OMN vs BAN, T20 WC 2021: ಈ ಪಂದ್ಯವನ್ನೂ ಸೋತರೆ ಬಾಂಗ್ಲಾ ಟೂರ್ನಿಯಿಂದ ಔಟ್; ಗೆದ್ದ ಹುಮ್ಮಸ್ಸಿನಲ್ಲಿ ಓಮನ್!

Oman: ಓಮನ್​​ ತಂಡ ಇತ್ತೀಚೆಗೆ ಅದ್ಭುತ ಪ್ರದರ್ಶ ನೀಡುತ್ತಿದೆ. ವಿಶ್ವಕಪ್​ ಆರಂಭಕ್ಕೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿ ಓಮನ್ ಅಜೇಯ ಓಟ ಮುಂದುವರೆಸಿತ್ತು. ಕಳೆದ ಪಂದ್ಯದಲ್ಲಿ ಪಪುವಾ ನ್ಯೂಗಿನಿಯ ತಂಡ ನೀಡಿದ 130ರನ್​ಗಳ ಗುರಿಯನ್ನು ಓಮನ್ ತಂಡ ಕೇವಲ 13.4 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ ಮುಟ್ಟಿತ್ತು.

ಬಾಂಗ್ಲಾದೇಶ ತಂಡ.

ಬಾಂಗ್ಲಾದೇಶ ತಂಡ.

 • Share this:
  ಬಾಂಗ್ಲಾದೇಶ ತಂಡ ಟಿ20 (T20 Cricket) ಮಾದರಿ ಕ್ರಿಕೆಟ್​ನಲ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿತ್ತು, ಬಲಿಷ್ಠ ತವರಿನಲ್ಲಿ ನಡೆದ ಸರಣಿಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ಮತ್ತು ನ್ಯೂಜಿಲೆಂಡ್​ (NewZealand) ತಂಡಗಳ ವಿರುದ್ಧ ಗೆಲುವು ದಾಖಲಿಸಿತ್ತು. ಹೀಗಾಗಿ ಐಸಿಸಿ ರ್ಯಾಂಕಿಂಗ್ (ICC Ranking) ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರುವ ಮೂಲಕ ವಿಶ್ವಕಪ್  ಟಿ20 (World Cup T20) ಟೂರ್ನಿಯ​ ಗ್ರೂಪ್​ ಬಿ ಹಂತಕ್ಕೆ ಪ್ರವೇಶ ಪಡೆದಿತ್ತು. ಆದರೆ, ಬಲಿಷ್ಠ ಬಾಂಗ್ಲಾದೇಶ (Bangladesh) ಭಾನುವಾರ ಸ್ಕಾಟ್ಲೆಂಡ್ (Scotland) ವಿರುದ್ಧ ಅನಿರೀಕ್ಷಿತ ಮತ್ತು ಹೀನಾಯ ಸೋಲನುಭವಿಸುವ ಮೂಲಕ ಇಂದಿನ ಓಮನ್ (Oman) ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಒಳಗಾಗಿದೆ. ಒಂದು ವೇಳೆ ಇಂದು ಅಲ್​ ಮೆರತ್​ನಲ್ಲಿ ಓಮನ್ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲನುಭವಿಸಿದರೆ, ಟೂರ್ನಿಯಿಂದಲೇ ಹೊರ ನಡೆಯಬೇಕಾದ ಅನಿವಾರ್ಯತೆ ಎದುರಾಗಲಿದೆ.

  ಒತ್ತಡದಲ್ಲಿ ಬಾಂಗ್ಲಾದೇಶ:

  ಸ್ಕಾಟ್ಲೆಂಡ್​ ವಿರುದ್ಧದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಗೆಲ್ಲುವ ಫೇವರಿಟ್​ ತಂಡವಾಗಿತ್ತು. ಈ ಪಂದ್ಯದಲ್ಲಿ ಬಾಂಗ್ಲಾ ಸುಲಭ ಗೆಲುವು ದಾಖಲಿಸಲಿದೆ ಎಂದು ಅಂದಾಜಿಸಲಾಗಿತ್ತು. ಇದಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ್ದ ಬಾಂಗ್ಲಾ ಬೌಲರ್​ಗಳು ಸ್ಕಾಟ್ಲೆಂಡ್ ತಂಡವನ್ನು ಕೇವಲ 53 ಕ್ಕೆ 6 ಕ್ಕೆ ನಿಯಂತ್ರಿಸಿದ್ದರು. ಆದರೆ, ಕೊನೆಯ ಓವರ್​ಗಳಲ್ಲಿ ಕ್ರಿಸ್​ ಗ್ರೇವ್ಸ್​ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸ್ಕಾಟ್ಲೆಂಡ್​ 140 ರನ್​ಗಳ ಸವಾಲಿನ ಮೊತ್ತು ಪೇರಿಸಿತ್ತು.

  ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ ಈ ಪಂದ್ಯದಲ್ಲಿ ಹುಲಿಗಳ ಬಾಂಗ್ಲಾ ಹೀನಾಯ ಸೋಲೊಪ್ಪಿತು. ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ನಾಯಕ ಮಹಮ್ಮದುಲ್ಲಾ ಸಹ ದೂಷಿಸಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಓಮನ್​ ವಿರುದ್ಧ ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿರುವ ಬಾಂಗ್ಲಾ ಬ್ಯಾಟಿಂಗ್ ಸುಧಾರಿಸಬೇಕಿದೆ. ಒಂದು ವೇಳೆ ಸೋತರೆ ಟೂರ್ನಿಯಿಂದಲೇ ಹೊರಕ್ಕೆ ನಡೆಯಲಿದೆ.

  ಯಾರಿಗೇನು ಕಮ್ಮಿ ಇಲ್ಲ ಓಮನ್:

  ಓಮನ್​​ ತಂಡ ಇತ್ತೀಚೆಗೆ ಅದ್ಭುತ ಪ್ರದರ್ಶ ನೀಡುತ್ತಿದೆ. ವಿಶ್ವಕಪ್​ ಆರಂಭಕ್ಕೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿ ಓಮನ್ ಅಜೇಯ ಓಟ ಮುಂದುವರೆಸಿತ್ತು. ಕಳೆದ ಪಂದ್ಯದಲ್ಲಿ ಪಪುವಾ ನ್ಯೂಗಿನಿಯ ತಂಡ ನೀಡಿದ 130ರನ್​ಗಳ ಗುರಿಯನ್ನು ಓಮನ್ ತಂಡ ಕೇವಲ 13.4 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ ಮುಟ್ಟಿತ್ತು. ಅಲ್ಲದೆ, ಬೌಲಿಂಗ್​ನಲ್ಲೂ ವಿಭಾಗದಲ್ಲೂ ಸಹ ಓಮನ್ ಸಾಕಷ್ಟು ಬಲಿಷ್ಠವಾಗಿದೆ. ತಂಡದ ನಾಯಕ ಝೀಷಾನ್ ಮಕ್ಸೂದ್​ ಅದ್ಭುತ ಫಾರ್ಮ್​ನಲ್ಲಿದ್ದು ಕಳೆದ ಪದ್ಯದಲ್ಲಿ ನಾಲ್ಕು ವಿಕೆಟ್​ ಗಳಿಸಿ ಮಿಂಚಿದ್ದರು. ತಂಡದಲ್ಲಿ ಹಲವು ಯಾರ್ಕರ್​ ಸ್ಪೆಷಲಿಸ್ಟ್​ಗಳು ಇರುವುದು ಮತ್ತೊಂದು ಬಲ. ಇದರ ಜೊತೆಗೆ ತವರಿನ ಅನುಕೂಲವೂ ತಂಡಕ್ಕೆ ಇರಲಿದ್ದು, ಇಂದೂ ಸಹ ಬಾಂಗ್ಲಾದೇಶಕ್ಕೆ ಕಠಿಣ ಸವಾಲು ಎದುರಾಗಲಿದೆ ಎನ್ನಲಾಗಿದೆ.

  ಇದನ್ನೂ ಓದಿ: T20 World Cup 2021| 'ನಾನು 3ನೇ ಸ್ಥಾನದಲ್ಲೇ ಆಡುತ್ತೇನೆ ಕೆ.ಎಲ್. ರಾಹುಲ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ'; ವಿರಾಟ್ ಕೊಹ್ಲಿ

  ಪಂದ್ಯ: ಓಮನ್ vs ಬಾಂಗ್ಲಾದೇಶ

  ಯಾವಾಗ: ಅಕ್ಟೋಬರ್ 19, ಮಂಗಳವಾರ

  ಎಲ್ಲಿ: ಅಲ್ ಅಮೆರತ್ ಕ್ರಿಕೆಟ್ ಮೈದಾನ

  ಸಮಯ: 7:30 PM IST

  ಪೂರ್ಣ ತಂಡಗಳು

  ಬಾಂಗ್ಲಾದೇಶ: ಮಹ್ಮದುಲ್ಲಾ (ನಾಯಕ), ಲಿಟನ್ ದಾಸ್, ಮೊಹಮ್ಮದ್ ನಯೀಮ್, ಮಹೇದಿ ಹಸನ್, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್, ಮುಷ್ಫಿಕರ್ ರಹೀಮ್, ನೂರುಲ್ ಹಸನ್ (ವಿಕೆಟ್ ಕೀಪರ್), ಅಫೀಫ್ ಹುಸೇನ್, ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಶಮೀಮ್ ಹೊಸೈನ್, ಮುಸ್ತಫಿಜುರ್ ರಹಮಾನ್, ಮೊಹಮ್ಮದ್ ಸೈಫುದ್ದೀನ್.

  ಇದನ್ನೂ ಓದಿ: ICC Rule: ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯದಲ್ಲಿ 12 ಜನ ಒಂದೇ ತಂಡದಲ್ಲಿ ಆಡಬಹುದು ಹೇಗೆ ಗೊತ್ತಾ?

  ಒಮಾನ್: ಝೀಷಾನ್ ಮಕ್ಸೂದ್ (ನಾಯಕ), ಅಕಿಬ್ ಇಲ್ಯಾಸ್, ಜತೀಂದರ್ ಸಿಂಗ್, ಖಾವರ್ ಅಲಿ, ಮೊಹಮ್ಮದ್ ನದೀಮ್, ಅಯಾನ್ ಖಾನ್, ಸೂರಜ್ ಕುಮಾರ್, ಸಂದೀಪ್ ಗೌಡ್, ನೆಸ್ಟರ್ ದಂಬಾ, ಕಲೀಮುಲ್ಲಾ, ಬಿಲಾಲ್ ಖಾನ್, ನಸೀಮ್ ಖುಷಿ, ಸುಫ್ಯಾನ್ ಮೆಹಮೂದ್, ಫಯಾಜ್ ಬಟ್, ಖುರಂ ನವಾಜ್.
  Published by:MAshok Kumar
  First published: