Fake Fielding: ಮೊದಲ ಟಿ-20ಯಲ್ಲಿ ಟೀಂ ಇಂಡಿಯಾ ಆಟಗಾರನಿಂದ ಫೇಕ್ ಫೀಲ್ಡಿಂಗ್; ಇಲ್ಲಿದೆ ವಿಡಿಯೋ

Manish Pandey Fake Fielding: ಕ್ರಿಕೆಟ್ ನಿಯಮದ ಪ್ರಕಾರ ಒಬ್ಬ ಆಟಗಾರ ಉದ್ದೇಶಪೂರ್ವಕವಾಗಿ ಬ್ಯಾಟ್ಸ್‌ಮನ್‌ ರನ್ ಕಲೆಹಾಕುವಾಗ ತೊಂದರೆಗೊಳಿಸಲು ಇಂತಹ ಪ್ರಯತ್ನ ಮಾಡಿದರೆ, ಫೀಲ್ಡಿಂಗ್ ತಂಡಕ್ಕೆ ಐದು ರನ್ ದಂಡ ವಿಧಿಸಲಾಗುತ್ತದೆ.

Vinay Bhat | news18-kannada
Updated:January 25, 2020, 11:00 AM IST
Fake Fielding: ಮೊದಲ ಟಿ-20ಯಲ್ಲಿ ಟೀಂ ಇಂಡಿಯಾ ಆಟಗಾರನಿಂದ ಫೇಕ್ ಫೀಲ್ಡಿಂಗ್; ಇಲ್ಲಿದೆ ವಿಡಿಯೋ
ಟೀಂ ಇಂಡಿಯಾ ಆಟಗಾರರು.
  • Share this:
ಬೆಂಗಳೂರು (ಜ. 25): ಆಕ್ಲೆಂಡ್​ನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟಿ-20 ಪಂದ್ಯದಲ್ಲಿ ಕೊಹ್ಲಿ ಪಡೆ ಭರ್ಜರಿ ಗೆಲುವು ಸಾಧಿಸಿತು. ಬೌಲರ್​ಗಳ ವೈಫಲ್ಯದ ನಡುವೆಯೂ ಭಾರತೀಯ ಬ್ಯಾಟ್ಸ್​ಮನ್​ಗಳು ಅತ್ಯುತ್ತಮ ಪ್ರದರ್ಶನ ನೀಡಿ, 5 ಟಿ-20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು.

ಆದರೆ, ನ್ಯೂಜಿಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್​ನ 20ನೇ ಓವರ್​ನಲ್ಲಿ ಟೀಂ ಇಂಡಿಯಾ ಆಟಗಾರ ಮನೀಶ್ ಪಾಂಡೆ ಫೇಕ್ ಫೀಲ್ಡಿಂಗ್ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

 New Zealand vs India: Umpires fail to notice Manish Pandey’s fake fielding attempt in Auckland
ಮನೀಶ್ ಪಾಂಡೆ.


Under-19 World Cup: ಕ್ವಾರ್ಟರ್ ಫೈನಲ್​ಗೇರಿದ ಭಾರತ; ಮುಂದಿನ ಎದುರಾಳಿ ಆಸ್ಟ್ರೇಲಿಯಾ!

20ನೇ ಓವರ್ ಬೌಲಿಂಗ್ ಮಾಡಲು ಬಂದ ಜಸ್​ಪ್ರೀತ್ ಬುಮ್ರಾ, ಮೊದಲ ಎಸೆತದಲ್ಲಿ ರಾಸ್ ಟೇಲರ್ ಚೆಂಡನ್ನು ಡೀಪ್ ಮಿಡ್ ವಿಕೆಟ್​ನತ್ತ ಅಟ್ಟಿದರು. ಈ ಸಂದರ್ಭ ಫೀಲ್ಡಿಂಗ್​ನಲ್ಲಿದ್ದ ಮನೀಶ್ ಪಾಂಡೆ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು.

ಆದರೂ ತಮ್ಮ ಕೈಯಲ್ಲಿ ಚೆಂಡು ಇದೆ ಎಂಬಂತೆ ಕೈ ಸನ್ನೆಯಲ್ಲಿ ಬಾಲ್ ಅನ್ನು ಬೌಲರ್​ನತ್ತ ಎಸೆಯುವಂತೆ ಮಾಡಿದರು. ಇದರಿಂದ ಬ್ಯಾಟ್ಸ್​ಮನ್​ ಒಂದು ರನ್​ಗೆ ತೃಪ್ತಿ ಪಡಬೇಕಾಯಿತು.

ಕ್ರಿಕೆಟ್ ನಿಯಮದ ಪ್ರಕಾರ ಈ ರೀತಿ ಮಾಡುವಂತಿಲ್ಲ. ಮನೀಶ್ ಪಾಂಡೆ ಹಾಗೂ ಟೀಂ ಇಂಡಿಯಾ ಅದೃಷ್ಟದ ಫಲದಿಂದ ಅಂಪೈರ್ ಇದನ್ನು ಗಮನಿಸಿರಲಿಲ್ಲ. ಎಲ್ಲಾದರು ಅಂಪೈರ್ ಇದನ್ನು ಕಂಡಿದ್ದಲ್ಲಿ ನ್ಯೂಜಿಲೆಂಡ್ ಖಾತೆಗೆ 5 ರನ್​ಗಳ ಸೇರುತ್ತಿದ್ದವು. IPL 2020: ಅಬ್ಬಾ… ಆರ್​ಸಿಬಿಯ ಒಬ್ಬೊಬ್ಬ ಆಟಗಾರ ಈ ಬಾರಿ ಪಡೆಯುತ್ತಿರು ಸ್ಯಾಲರಿ ಎಷ್ಟು ಗೊತ್ತಾ?

ಕ್ರಿಕೆಟ್ ನಿಯಮದ ಪ್ರಕಾರ ಒಬ್ಬ ಆಟಗಾರ ಉದ್ದೇಶಪೂರ್ವಕವಾಗಿ ಬ್ಯಾಟ್ಸ್‌ಮನ್‌ ರನ್ ಕಲೆಹಾಕುವಾಗ ತೊಂದರೆಗೊಳಿಸಲು ಇಂತಹ ಪ್ರಯತ್ನ ಮಾಡಿದರೆ, ಫೀಲ್ಡಿಂಗ್ ತಂಡಕ್ಕೆ ಐದು ರನ್ ದಂಡ ವಿಧಿಸಲಾಗುತ್ತದೆ.

ಮೊದಲು ಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿತು. ಟಾರ್ಗೆಟ್ ಬೆನ್ನಟ್ಟಿದ ಭಾರತ ಕೆ ಎಲ್ ರಾಹುಲ್(56) ಹಾಗೂ ಶ್ರೇಯಸ್ ಐಯರ್(58*) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19 ಓವರ್​ನಲ್ಲೇ ಗೆಲುವು ಸಾಧಿಸಿತು.

First published:January 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ