ಧವನ್ ಸ್ಥಾನಕ್ಕೆ ಪಂತ್-ಕಾರ್ತಿಕ್-ಶಂಕರ್ ಅಲ್ಲ; ಲಂಡನ್ ಫ್ಲೈಟ್ ಏರಲಿದ್ದಾನೆ ಈ ಆಟಗಾರ?

Ajinkya Rahane: ವಿಶ್ವಕಪ್​ನಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಅನುಭವಿ ಬಲಗೈ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ ಅವರು ಧವನ್ ಬದಲು ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ

Vinay Bhat | news18
Updated:June 11, 2019, 6:57 PM IST
ಧವನ್ ಸ್ಥಾನಕ್ಕೆ ಪಂತ್-ಕಾರ್ತಿಕ್-ಶಂಕರ್ ಅಲ್ಲ; ಲಂಡನ್ ಫ್ಲೈಟ್ ಏರಲಿದ್ದಾನೆ ಈ ಆಟಗಾರ?
ಶಿಖರ್ ಧವನ್
  • News18
  • Last Updated: June 11, 2019, 6:57 PM IST
  • Share this:

ಬೆಂಗಳೂರು (ಜೂ. 11):  ಬಾರಿಯ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಬಲಿಷ್ಠ ತಂಡವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ ಎನ್ನುವಾಗಲೇ ದೊಡ್ಡ ಆಘಾತ ಎದುರಾಗಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಗಾಯಕ್ಕೆ ತುತ್ತಾಗಿ ಮೂರು ವಾರಗಳ ಕಾಲ ವಿಶ್ವಕಪ್ನಿಂದ ಹೊರ ಬಿದ್ದಿದ್ದಾರೆ.

ಮುಂಬರುವ ಮೂರು ವಾರಗಳಲ್ಲಿ ಟೀಂ ಇಂಡಿಯಾ ಪ್ರಮುಖ ತಂಡಗಳ ವಿರುದ್ಧ ಸೆಣೆಸಾಟ ನಡೆಸಲಿದೆ. ಹೀಗಾಗಿ ಧವನ್ ಅನುಪಸ್ಥಿತಿಯಲ್ಲಿ ಅವರ ಸ್ಥಾನಕ್ಕೆ ಯಾವ ಆಟಗಾರರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಭಾರತ ತಂಡ ಇದೇ ಜೂನ್ ತಿಂಗಳಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಆಫ್ಘಾನಿಸ್ತಾನ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಐದು ಪಂದ್ಯಗಳು ಟೀಂ ಇಂಡಿಯಾಕ್ಕೆ ಬಹುಮುಖ್ಯ. ಹೀಗಾಗಿ ಧವನ್ ಜಾಗಕ್ಕೆ ಆರಂಭಿಕ ಆಟಗಾರನಾಗಿ ಮತ್ತೊಬ್ಬ ಅನುಭವಿಯನ್ನೇ ಆಡಿಸುವ ಅಂದಾಜಿದೆ.


'ಡಿವಿಲಿಯರ್ಸ್​​ ನಿವೃತ್ತಿ ಹಿಂದಕ್ಕೆ ಪಡೆಯುವೆ ಹೇಳಿದಾಗ ಕಾಲ ಮಿಂಚಿಹೋಗಿತ್ತು': ಡುಪ್ಲೆಸಿಸ್

ವಿಶ್ವಕಪ್​ನಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಅನುಭವಿ ಬಲಗೈ ಬ್ಯಾಟ್ಸ್​ಮನ್​ ಅಜಿಂಕ್ಯ ರಹಾನೆ ಅವರು ಧವನ್ ಬದಲು ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಕಡೆಗಳಿಂದ ಕೇಳಿಬರುತ್ತದೆ.Not Rishabh Pant, Ajinkya Rahane Should Replace Injured Shikhar Dhawan in Team India Squad for CWC 2019, Feel Twitterati!
ಅಜಿಂಕ್ಯ ರಹಾನೆ

ರಹಾನೆ ಆಂಗ್ಲರ ನಾಡಲ್ಲಿ ಉತ್ತಮ ರೆಕಾರ್ಡ್​ ಹೊಂದಿದ್ದು, ಜೊತೆಗೆ ಫಾರ್ಮ್​ನಲ್ಲೂ ಇದ್ದಾರೆ. ಹೀಗಾಗಿ ರಹಾನೆ ಲಂಡನ್ ಫ್ಲೈಟ್ ಏರಲಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.


ಇದರ ಜೊತೆ ರಿಷಭ್ ಪಂತ್ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಲೂ ಇವೆ. ಹೀಗೆಲ್ಲಾದರು ಆದಲ್ಲಿ ಸದ್ಯ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಕೆ ಎಲ್ ರಾಹುಲ್ ಅವರು ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿಯಬೇಕಾಗುತ್ತದೆ. 4ನೇ ಕ್ರಮಾಂಕದಲ್ಲಿ ಪಂತ್ ಆಡಬೇಕು. ಪಂತ್ ಎಲ್ಲಾದರು ವೈಫಲ್ಯ ಕಂಡರೆ ಮತ್ತೆ ನಾಲ್ಕನೇ ಸ್ಥಾನದಲ್ಲಿ ಸಮಸ್ಯೆ ಎದುರಾಗಲಿದೆ.


ಹೀಗಾಗಿ ಸದ್ಯ 4ನೇ ಕ್ರಮಾಂಕಕ್ಕೆ ಫಿಕ್ಸ್​ ಆಗಿರುವ ರಾಹುಲ್​​ರನ್ನು ಆ ಸ್ಥಾನದಿಂದ ಕೈ ಬಿಡದೆ ಅನುಭವಿ ಓಪನರ್ ಆಗಿರುವ ರಹಾನೆಯನ್ನು ಆಯ್ಕೆ ಮಾಡುವ ಸಂಬವ ಹೆಚ್ಚಿದೆ ಎಂಬುದು ಕ್ರೀಡಾ ಪಂಡಿತರ ಅನಿಸಿಕೆಯಾಗಿದೆ.

ಧವನ್ ಇಲ್ಲದೆ ಬಲಿಷ್ಠ ತಂಡದೆದುರು ಭಾರತ ಕಣಕ್ಕೆ; ಶಿಖರ್ ಜಾಗವನ್ನು ತುಂಬುವವರಾರು?

 First published:June 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ