• Home
 • »
 • News
 • »
 • sports
 • »
 • On this day in 2013: ಅಂದು ಟೀಮ್ ಇಂಡಿಯಾ ಚಾಂಪಿಯನ್: ಇಂದು ಮರುಕಳಿಸುತ್ತಾ ಇತಿಹಾಸ..?

On this day in 2013: ಅಂದು ಟೀಮ್ ಇಂಡಿಯಾ ಚಾಂಪಿಯನ್: ಇಂದು ಮರುಕಳಿಸುತ್ತಾ ಇತಿಹಾಸ..?

champions trophy 2013

champions trophy 2013

ಸತತ ಬೌಲಿಂಗ್​ನಲ್ಲಿ ಬದಲಾವಣೆ, ಫೀಲ್ಡಿಂಗ್​ನಲ್ಲಿ ಬದಲಾವಣೆ ತರುತ್ತಾ ಧೋನಿ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವ ಕಾಯಕದಲ್ಲಿ ತೊಡಗಿದರು. ಅತ್ತ ಪ್ರತಿ ಓವರ್​ ಮುಕ್ತಾಯವಾಗುತ್ತಿದ್ದಂತೆ ಇಂಗ್ಲೆಂಡ್ ಒತ್ತಡಕ್ಕೆ ಸಿಲುಕುತ್ತಾ ಹೋಯಿತು.

 • Share this:

  ಜೂನ್ 23, 2013...ಈ ದಿನವನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದಕ್ಕೆ ಒಂದು ಕಾರಣ ಅಂದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಚಾಂಪಿಯನ್ ಟ್ರೋಫಿಯನ್ನು ಗೆದ್ದುಕೊಂಡಿರುವುದು. ಇನ್ನೊಂದು ಕಾರಣ ಆ ಬಳಿಕ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲದಿರುವುದು.


  ಹೌದು, 2013ರ ಬಳಿಕ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿಲ್ಲ. ಧೋನಿ ಬಳಿಕ ಟೀಮ್ ಇಂಡಿಯಾದ ಸಾರಥಿಯಾದ ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ಭಾರತ 2017 ರ ಚಾಂಪಿಯನ್ ಟ್ರೋಫಿ ಹಾಗೂ 2019ರ ಏಕದಿನ ವಿಶ್ವಕಪ್​ನಲ್ಲಿ ಫೈನಲ್ ಅಂತಿಮ ಹಂತಕ್ಕೇರಿದರೂ ಪ್ರಶಸ್ತಿ ಗೆಲ್ಲವಲ್ಲಿ ಎಡವಿತು. ಇದೀಗ ಕಾಕತಾಳೀಯ ಎಂಬಂತೆ 7 ವರ್ಷಗಳ ಬಳಿಕ ಮತ್ತೊಮ್ಮೆ ಇದೇ ದಿನ ಐಸಿಸಿ ಪ್ರಶಸ್ತಿ ಗೆಲ್ಲುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಅಂತಿಮ ದಿನದಾಟ ಇಂದು ನಡೆಯಲಿದ್ದು, ಇದರಲ್ಲಿ ಭಾರತ ಗೆದ್ದರೆ ಜುಲೈ 23 ರಂದೇ ಮತ್ತೊಮ್ಮೆ ಐಸಿಸಿ ಟ್ರೋಫಿ ಗೆದ್ದ ಹಿರಿಮೆಗೆ ಟೀಮ್ ಇಂಡಿಯಾದ ಪಾಲಾಗಲಿದೆ.


  2013 ರ ಚಾಂಪಿಯನ್ಸ್ ಟ್ರೋಫಿ ಸವಿನೆನಪು:


  ಅದು ಜುಲೈ 23, 2013...ಇಂಗ್ಲೆಂಡ್​ನ​ ಎಡ್ಜ್​ಬಾಸ್ಟನ್ ಮೈದಾನದಲ್ಲಿ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರೀಕ್ಷೆಯನ್ನು ಹುಸಿ ಮಾಡದಂತೆ ಇಂಗ್ಲೆಂಡ್ ಬೌಲರುಗಳು ದಾಳಿ ಸಂಘಟಿಸಿದರು. ಅದರಲ್ಲೂ ರವಿ ಬೊಪಾರ (20/3) ಬೌಲಿಂಗ್ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಪರದಾಡಿದರು.


  ವಿರಾಟ್ ಕೊಹ್ಲಿಯ 43 ರನ್ ಹಾಗೂ ರವೀಂದ್ರ ಜಡೇಜಾ ಅವರ ಬಿರುಸಿನ 33 ರನ್​ಗಳ ನೆರವಿನಿಂದ ನಿಗದಿತ 20 ಓವರ್​ನಲ್ಲಿ ಟೀಮ್ ಇಂಡಿಯಾ 7 ವಿಕೆಟ್ ನಷ್ಟಕ್ಕೆ 127 ರನ್​ಗಳಿಸಿತು. ಈ ಸಾಧಾರಣ ಗುರಿಯನ್ನು ತವರಿನಲ್ಲಿ ಇಂಗ್ಲೆಂಡ್ ಚೇಸ್ ಮಾಡಲಿದೆ ಎಂದೇ ಎಲ್ಲರೂ ಷರಾ ಬರೆದಿದ್ದರು. ಆದರೆ ನಾಯಕ ಧೋನಿಯ ಆಲೋಚನೆಗಳೇ ಬೇರೆಯಾಗಿದ್ದವು.


  ಸತತ ಬೌಲಿಂಗ್​ನಲ್ಲಿ ಬದಲಾವಣೆ, ಫೀಲ್ಡಿಂಗ್​ನಲ್ಲಿ ಬದಲಾವಣೆ ತರುತ್ತಾ ಧೋನಿ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವ ಕಾಯಕದಲ್ಲಿ ತೊಡಗಿದರು. ಅತ್ತ ಪ್ರತಿ ಓವರ್​ ಮುಕ್ತಾಯವಾಗುತ್ತಿದ್ದಂತೆ ಇಂಗ್ಲೆಂಡ್ ಒತ್ತಡಕ್ಕೆ ಸಿಲುಕುತ್ತಾ ಹೋಯಿತು. 46 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್​ಗೆ ಈ ಹಂತದಲ್ಲಿ ಇಯಾನ್ ಮೋರ್ಗನ್ (33) ಹಾಗೂ ರವಿ ಬೊಪಾರ (30) ಆಸರೆಯಾದರು.


  17 ಓವರ್ ಮುಕ್ತಾಯದ ವೇಳೆಗೆ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 100ರ ಗಡಿದಾಟಿತು. ಇದೇ ವೇಳೆ ಧೋನಿ ವೇಗಿ ಇಶಾಂತ್ ಶರ್ಮಾ ಅವರಿಗೆ ಕೈಗೆ ಚೆಂಡಿತ್ತರು. ಪರಿಣಾಮ ಒಂದೇ ಓವರ್​ನಲ್ಲಿ ಮೋರ್ಗನ್ ಹಾಗೂ ಬೊಪಾರ ಪೆವಿಲಿಯನ್ ಕಡೆ ಮುಖ ಮಾಡಿದರು. ಬಳಿಕ ಬಂದ ಜೋಸ್ ಬಟ್ಲರ್​ರನ್ನು ಶೂನ್ಯಕ್ಕೆ ರವೀಂದ್ರ ಜಡೇಜಾ ಕ್ಲೀನ್ ಬೌಲ್ಡ್ ಮಾಡಿದರು. ಅಲ್ಲಿಗೆ ನಾಟಕೀಯ ತಿರುವಿನೊಂದಿಗೆ ಪಂದ್ಯವು ಭಾರತದ ಕಡೆಗೆ ವಾಲಿತು.


  ಅಂತಿಮ ಓವರ್​ನಲ್ಲಿ 15 ರನ್​ಗಳ ಅವಶ್ಯತೆಯಿತ್ತು. ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಟ್ರೇಡ್​ವೆಲ್​ರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಅಶ್ವಿನ್ ಪಂದ್ಯವನ್ನು ಕೊನೆಯ ಎಸೆತಕ್ಕೆ ತಂದು ನಿಲ್ಲಿಸಿದರು. ಅದರಂತೆ ಕೊನೆಯ ಬಾಲ್​ನಲ್ಲಿ 6 ರನ್​ಗಳ ಅವಶ್ಯಕತೆಯಿತ್ತು. ಆದರೆ ಅಶ್ವಿನ್ ಎಸೆದ ಮ್ಯಾಜಿಕ್​​ ಬಾಲ್​ಗೆ ಉತ್ತರಿಸಲಾಗದೇ ಟ್ರೇಡ್​ವೆಲ್ ಪೆಚ್ಚಾಗಿ ನಿಂತರು. ಇದರೊಂದಿಗೆ ಟೀಮ್ ಇಂಡಿಯಾ 5 ರನ್​ಗಳ ರೋಚಕ ಜಯ ತನ್ನದಾಗಿಸಿಕೊಂಡಿತು.




  ಅಷ್ಟೇ ಅಲ್ಲದೆ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿತು.

  Published by:zahir
  First published: