HOME » NEWS » Sports » CRICKET NOTTINGHAMSHIRE TIED WITH LANCASHIRE AS BOTH TEAMS BAGGED A POINT EACH ZP

Finn Allen: RCB ಆಟಗಾರ ಅಲೆನ್ ಅಬ್ಬರ: ರೋಚಕ ಪಂದ್ಯ ಟೈನಲ್ಲಿ ಅಂತ್ಯ..!

ಈ ಕಠಿಣ ಗುರಿ ಬೆನ್ನತ್ತಿದ ಲಂಕಾಶೈರ್​ ತಂಡಕ್ಕೆ ಆರ್​ಸಿಬಿ ಆಟಗಾರ ಫಿನ್ ಅಲೆನ್ ಹಾಗೂ ಕೇಟನ್ ಜೆನ್ನಿಂಗ್ಸ್ ಉತ್ತಮ ಆರಂಭ ಒದಗಿಸಿದರು. ಅದರಲ್ಲೂ ಆರಂಭದಿಂದಲೇ ಅಬ್ಬರಿಸಿದ ಅಲೆನ್ ನ್ಯಾಟಿಂಗ್​ಹ್ಯಾಮ್ ಬೌಲರುಗಳ ಬೆಂಡೆತ್ತಿದರು.

news18-kannada
Updated:June 21, 2021, 9:45 PM IST
Finn Allen: RCB ಆಟಗಾರ ಅಲೆನ್ ಅಬ್ಬರ: ರೋಚಕ ಪಂದ್ಯ ಟೈನಲ್ಲಿ ಅಂತ್ಯ..!
Finn allen
  • Share this:
ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್​ ಲೀಗ್​ನಲ್ಲಿ ಭಾನುವಾರ ನಡೆದ ಲಂಕಾಶೈರ್-ನಾಟಿಂಗ್​ಹ್ಯಾಮ್​ಶೈರ್ ನಡುವಣ​ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಗಿತ್ತು. ಟಾಸ್ ಗೆದ್ದ ನಾಟಿಂಗ್​ಹ್ಯಾಮ್​ಶೈರ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ಅವರ 33 ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಟಾಮ್ ಮೂರ್ಸ್ ಬಾರಿಸಿದ 48 ರನ್​ಗಳ ನೆರವಿನಿಂದ ನಾಟಿಂಗ್​ಹ್ಯಾಮ್​ಶೈರ್ ನಿಗದಿತ 20 ಓವರ್​ಗಳಲ್ಲಿ 10 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿತು.

ಈ ಕಠಿಣ ಗುರಿ ಬೆನ್ನತ್ತಿದ ಲಂಕಾಶೈರ್​ ತಂಡಕ್ಕೆ ಆರ್​ಸಿಬಿ ಆಟಗಾರ ಫಿನ್ ಅಲೆನ್ ಹಾಗೂ ಕೇಟನ್ ಜೆನ್ನಿಂಗ್ಸ್ ಉತ್ತಮ ಆರಂಭ ಒದಗಿಸಿದರು. ಅದರಲ್ಲೂ ಆರಂಭದಿಂದಲೇ ಅಬ್ಬರಿಸಿದ ಅಲೆನ್ ನ್ಯಾಟಿಂಗ್​ಹ್ಯಾಮ್ ಬೌಲರುಗಳ ಬೆಂಡೆತ್ತಿದರು. ಪರಿಣಾಮ ಮೊದಲ 10 ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವು 100ರ ಗಡಿದಾಟಿತು. ಅಲ್ಲದೆ ಭರ್ಜರಿ ಸಿಕ್ಸರ್​ನೊಂದಿಗೆ ಫಿನ್ ಅಲೆನ್ ಅರ್ಧಶತಕ ಪೂರೈಸಿದರು.

ಕೇವಲ 12.5 ಓವರ್​ನಲ್ಲಿ ತಂಡದ ಮೊತ್ತವನ್ನು 118 ಕ್ಕೆ ತಂದು ನಿಲ್ಲಿಸಿದ ಅಲೆನ್ ಬಿರುಸಿನ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. ಅಷ್ಟರಲ್ಲಾಗಲೇ ಅಲೆನ್ 3 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 43 ಎಸೆತಗಳಲ್ಲಿ 60 ರನ್ ಚಚ್ಚಿದ್ದರು. ಅಲೆನ್ ಅಬ್ಬರದ ನೆರವಿನಿಂದ ಲಂಕಾಶೈರ್​ಗೆ ಗೆಲ್ಲಲು ಅಂತಿಮ 42 ಎಸೆತಗಳಲ್ಲಿ 54 ರನ್​ಗಳ ಅವಶ್ಯಕತೆಯಿತ್ತು. ಅಂತಿಮ ಎಸೆತದಲ್ಲಿ 2 ರನ್​ ಬೇಕಿದ್ದ ವೇಳೆ ಜೆನ್ನಿಂಗ್ಸ್​ ರನೌಟ್ ಆಗುವ ಮೂಲಕ ಗೆಲ್ಲಬಹುದಾಗಿದ್ದ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ಇತ್ತ ಒಂದು ಹಂತದಲ್ಲಿ ಇಡೀ ಪಂದ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಫಿನ್ ಅಲೆನ್ ಅವರು ಕೂಡ ಪಂದ್ಯ ಟೈ ಆಗಿದ್ದರಿಂದ ನಿರಾಸೆಗೊಂಡರು. ಪಂದ್ಯ ಟೈ ಆಗಿದ್ದ ಕಾರಣ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು.
Youtube Video

ಸದ್ಯ ಟಿ20 ಬ್ಲಾಸ್ಟ್​​ನಲ್ಲಿ ಫಿನ್ ಅಲೆನ್ ಅಬ್ಬರ ಮುಂದುವರೆದಿದ್ದು, ಯುಎಇ ನಲ್ಲೂ ನಡೆಯಲಿರುವ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಆಡುವ ಅವಕಾಶ ಸಿಗುವ ವಿಶ್ವಾಸದಲ್ಲಿದ್ದಾರೆ ಕಿವೀಸ್ ಬ್ಯಾಟ್ಸ್​ಮನ್.
Published by: zahir
First published: June 21, 2021, 9:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories