ಕೊಹ್ಲಿಗೆ ಮೈದಾನದಲ್ಲೇ ಮೈಚಳಿ ಬಿಡಿಸಿದ ಫೀಲ್ಡ್ ಅಂಪೈರ್; ಅಷ್ಟಕ್ಕೂ ಆಗಿದ್ದೇನು..? ನೀವೆ ನೋಡಿ

India vs New Zealand: ಸೋಮವಾರ ಮೂರನೇ ದಿನದ ಆಟದ ವೇಳೆ ಟೀಂ ಇಂಡಿಯಾ ಮಾಡಿರುವ ಮತ್ತೊಂದು ಯಡವಟ್ಟು ಇದೀಗ ಬೆಳಕಿಗೆ ಬಂದಿದೆ. ಭಾರತವನ್ನು ಎರಡನೇ ಇನ್ನಿಂಗ್ಸ್​ನಲ್ಲಿ 124 ರನ್​ಗೆ ಆಲೌಟ್ ಮಾಡಿದ ನ್ಯೂಜಿಲೆಂಡ್, ಗೆಲ್ಲಲು 132 ರನ್​ಗಳ ಗುರಿಯೊಂದಿಗೆ ಕಣಕ್ಕಿಳಿದಿತ್ತು...

Vinay Bhat | news18-kannada
Updated:March 2, 2020, 10:16 AM IST
ಕೊಹ್ಲಿಗೆ ಮೈದಾನದಲ್ಲೇ ಮೈಚಳಿ ಬಿಡಿಸಿದ ಫೀಲ್ಡ್ ಅಂಪೈರ್; ಅಷ್ಟಕ್ಕೂ ಆಗಿದ್ದೇನು..? ನೀವೆ ನೋಡಿ
ವಿರಾಟ್ ಕೊಹ್ಲಿ.
  • Share this:
ಕ್ರೈಸ್ಟ್​ ಚರ್ಚ್​ (ಮಾರ್ಚ್​ 02); ಟಿ-20 ಟೂರ್ನಿಯಲ್ಲಿ ನ್ಯೂಜಿಲೆಂಡ್​ ತಂಡವನ್ನು ವಾಷ್​​ಔಟ್​ ಮಾಡುವ ಮೂಲಕ ಕಿವೀಸ್​ ಪ್ರವಾಸವನ್ನು ಭರ್ಜರಿಯಾಗಿಯೇ ಆರಂಭಿಸಿದ್ದ ಟೀಂ ಇಂಡಿಯಾ ಇದೀಗ ಭಾರೀ ಮುಖಭಂಗದೊಂದಿಗೆ ಪ್ರವಾಸವನ್ನು ಕೊನೆಗೊಳಿಸಿದೆ. ನಾಯಕ ವಿರಾಟ್ ಕೊಹ್ಲಿ ಪಡೆ ಟಿ-20 ಸರಣಿಯಲ್ಲಿ ಕಿವೀಸ್ ಅನ್ನು ಕ್ಲೀನ್​ಸ್ವೀಪ್ ಮಾಡಿದ್ದು ಬಿಟ್ಟರೆ, ಏಕದಿನ ಹಾಗೂ ಟೆಸ್ಟ್​ ಸರಣಿಯಲ್ಲಿ ವೈಟ್​ವಾಷ್ ಮುಖಭಂಗ ಅನುಭವಿಸಿದೆ.

ಆದರೆ, ಕೊಹ್ಲಿ ಪಡೆ ಈ ಸೋಲಿನ ಹೊರತಾಗಿಯೂ ತನ್ನ ಆಕ್ರಮಣಕಾರಿ ನಡವಳಿಕೆಯಿಂದ ಇದೀಗ ಕ್ರಿಕೆಟ್ ಪ್ರಿಯರ ಬೇಸರಕ್ಕೆ ಕಾರಣವಾಗಿದೆ. ಏಕೆಂದರೆ ಎರಡನೇ ಟೆಸ್ಟ್​ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೇರಿ ಟೀಂ ಇಂಡಿಯಾ ಆಟಗಾರರು ಕ್ರಿಕೆಟ್ ಅಂಗಳದಲ್ಲಿ ಅತಿಯಾದ ಆಕ್ರಮಣಕಾರಿ ವರ್ತನೆಯನ್ನು ಪ್ರದರ್ಶಿಸಿದ್ದರು.

IND vs NZ: ಎರಡನೇ ಟೆಸ್ಟ್​ನಲ್ಲೂ ನ್ಯೂಜಿಲೆಂಡ್​ಗೆ ಭರ್ಜರಿ ಜಯ; ಭಾರತಕ್ಕೆ ಭಾರೀ ಮುಖಭಂಗ





ನಿನ್ನೆ ಎರಡನೇ ದಿನ ಫೀಲ್ಡಿಂಗ್ ಮಾಡುವ ವೇಳೆ ಸ್ವತಃ ಕೊಹ್ಲಿ ಕಿವೀಸ್​ ಬ್ಯಾಟ್ಸ್​ಮನ್ ಹೆನ್ರಿ ನಿಕೋಲ್ಸ್​ ಅವರ ಕ್ಯಾಚ್ ಪಡೆದಿದ್ದರು. ಇಷ್ಟಕ್ಕೆ ಸುಮ್ಮನಾಗಿದ್ದರೆ ವಿವಾದ ಇರುತ್ತಿರಲಿಲ್ಲ. ಆದರೆ, ಕ್ಯಾಚ್​ ಹಿಡಿದ ಕೊಹ್ಲಿ ನ್ಯೂಜಿಲೆಂಡ್ ಅಭಿಮಾನಿಗಳ ಕಡೆ ತಿರುಗಿ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು.





IND vs NZ: ಗಾಳಿಯಲ್ಲಿ ಹಾರಿ ಲೆಫ್ಟ್​​ಹ್ಯಾಂಡ್​ನಲ್ಲಿ ಸೂಪರ್ ಮ್ಯಾನ್​ನಂತೆ ಕ್ಯಾಚ್ ಹಿಡಿದ ಜಡೇಜಾ!; ಇಲ್ಲಿದೆ ವಿಡಿಯೋ

ಇದು ಭಾನುವಾರದ ಬೆಳವಣಿಗೆಯಾಗಿದ್ದರೆ ಇನ್ನೂ ಸೋಮವಾರ ಮೂರನೇ ದಿನದ ಆಟದ ವೇಳೆ ಮಾಡಿರುವ ಮತ್ತೊಂದು ಯಡವಟ್ಟು ಇದೀಗ ಬೆಳಕಿಗೆ ಬಂದಿದೆ. ಭಾರತವನ್ನು ಎರಡನೇ ಇನ್ನಿಂಗ್ಸ್​ನಲ್ಲಿ 124 ರನ್​ಗೆ ಆಲೌಟ್ ಮಾಡಿದ ನ್ಯೂಜಿಲೆಂಡ್, ಗೆಲ್ಲಲು 132 ರನ್​ಗಳ ಗುರಿಯೊಂದಿಗೆ ಕಣಕ್ಕಿಳಿದಿತ್ತು. ಓಪನರ್​ಗಳಾದ ಟಾಮ್ ಲೇಥಮ್ ಹಾಗೂ ಟಾಮ್ ಬ್ಲಂಡೆಲ್ ಅಮೋಘ ಆರಂಭ ಒದಗಿಸಿದ್ದರು.

ಈ ನಡುವೆ ಇವರಿಬ್ಬರು ಸಿಂಗಲ್ ರನ್​ಗೆಂದು ಓಡುತ್ತಿರುವಾಗ, ಭಾರತೀಯ ಫೀಲ್ಡರ್ ಒಬ್ಬರು ಡಬಲ್ ಎಂದು ಕೂಗಿದ್ದಾರೆ. ಇದನ್ನ ಮನಗಂಡ ಅಂಪೈರ್ ರಿಚರ್ಡ್ ಕೆಟಲ್ಬರೋ ಕ್ರಮಕ್ಕೆ ಮುಂದಾದರು. ಆದರೆ, ನಾಯಕ ವಿರಾಟ್ ಕೊಹ್ಲಿ, 'ನಾವೇನು ತಪ್ಪು ಮಾಡಿಲ್ಲ. ಅವರು ಎರಡು ರನ್ ಕಲೆಹಾಕಬಾರದೆಂದು ಈ ರೀತಿಯ ತಂತ್ರಗಾರಿಕೆ ಉಪಯೋಗಿಸಿದೆವು' ಎಂದು ಸಮರ್ಥಿಸಿಕೊಳ್ಳಲು ಮುಂದಾದರು.





ಇದರಿಂದ ಮತ್ತಷ್ಟು ಕೋಪಗೊಂಡ ಅಂಪೈರ್, 'ನೀವು ಎರಡು ಎಂದು ಕೂಗಿದ್ದೀರಿ, ಆ ರೀತಿ ಹೇಳುವಂತಿಲ್ಲ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ, ಮುಂದುವರೆಸಬೇಡಿ' ಎಂದು ಸಿಟ್ಟಿನಿಂದಲೇ ಕೊಹ್ಲಿಗೆ ಖಡಕ್ ವಾರ್ನಿಂಗ್​ ನೀಡಿದ್ದಾರೆ.

IND vs NZ: (VIDEO) ಮೈದಾನದಲ್ಲೇ ನ್ಯೂಜಿಲೆಂಡ್ ಅಭಿಮಾನಿಗಳಿಗೆ ಎಫ್ ಶಬ್ದದಿಂದ ಬೈದ ಕೊಹ್ಲಿ..?
Published by: Vinay Bhat
First published: March 2, 2020, 10:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading