HOME » NEWS » Sports » CRICKET NZ VS AUS AUSTRALIA WOMENS CRICKET TEAM SETS NEW WORLD RECORD IN ODIS ZP

NZ vs AUS: ಗೆಲುವಿನ ನಾಗಾಲೋಟದೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 212 ರನ್​ ಕಲೆಹಾಕಿತು. ಈ ಗುರಿ ಬೆನ್ನತಿದ ಆಸ್ಟ್ರೇಲಿಯಾ ಅಲಿಸ್ಸಾ ಹೀಲಿ(65, 68 ಎಸೆತ), ಎಲ್ಲಿಸ್ ಪೆರ್ರಿ(ಅಜೇಯ 56) ಹಾಗೂ ಅಶ್ಲೆ ಗಾರ್ಡ್‍ನೆರ್(53, 41 ಎಸೆತ) ಅವರ ಅರ್ಧಶತಕದ ನೆರವಿನಿಂದ 38.3 ಓವರ್​ಗಳಲ್ಲಿ ಗುರಿ ಮುಟ್ಟಿ ಗೆಲುವಿನ ನಗೆ ಬೀರಿತು.

news18-kannada
Updated:April 4, 2021, 8:25 PM IST
NZ vs AUS: ಗೆಲುವಿನ ನಾಗಾಲೋಟದೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ
australia womens
  • Share this:
ಕ್ರಿಕೆಟ್ ಅಂಗಳದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಹೊಸ ಇತಿಹಾಸ ಬರೆದಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್​ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ ಮಹಿಳೆಯರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ವಿಶ್ವದಾಖಲೆ ನಿರ್ಮಿಸಿತು. ಹೌದು, ಇದೇ ಮೊದಲ ಬಾರಿ ಏಕದಿನ ಕ್ರಿಕೆಟ್​ನಲ್ಲಿ ಸತತ 22 ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮಹಿಳಾ ತಂಡ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ಬರೆದಿದೆ. ಈ ಹಿಂದೆ ಈ ದಾಖಲೆ ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ಪರುಷರ ತಂಡದ ಹೆಸರಿನಲ್ಲಿತ್ತು.

ಆಸ್ಟ್ರೇಲಿಯಾ 2003 ರಲ್ಲಿ ಸತತ 21 ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿತ್ತು. ಇದೀಗ ಆಸ್ಟ್ರೇಲಿಯಾ ಮಹಿಳೆಯರು ಸತತ 22 ಗೆಲುವಿನೊಂದಿಗೆ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇನ್ನು ಏಕದಿನ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ತಂಡವು ಕೊನೆಯ ಬಾರಿ ಸೋಲನುಭವಿಸಿರುವುದು 2017 ರಲ್ಲಿ ಎಂಬುದು ತಂಡದ ಬಲಿಷ್ಠೆತೆ ಹಿಡಿದ ಕನ್ನಡಿಯಾಗಿದೆ.

ಆಸ್ಟ್ರೇಲಿಯದ ಅಜೇಯ ಗೆಲುವಿನ ನಾಗಾಲೋಟವು 2018ರ ಮಾರ್ಚ್ 12 ರಂದು ಭಾರತದ ವಿರುದ್ಧ 3-0 ಸರಣಿ ಗೆಲುವಿನೊಂದಿಗೆ ಆರಂಭವಾಗಿತ್ತು. ಆ ಬಳಿಕ ಪಾಕಿಸ್ತಾನದ ವಿರುದ್ಧ 3-0, ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ನ್ಯೂಜಿಲೆಂಡ್​ ವಿರುದ್ಧ 3-0 ಅಂತರದಿಂದ ಸರಣಿ ಜಯಿಸಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸುವ ಮೂಲಕ ಸತತ 22 ಗೆಲುವುಗಳ ದಾಖಲೆ ನಿರ್ಮಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 212 ರನ್​ ಕಲೆಹಾಕಿತು. ಈ ಗುರಿ ಬೆನ್ನತಿದ ಆಸ್ಟ್ರೇಲಿಯಾ ಅಲಿಸ್ಸಾ ಹೀಲಿ(65, 68 ಎಸೆತ), ಎಲ್ಲಿಸ್ ಪೆರ್ರಿ(ಅಜೇಯ 56) ಹಾಗೂ ಅಶ್ಲೆ ಗಾರ್ಡ್‍ನೆರ್(53, 41 ಎಸೆತ) ಅವರ ಅರ್ಧಶತಕದ ನೆರವಿನಿಂದ 38.3 ಓವರ್​ಗಳಲ್ಲಿ ಗುರಿ ಮುಟ್ಟಿ ಗೆಲುವಿನ ನಗೆ ಬೀರಿತು.
Published by: zahir
First published: April 4, 2021, 8:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories