ್ರಿಸ್ ಗೇಲ್ ಮೊದಲ ಬಾಲ್‌ನಲ್ಲಿಯೇ ಸಿಕ್ಸ ಗಳಿಸಿದರೆ, ಮಯಾಂಕ್ ಅಗರ್ವಾಲ್ 3 ನೇ ಮತ್ತು 4 ನೇ ಎಸೆತದಲ್ಲಿ ಸತತ ಎರಡು ಬೌಂಡರಿ ಗಳಿಸುವ ಮೂಲಕ ಪಂಜಾಬ್ ತಂಡ ಐತಿಹಾಸಿಕ ಗೆಲುವು ದಾಖಲಿಸಿತ್ತು.
  Published by:MAshok Kumar
  First published: