Anil Kumble Birthday| ಪಾಕ್​ ವಿರುದ್ಧ ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ಗಳಿಸಿದ ಚಾಂಪಿಯನ್​ ಸ್ಪಿನ್ನರ್​ ಚಮತ್ಕಾರ ಇಲ್ಲಿದೆ ನೋಡಿ!

ಲೆಗ್ ಸ್ಪಿನ್ ಮೆಜಿಷಿಯನ್​ ಖ್ಯಾತಿಯ ಕುಂಬ್ಳೆ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಎಂದೂ ಮರೆಯದ..ಮರೆಯಲಾಗದ ಪಂದ್ಯ ಎಂದರೆ ಪಾಕಿಸ್ತಾನದ ವಿರುದ್ಧ ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಗಳಿಸಿ ಇತಿಹಾಸ ನಿರ್ಮಿಸಿದ್ದು.

ಒಂದೇ ವಿಕೆಟ್​ನಲ್ಲಿ 10 ವಿಕೆಟ್​ ಗಳಿಸಿದ ಅನಿಲ್ ಕುಂಬ್ಳೆ.

ಒಂದೇ ವಿಕೆಟ್​ನಲ್ಲಿ 10 ವಿಕೆಟ್​ ಗಳಿಸಿದ ಅನಿಲ್ ಕುಂಬ್ಳೆ.

  • Share this:
    ವಿಶ್ವದ ಶ್ರೇಷ್ಠ ಸ್ಪಿನ್ನರ್​​ಗಳ ಪಟ್ಟಿಯಲ್ಲಿ ಯಾವಾಗಲೂ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವ ಹೆಸರು  ಅನಿಲ್​ ಕುಂಬ್ಳೆ (Anil Kumble). ಭಾರತ ತಂಡಕ್ಕೆ ದಶಕಗಳ ಕಾಲ ಲೆಗ್​ ಸ್ಪಿನ್ನರ್ (Leg Spinner) ಆಗಿ ಸ್ಪಿನ್​ ವಿಭಾಗದ ಆಧಾರ ಸ್ತಂಭವಾಗಿದ್ದವರು ಕುಂಬ್ಳೆ. ಇವರು ಏಕಾಂಗಿಯಾಗಿ ಅನೇಕ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಹತ್ತಾರು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ ಮತ್ತು ಭಾರತದ ಪರ ಟೆಸ್ಟ್​ (Test Cricket) ನಾಯಕತ್ವ ವಹಿಸಿದ್ದ ಮೊದಲ ಬೌಲರ್​ ಎಂಬ ಖ್ಯಾತಿಯೂ ಕುಂಬ್ಳೆ ಹೆಸರಿಗೆ ಇದೆ. ಆದರೆ, ಲೆಗ್ ಸ್ಪಿನ್ ಮೆಜಿಷಿಯನ್​ ಖ್ಯಾತಿಯ ಕುಂಬ್ಳೆ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಎಂದೂ ಮರೆಯದ..ಮರೆಯಲಾಗದ ಪಂದ್ಯ ಎಂದರೆ ಪಾಕಿಸ್ತಾನದ (Pakistan) ವಿರುದ್ಧ ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಗಳಿಸಿ ಇತಿಹಾಸ ನಿರ್ಮಿಸಿದ್ದು. ಇಂದು ಅನಿಲ್​ ಕುಂಬ್ಳೆ ಅವರ 51ನೇ ಹುಟುಹಬ್ಬವಾಗಿದ್ದು, ಆ ನೆನಪಿನಲ್ಲಿ ಅಚ್ಚಳಿಯದ ಆ ಇತಿಹಾಸವನ್ನು ಮೆಲು ಹಾಕೋಣ.



    ಕುಂಬ್ಳೆ ಅಂದು ನಿರ್ಮಿಸಿದ್ದು ಯಾರೂ ಅಳಿಸಲಾಗದ ಇತಿಹಾಸ:

    ಅದು ಫೆಬ್ರವರಿ 1999. ದೆಹಲಿಯ ಫಿರೋಜ್ ಷಾ ಅಂಗಳದಲ್ಲಿ ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಟೆಸ್ಟ್​ ಪಂದ್ಯ. ಅದಕ್ಕೂ ಮುನ್ನ ಚೆನ್ನೈನಲ್ಲಿ ಸಚಿನ್ ತೆಂಡೂಲ್ಕರ್​ ಶತಕದ ಹೊರತಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್​ ಸೋತಿತ್ತು. ಕೇವಲ 12 ರನ್ ಅಂತರದಲ್ಲಿ ನಾಲ್ಕು ವಿಕೆಟ್ ಬೀಳುವ ಮೂಲಕ ಭಾರತ ನಿರಾಸೆ ಅನುಭವಿಸಿತ್ತು. ಹೀಗಾಗಿ ಫಿರೋಜ್​ ಷಾ ಅಂಗಳದಲ್ಲಿ ಗೆಲ್ಲಲೇಬೇಕಾದ ಒತ್ತಡ ಭಾರತಕ್ಕೆ ಇತ್ತು.

    ಎರಡನೇ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 252 ರನ್ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ, ಪಾಕಿಸ್ತಾನ ಇದಕ್ಕೆ ಪ್ರತಿಕ್ರಿಯೆಯಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 172 ರನ್ ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್​ನಲ್ಲೂ ಭಾರತದ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಸಡಗೋಪನ್ ರಮೇಶ್ 92 ಮತ್ತು ಸೌರವ್ ಗಂಗೂಲಿ ಅಜೇಯ 62 ರನ್ ಗಳಿಸಿಸುವ ಮೂಲಕ ಎದುರಾಳಿ ತಂಡಕ್ಕೆ 420 ರನ್ ಬೆನ್ನಟ್ಟುವ ಪ್ರಬಲ ಸವಾಲನ್ನು ಮುಂದಿಟ್ಟಿದ್ದರು.

    ಅಂದು ನಡೆದಿತ್ತು ಕುಂಬ್ಳೆ ಮ್ಯಾಜಿಕ್:

    ಅಸಲಿಗೆ ಚೇಸಿಂಗ್ ಆರಂಭಿಸಿದ್ದ ಪಾಕಿಸ್ತಾನ ಉತ್ತಮ ಆರಂಭ ಪಡೆದಿತ್ತು. ಕುಂಬ್ಳೆ ಬರುವ ಮೊದಲು ಶಾಹಿದ್ ಅಫ್ರಿದಿ ಮತ್ತು ಸಯೀದ್ ಅನ್ವರ್ ನಡುವೆ 101 ರನ್ ಗಳ ಜೊತೆಯಾಟ ಭಾರತದ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಆದರೆ, ಈ ಸಂದರ್ಭದಲ್ಲಿ ಬೌಲಿಂಗ್​ಗೆ ಆಗಮಿಸಿದ್ದ ಅನಿಲ್ ಕುಂಬ್ಳೆ ಪಾಕ್ ವಿರುದ್ಧ ಎಲ್ಲಾ 10 ವಿಕೆಟ್​ಗಳನ್ನೂ ಪಡೆಯುವ ಮೂಲಕ ಯಾರೂ ಅಳಿಸಲಾಗದ ಹೊಸ ಇತಿಹಾಸವನ್ನು ಬರೆದಿದ್ದರು.

    ಇದನ್ನೂ ಓದಿ: T20 World Cup 2021| ಟಿ20 ವಿಶ್ವಕಪ್​ಗೆ ಇಂದಿನಿಂದ ಸಿಗಲಿದೆ ಅದ್ದೂರಿ ಚಾಲನೆ; ಯಾರು ಕಪ್​ ಗೆಲ್ಲುವ ಫೇವರಿಟ್?

    ಇನ್ನಿಂಗ್ಸ್​ಮ 25 ನೇ ಓವರ್ ನಲ್ಲಿ ಅಫ್ರಿದಿ 41 ರನ್​ ಗಳಿಸಿ ಕುಂಬ್ಳೆ ತನ್ನ ಮೊದಲ ವಿಕೆಟ್ ಅನ್ನು ನೀಡಿದ್ದರು. ಆ ನಂತರ ನಡೆದದ್ದೆಲ್ಲಾ ಮ್ಯಾಜಿಕ್. ಕೇವಲ 128|6 ವಿಕೆಟ್​ ಕಳೆದುಕೊಂಡು ಪಾಕಿಸ್ತಾನ ಸಂಕಷ್ಟಕ್ಕೆ ಒಳಗಾಗಿತ್ತು.

    ವಸೀಮ್ ಅಕ್ರಮ್ ಇನ್ನಿಂಗ್ಸ್‌ನ ಕೊನೆಯ ಭಾಗದಲ್ಲಿ 38 ರನ್​ ಗಳಿಸುವ ಮೂಲಕ ಅಲ್ಪ ಹೋರಾಟ ನೀಡಲು ಮುಂದಾದರೂ ಸಹ ಅದು ಪ್ರಯೋಜನವಾಗಲಿಲ್ಲ. ಕೊನೆಗೆ 207 ರನ್​ಗಳಿಗೆ ಪಾಕ್ ತಂಡ ಸರ್ವಪತನ ಕಂಡಿತ್ತು. 212 ರನ್​ಗಳಿಂದ ಭಾರತ ಗೆಲುವನ್ನು ಖಚಿತಪಡಿಸಿಕೊಂಡಿತ್ತು. ಅದೇ ಪಂದ್ಯದಲ್ಲಿ ಕುಂಬ್ಳೆ ಎಲ್ಲಾ 10 ವಿಕೆಟ್​ಗಳನ್ನೂ ಕಬಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದರು.

    ಇದನ್ನೂ ಓದಿ: IND vs PAK| T20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಸವಾಲು ಒಡ್ಡುವ ಸಾಮರ್ಥ್ಯ ಪಾಕ್ ತಂಡಕ್ಕಿಲ್ಲ; ಅಜಿತ್ ಅಗರ್ಕರ್

    ಅನಿಲ್ ಕುಂಬ್ಳೆ ದಾಖಲೆ:

    ಭಾರತಕ್ಕಾಗಿ ಅನಿಲ್ ಕುಂಬ್ಳೆ 132-ಟೆಸ್ಟ್ ಪಂದ್ಯಗಳನ್ನು ಆಡಿದ್ದು, 619 ವಿಕೆಟ್ ಗಳನ್ನು ಗಳಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧ ಲಾರ್ಡ್ಸ್​ ಅಂಗಳದಲ್ಲಿ ಒಂದು ಶತಕ ಸಹ ಗಳಿಸುವ ಮೂಲಕ ಮತ್ತೊಂದು ದಾಖಲೆಯನ್ನೂ ತನ್ನ ಹೆಸರಿಗೆ ಬರೆಸುಕೊಂಡಿದ್ದಾರೆ. ಇನ್ನೂ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಟೆಸ್ಟ್​ನಲ್ಲಿ 800 ವಿಕೆಟ್​ ಕಬಳಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್​ ಗಳಿಸುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡಿನ ಜೇಮ್ಸ್ ಆಂಡರ್ಸನ್ 632 ವಿಕೆಟ್ ಗಳಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.
    Published by:MAshok Kumar
    First published: