ಕೊರೋನಾ ಎಫೆಕ್ಟ್​; ಐಸಿಸಿಯಿಂದ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆ

Coronavirus Effect: ಆಟಗಾರರ ಜೆರ್ಸಿಯಲ್ಲಿ 32 ಇಂಚಿನ ಹೆಚ್ಚುವರಿ ಲಾಂಛನ ಹಾಕಲು ಅನುಮತಿ ನೀಡಲಾಗಿದೆ. ಈ ಮೂಲಕ ಮಂಡಳಿಗಳ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಸಾಧ್ಯವಾಗಲಿದೆ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ.

news18-kannada
Updated:June 10, 2020, 9:39 AM IST
ಕೊರೋನಾ ಎಫೆಕ್ಟ್​; ಐಸಿಸಿಯಿಂದ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆ
ಟೀಂ ಇಂಡಿಯಾ.
  • Share this:
ಕೊರೋನಾ ವೈರಸ್​ನಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಆಟದ ನಿಯಮಗಳಲ್ಲಿ ಮಧ್ಯಂತರ ಬದಲಾವಣೆಗಳನ್ನು ಸ್ಪಷ್ಟಪಡಿಸಿದೆ. ಇದರಲ್ಲಿ ಪ್ರಮುಖವಾಗಿ ಚೆಂಡನ್ನು ಹೊಳೆಯಲು ಎಂಜಲು ಬಳಸುವುದನ್ನು ನಿಷೇಧಿಸಿದೆ ಮತ್ತು ಅಂತಾರಾಷ್ಟ್ರೀಯ ಸರಣಿಯಲ್ಲಿ ತವರು ಅಂಪೈರ್‌ಗಳಿಗೆ ಅವಕಾಶ ಕಲ್ಪಿಸಿದೆ.

ಅನಿಲ್‌ ಕುಂಬ್ಳೆ ಅಧ್ಯಕ್ಷತೆಯ ಕ್ರಿಕೆಟ್‌ ಸಮಿತಿ ಶಿಫಾರಸು ಮಾಡಿದ ಮತ್ತು ಮುಖ್ಯ ಕಾರ್ಯನಿರ್ವಾಹಕ ಸಮಿತಿ ಅನುಮೋದಿಸಿದ ಐದು ಹೊಸ ನಿಯಮಗಳಿಗೆ ಐಸಿಸಿ ಒಪ್ಪಿಗೆ ಸೂಚಿಸಿದೆ.

Dhoni: ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕನ್ನಡಿಗ ಕಾರಣ ಎಂದರೆ ನಂಬಲೇ ಬೇಕು!

ಹೆಚ್ಚುವರಿ ಡಿಆರ್‌ಎಸ್‌ ಕರೆ ಮತ್ತು ದ್ವಿಪಕ್ಷೀಯ ಟೆಸ್ಟ್‌ ಸರಣಿ ವೇಳೆ ತವರಿನ ಅಂಪಾಯರ್‌ಗಳು ಕರ್ತವ್ಯ ನಿರ್ವಹಿಸಲು ಐಸಿಸಿ ಒಪ್ಪಿಗೆ ನೀಡಿರುವುದು ತುಂಬಾನೆ ಉಪಕಾತರಿಯಾಗಿದೆ. ಇದರ ಜೊತೆ ಟೆಸ್ಟ್‌ ಪಂದ್ಯಗಳಲ್ಲಿ ಯಾವೊಬ್ಬ ಆಟಗಾರನಲ್ಲಿ ಕೋವಿಡ್‌-19 ಲಕ್ಷಣಗಳು ಕಂಡುಬಂದಲ್ಲಿ, ಅಂತಹ ಆಟಗಾರರಿಗೆ ಬದಲಿ ಆಟಗಾರನನ್ನು ಆಡಿಸುವ ಅವಕಾಶ ನೀಡಲಾಗಿದೆ.

ಇನ್ನೂ ಆಟಗಾರರ ಜೆರ್ಸಿಯಲ್ಲಿ 32 ಇಂಚಿನ ಹೆಚ್ಚುವರಿ ಲಾಂಛನ ಹಾಕಲು ಅನುಮತಿ ನೀಡಲಾಗಿದೆ. ಈ ಮೂಲಕ ಮಂಡಳಿಗಳ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಸಾಧ್ಯವಾಗಲಿದೆ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ. ಪಂದ್ಯದಲ್ಲಿ ಕಡಿಮೆ ಅನುಭವದ ಅಂಪೈರ್‌ಗಳು ಇರುವುದನ್ನು ಗಮನದಲ್ಲಿಟ್ಟುಕೊಂಡು ಒಂದು ಇನಿಂಗ್ಸ್‌ನಲ್ಲಿ ಪ್ರತಿ ತಂಡಕ್ಕೆ ಹೆಚ್ಚುವರಿ ವಿಫಲ ಡಿಆರ್‌ಎಸ್ ವಿಮರ್ಶೆಯನ್ನು ನೀಡಲಾಗಿದೆ.

ದಕ್ಷಿಣ ಭಾರತದ ಕ್ರಿಕೆಟಿಗರು ಜನಾಂಗೀಯ ನಿಂದನೆಗೆ ಗುರಿಯಾಗುತ್ತಾರೆ: ಬಹಿರಂಗಪಡಿಸಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ..!

ಆದರೆ, ಕೋವಿಡ್‌-19 ಬದಲಾವಣೆಗಳು ಏಕದಿನ ಮತ್ತು ಟಿ-20 ಪಂದ್ಯಗಳಿಗೆ ಅನ್ವಯವಾಗುವುದಿಲ್ಲ ಎಂದು ಐಸಿಸಿ ತಿಳಿಸಿದೆ.
First published: June 10, 2020, 9:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading