Chris Gayle: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ಯುನಿವರ್ಸ್ ಬಾಸ್ ಕ್ರಿಸ್ ಗೇಲ್..!

ಐಪಿಎಲ್​ನ 13ನೇ ಸೀಸನ್​ನಲ್ಲಿ ಕೇವಲ 7 ಪಂದ್ಯವನ್ನಾಡಿದರೂ ಕ್ರಿಸ್ ಗೇಲ್ 3 ಅರ್ಧಶತಕಗಳೊಂದಿಗೆ 288 ರನ್ ಬಾರಿಸಿ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದ್ದಾರೆ. ಇದೇ ಕಾರಣದಿಂದ 41 ರ ಹರೆಯದ ಯುನಿರ್ವಸ್ ಬಾಸ್ ಮುಂದಿನ ಸೀಸನ್​ನಲ್ಲೂ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರಾ? ಕಾದು ನೋಡಬೇಕಿದೆ.

Chris Gayle

Chris Gayle

  • Share this:
    ಸಾವಿರ ಸಿಕ್ಸರ್​ಗಳ ಸರದಾರ ಕ್ರಿಸ್ ಗೇಲ್ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರಾ? ಎಂಬ ಪ್ರಶ್ನೆಯೊಂದು ಐಪಿಎಲ್ ಸೀಸನ್ 13 ಮುಕ್ತಾಯದ ಬೆನ್ನಲ್ಲೇ ಹುಟ್ಟಿಕೊಂಡಿತ್ತು. 2020ರ ಐಪಿಎಲ್​ ಬೆನ್ನಲ್ಲೇ 41 ವರ್ಷದ ಗೇಲ್ ಅವರ ನಿವೃತ್ತಿ ಸುದ್ದಿಗಳು ಹರಿದಾಡಿದ್ದು ಇದಕ್ಕೆ ಮುಖ್ಯ ಕಾರಣ.

    ಆದರೀಗ ಇಂತಹ ಸುಳ್ಳು ಸುದ್ದಿಗಳಿಗೆ ಖುದ್ದು ಕ್ರಿಸ್ ಗೇಲ್ ತೆರೆ ಎಳೆದಿದ್ದಾರೆ. ನಾನು ಯಾವುದೇ ನಿವೃತ್ತಿ ಯೋಚನೆಯಲ್ಲಿಲ್ಲ ಎಂದು ಯುನಿರ್ವಸ್ ಬಾಸ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ 5 ವರ್ಷಗಳ ಕಾಲ ಬ್ಯಾಟ್ ಬೀಸುವುದಾಗಿ ಘೋಷಿಸಿದ್ದಾರೆ.

    ಹೌದು, ಕ್ರಿಸ್ ಗೇಲ್ 2021ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಲಿರುವ ಟಿ20 ವಿಶ್ವಕಪ್​ನತ್ತ ಕೂಡ ಗಮನ ಹರಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಂದರೆ ಮುಂದಿನ 2 ವಿಶ್ವಕಪ್​ಗಳಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ ಯುನಿವರ್ಸ್ ಬಾಸ್.

    ನಾನು ಇನ್ನೂ ಐದು ವರ್ಷಗಳ ಕಾಲ ಕ್ರಿಕೆಟ್ ಆಡಲು ಬಯಸಿದ್ದೇನೆ. ಕ್ರೀಸ್​ನಲ್ಲಿ ಅತ್ಯುತ್ತಮವಾಗಿ ಹೋರಾಟಗಾರನಾಗಿರಲು ಇಚ್ಛಿಸಿದ್ದೇನೆ. ಹೀಗಾಗಿ ಸದ್ಯ ಯಾವುದೇ ನಿವೃತ್ತಿ ಆಲೋಚನೆಗಳಿಲ್ಲ. ಇನ್ನೂ ಐದು ವರ್ಷಗಳ ಕಾಲ ಆಡುವ ಉತ್ಸಾಹವಿದೆ ಎಂದು ನಂಬಿದ್ದೇನೆ. ಹೀಗಾಗಿ 45 ವರ್ಷಕ್ಕಿಂತ ಮೊದಲು ನಿವೃತ್ತಿ ನೀಡುವುದಿಲ್ಲ ಎಂದು ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ತಿಳಿಸಿದ್ದಾರೆ.

    ಇದರೊಂದಿಗೆ ಐಪಿಎಲ್​ಗೆ ಕ್ರಿಸ್ ಗೇಲ್ ಗುಡ್ ಬೈ ಹೇಳಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಅಲ್ಲದೆ ಇನ್ನೊಂದಷ್ಟು ವರ್ಷ ವಿವಿಧ ಲೀಗ್​ಗಳ ಮೂಲಕ ಮೈದಾನದಲ್ಲಿ ಸಿಕ್ಸರ್​ಗಳ ಸುರಿಮಳೆ ಸುರಿಸುವ ಸೂಚನೆಯನ್ನೂ ನೀಡಿದ್ದಾರೆ.



    ಇನ್ನು ಐಪಿಎಲ್​ನ 13ನೇ ಸೀಸನ್​ನಲ್ಲಿ ಕೇವಲ 7 ಪಂದ್ಯವನ್ನಾಡಿದರೂ ಕ್ರಿಸ್ ಗೇಲ್ 3 ಅರ್ಧಶತಕಗಳೊಂದಿಗೆ 288 ರನ್ ಬಾರಿಸಿ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದ್ದಾರೆ. ಇದೇ ಕಾರಣದಿಂದ 41 ರ ಹರೆಯದ ಯುನಿರ್ವಸ್ ಬಾಸ್ ಮುಂದಿನ ಸೀಸನ್​ನಲ್ಲೂ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರಾ? ಕಾದು ನೋಡಬೇಕಿದೆ.
    Published by:zahir
    First published: