ಟೀಂ ಇಂಡಿಯಾದಲ್ಲಿ ಸ್ಥಾನವನ್ನು ನನಗೆ ಯಾರೂ ಉಡುಗೊರೆಯಾಗಿ ಕೊಟ್ಟಿದ್ದಲ್ಲ, ನಾನೇ ಸಂಪಾದಿಸಿದ್ದು; ಪಂತ್

ಒಬ್ಬ ಆಟಗಾರನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅದೃಷ್ಟ. ನಾನು ಯಾವುದನ್ನು ಉಚಿತವಾಗಿ ಪಡೆದುಕೊಂಡಿಲ್ಲ. ಸಾಕಷ್ಟು ಶ್ರಮ ವಹಿಸಿದ್ದೇನೆ- ರಿಷಭ್ ಪಂತ್

Vinay Bhat | news18-kannada
Updated:September 7, 2019, 3:02 PM IST
ಟೀಂ ಇಂಡಿಯಾದಲ್ಲಿ ಸ್ಥಾನವನ್ನು ನನಗೆ ಯಾರೂ ಉಡುಗೊರೆಯಾಗಿ ಕೊಟ್ಟಿದ್ದಲ್ಲ, ನಾನೇ ಸಂಪಾದಿಸಿದ್ದು; ಪಂತ್
ರಿಷಭ್ ಪಂತ್
  • Share this:
ಬೆಂಗಳೂರು (ಸೆ. 07): ಉದಯೋನ್ಮುಖ ಆಟಗಾರ ರಿಷಭ್ ಪಂತ್ ಟೀಂ ಇಂಡಿಯಾ ಪರ ಕಣಕ್ಕಿಲಿಯುವಾಗ ಪ್ರತಿ ಬಾರಿ ಎಂ ಎಸ್ ಧೋನಿ ಅವರಿಗೆ ಹೋಲಿಕೆ ಮಾಡಲಾಗುತ್ತದೆ. ಆದರೆ, ಧೋನಿಗೆ ಪೈವೋಟಿ ನೀಡುವ ಬದಲು ನಾನು ಅವರಿಂದ ಕಲಿಯುತ್ತಿದ್ದೇನೆ ಎಂಬುದು ಪಂತ್ ಮಾತು!

ಸಂದರ್ಶನವೊಂದರಲ್ಲಿ ಧೋನಿ ಹಾಗೂ ತನ್ನ ಬಗ್ಗೆ ಮಾತನಾಡಿರುವ ಪಂತ್, 'ಎಂ ಎಸ್ ಧೋನಿ ಜೊತೆ ನನ್ನನ್ನು ಅನೇಕರು ಹೋಲಿಕೆ ಮಾಡುತ್ತಾರೆ. ಅದು ಕಷ್ಟಸಾಧ್ಯ. ನಾನು ಧೋನಿಯಿಂದ ಕಲಿಯುತ್ತಿದ್ದೇನೆ. ನನ್ನ ಕೋಚ್ ಚೆನ್ನಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್​ಗೆ ಇಳಿಯುವ ಮುನ್ನ ಹೇಗೆ ತಯಾರಿ ಮಾಡಿಕೊಳ್ಳಬೇಕು, ಒತ್ತಡದ ಸಂದರ್ಭದಲ್ಲಿ ಯಾವರೀತಿ ಕೀಪಿಂಗ್ ಮಾಡಬೇಕು ಎಂಬ ಬಗ್ಗೆ ಕಲಿಯುತ್ತಿರುವೆ'

ಟೀಂ ಇಂಡಿಯಾಕ್ಕೆ ನಂಬರ್ 4 ಬ್ಯಾಟ್ಸ್​ಮನ್​ ಅಗತ್ಯವೇ ಇಲ್ಲ ಎಂದ ಯುವರಾಜ್ ಸಿಂಗ್

'21 ವರ್ಷದಲ್ಲಿ ಧೋನಿ ರೀತಿ ಪ್ರದರ್ಶನ ನೀಡಬೇಕು ಎಂದರೆ ಕಷ್ಟವಾಗುತ್ತದೆ. ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಪ್ರಯತ್ನಿಸುತ್ತೇನೆ. ಪ್ರತಿಯೊಬ್ಬರಿಂದ ಸಲಹೆ ಪಡೆಯುವೆ'

'ಒಬ್ಬ ಆಟಗಾರನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅದೃಷ್ಟ. ನಾನು ಯಾವುದನ್ನು ಉಚಿತವಾಗಿ ಪಡೆದುಕೊಂಡಿಲ್ಲ. ಸಾಕಷ್ಟು ಶ್ರಮ ವಹಿಸಿದ್ದೇನೆ. ಭಾರತ ತಂಡದಲ್ಲಿ ಯಾರೂ ಕೂಡ ನನಗೆ ಉಡುಗೊರೆಯಾಗಿ ಸ್ಥಾನ ಕೊಟ್ಟಿಲ್ಲ, ಅದು ನಾನೇ ಸಂಪಾದಿಸಿದ್ದು. ನಾವು ಉತ್ತಮ ಪ್ರದರ್ಶನ ನೀಡಿಲ್ಲ ಎಂದಾದರೆ ನಮಗೆ ಸ್ಥಾನ ಸಿಗುವುದಿಲ್ಲ. ಇದು ಎಲ್ಲರಿಗು ಗೊತ್ತಿರುವು ವಿಚಾರ' ಎಂದು ರಿಷಭ್ ಅಭಿಪ್ರಾಯ ಪಟ್ಟಿದ್ದಾರೆ.

ಇವೆರಡು 2019ರ ಹೃದಯ ವಿದ್ರಾವಕ ಫೋಟೋಗಳು; ಟ್ವಿಟ್ಟರ್​ನಲ್ಲಿ ಭಾರತೀಯರ ಬೇಸರ!

ಇನ್ನು ವಿಶ್ವಕಪ್​ನಲ್ಲಿ ಸ್ಥಾನ ಸಿಕ್ಕ ಬಗ್ಗೆ ಮಾತನಾಡಿದ ಪಂತ್, 'ವಿಶ್ವಕಪ್​ನಲ್ಲಿ ಆಡುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ವಿಶ್ವಕಪ್​ಗಾಗಿ ಶ್ರಮ ಪಟ್ಟಿದ್ದೆ. ಅದೊಂದು ಕನಸು ನನಸಾದ ಗಳಿಗೆ. ಈ ರೀತಿಯಾಗಿ ಅವಕಾಶಗಳು ಬರುತ್ತವೆ ಎಂಬುದನ್ನು ಊಹಿಸಲು ಅಸಾಧ್ಯ' ಎಂಬುದು ರಿಷಭ್ ಮಾತು.
First published:September 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ