Chris Gayle: ಎರಡು ಪಂದ್ಯದಲ್ಲಿ ಫೇಲ್ ಆದರೆ ನಾನು ಆ ತಂಡಕ್ಕೆ ಬೇಡ; ವಿದಾಯದ ವೇಳೆ ಗೇಲ್ ಭಾವುಕ!

ಎಂಎಸ್​ಎಲ್​ ಟೂರ್ನಿಯ ಒಟ್ಟು ಆರು ಪಂದ್ಯಗಳಲ್ಲಿ ಗೇಲ್ ಕಲೆಹಾಕಿರುವುದು ಕೇವಲ 101 ರನ್ ಮಾತ್ರ. ಜೋಝಿ ಸ್ಟಾರ್ಸ್ ತಂಡದಲ್ಲಿ ಕಳಪೆ ಪ್ರದರ್ಶನ ನೀಡಿದ ಗೇಲ್ ಅನೇಕರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂತು.

news18-kannada
Updated:November 28, 2019, 5:57 PM IST
Chris Gayle: ಎರಡು ಪಂದ್ಯದಲ್ಲಿ ಫೇಲ್ ಆದರೆ ನಾನು ಆ ತಂಡಕ್ಕೆ ಬೇಡ; ವಿದಾಯದ ವೇಳೆ ಗೇಲ್ ಭಾವುಕ!
ಕ್ರಿಸ್ ಗೇಲ್
  • Share this:
ಬೆಂಗಳೂರು (ನ. 26): ವೆಸ್ಟ್​ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್ ಗೇಲ್​ಗೆ ಈಗ 40 ವರ್ಷ. ಆದರೂ ವಿಶ್ವದ ಟಿ-20 ಕ್ರಿಕೆಟ್​ನಲ್ಲಿ ಇವರು ಬಹುಬೇಡಿಕೆಯ ಆಟಗಾರ. ಈಗಾಗಲೇ ಅನೇಕ ದೇಶಗಳಲ್ಲಿ ಎಲ್ಲಾ ಮಾದರಿಯ ಟೂರ್ನಮೆಂಟ್​ನಲ್ಲೂ ಗೇಲ್ ಆಡಿದ್ದಾರೆ.

ಅಂತೆಯೆ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಝೂನ್ಸಿ ಸೂಪರ್ ಲೀಗ್​​ನಲ್ಲೂ ಗೇಲ್ ಕಣಕ್ಕಿಳಿದರು. ಆದರೆ, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಗೇಲ್, ನೋವಿನೊಂದಿಗೆ ಎಂಎಸ್​ಎಲ್​ ಟೂರ್ನಿಗೆ ವಿದಾಯ ಘೋಷಿಸಿದ್ದಾರೆ.

(VIDEO): ಪಂದ್ಯ ನಡೆಯುತ್ತಿರುವಾಗ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ ಗೇಲ್!

ಎಂಎಸ್​ಎಲ್​ ಟೂರ್ನಿಯ ಒಟ್ಟು ಆರು ಪಂದ್ಯಗಳಲ್ಲಿ ಗೇಲ್ ಕಲೆಹಾಕಿರುವುದು ಕೇವಲ 101 ರನ್ ಮಾತ್ರ. ಜೋಝಿ ಸ್ಟಾರ್ಸ್ ತಂಡದಲ್ಲಿ ಕಳಪೆ ಪ್ರದರ್ಶನ ನೀಡಿದ ಗೇಲ್ ಅನೇಕರ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂತು.

ಈ ವಿಚಾರದ ಬಗ್ಗೆ ಬೇಸರ ಹೊರಹಾಕಿರುವ ಗೇಲ್, “ಕ್ರಿಸ್ ಗೇಲ್ ಎರಡೂ, ಮೂರು ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಸಾಕು, ನಾನು ತಂಡಕ್ಕೆ ಭಾರ ಎನ್ನುವ ಭಾವನೆ ಎಲ್ಲರಲ್ಲೂ ಬಂದಿರುತ್ತದೆ. ಅಭಿಮಾನಿಗಳು, ಮಾಧ್ಯಮ ಮಾತ್ರವಲ್ಲ, ಫ್ರಾಂಚೈಸಿ, ತಂಡದ ಸಹ ಆಟಗಾರರು ಕೂಡ ಗೌರವ ನೀಡುತ್ತಿಲ್ಲ. ನಾನು ಕೇವಲ ಒಂದು ಟೂರ್ನಿ ಬಗ್ಗೆ ಮಾತನಾಡುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ಆಡುತ್ತಿರುವ ಎಲ್ಲ ಟಿ-20 ಲೀಗ್ ಹಾಗೂ ಫ್ರಾಂಚೈಸಿ ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ" ಎಂದು ಗೇಲ್ ತಮ್ಮಲ್ಲಿರುವ ನೋವನ್ನು ಹೊರ ಹಾಕಿದ್ದಾರೆ.

ಬಾಡಿಗೆ ಬೇಡ ಎಂದ ಭಾರತೀಯ ಕ್ಯಾಬ್ ಚಾಲಕನಿಗೆ ಪಾಕ್ ಆಟಗಾರರಿಂದ ಡಿನ್ನರ್ ಪಾರ್ಟಿ!

"ಕಳಪೆ ಫಾರ್ಮ್​ನಲ್ಲಿದ್ದಾಗ ನನಗೆ ಕೊಂಚವೂ ಗೌರವ ದೊರೆಯುವುದಿಲ್ಲ. ಕೆಟ್ಟ ಆಟಗಾರ, ಆಡೋ ಹನ್ನೊಂದರ ಬಳಗದಲ್ಲಿರುವುದೇ ವೇಸ್ಟ್ ಎಂಬ ಟೀಕೆಗಳನ್ನು ಎದುರಿಸಿದ್ದೇನೆ. ಆ ವೇಳೆ, ನನ್ನ ಹಿಂದಿನ ಎಲ್ಲ ದಾಖಲೆಗಳು ಮರೆತೇ ಹೋಗಿರುತ್ತದೆ. ಕಳಪೆ ಪ್ರದರ್ಶನ ನೀಡಿದರೆ, ಬ್ಯಾಟ್ ಹಿಡಿಯಲು ಗೊತ್ತಿಲ್ಲದ ರೀತಿ ನೋಡುತ್ತಾರೆ. ಗೇಲ್ ರನ್ ಕಲೆಹಾಕಿಲ್ಲ ಎಂದಾದರೆ ಆತನ ಕ್ರಿಕೆಟ್ ಬದುಕು ಮುಗಿಯಿತು ಎಂಬ ಮಾತುಗಳು ಬರುತ್ತವೆ" ಎಂದು ಗೇಲ್ ವಿದಾಯದ ವೇಳೆ ಸುದ್ದಿಗೋಷ್ಠಿಯಲ್ಲಿ ಬೇಸರ ಹೊರಹಾಕಿದ್ದಾರೆ.
Loading...

First published:November 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...