ಆರ್​ಸಿಬಿ ತಂಡದ ನಾಯಕತ್ವ ಬದಲಾವಣೆ: ಕೊಹ್ಲಿ ಬಗ್ಗೆ ನೂತನ ಟೀಂ ನಿರ್ದೇಶಕ ಮೈಕ್ ಹೇಸನ್ ಹೇಳಿದ್ದೇನು?

RCB: 7 ಬಾರಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ ಕಪ್ತಾನನಾಗಿ ವಿಫಲರಾಗಿದ್ದಾರೆ. ಹೀಗಾಗಿ ಅವರ ಬದಲಿಗೆ ಮತ್ತೊಬ್ಬ ಆಟಗಾರನಿಗೆ ನಾಯಕನ ಪಟ್ಟ ನೀಡಬೇಕೆಂಬ ಅಭಿಪ್ರಾಯಗಳು ತಂಡದ ಮ್ಯಾನೆಜ್​ಮೆಂಟ್​ನಲ್ಲಿದೆ

zahir | news18-kannada
Updated:September 20, 2019, 10:29 AM IST
ಆರ್​ಸಿಬಿ ತಂಡದ ನಾಯಕತ್ವ ಬದಲಾವಣೆ: ಕೊಹ್ಲಿ ಬಗ್ಗೆ ನೂತನ ಟೀಂ ನಿರ್ದೇಶಕ ಮೈಕ್ ಹೇಸನ್ ಹೇಳಿದ್ದೇನು?
Virat Kohli
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನ ನತದೃಷ್ಟ ಟೀಂ ಎಂದೇ ಬಿಂಬಿತವಾಗಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ್ವದ ಬದಲಾವಣೆ ಮಾತುಗಳು ಕೇಳಿ ಬಂದಿವೆ. 7 ಬಾರಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ ಕಪ್ತಾನನಾಗಿ ವಿಫಲರಾಗಿದ್ದಾರೆ. ಹೀಗಾಗಿ ಅವರ ಬದಲಿಗೆ ಮತ್ತೊಬ್ಬ ಆಟಗಾರನಿಗೆ ನಾಯಕನ ಪಟ್ಟ ನೀಡಬೇಕೆಂಬ ಅಭಿಪ್ರಾಯಗಳು ತಂಡದ ಮ್ಯಾನೆಜ್​ಮೆಂಟ್​ನಲ್ಲಿದೆ ಎನ್ನಲಾಗಿದೆ.

ಆರ್​ಸಿಬಿ ನಾಯಕನ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿದ್ದಂತೆ, ರಾಯಲ್ ಚಾಲೆಂಜರ್ಸ್​ ಟೀಮ್​ನ ನೂತನ ನಿರ್ದೇಶಕ ಮೈಕ್ ಹೇಸನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಐಪಿಎಲ್​ನಲ್ಲಿ ಕೊಹ್ಲಿ ನಾಯಕತ್ವ ನಿರಾಶಾದಾಯಕವಾಗಿದ್ದರೂ, ಅವರನ್ನು ಕ್ಯಾಪ್ಟನ್​ ಸ್ಥಾನದಿಂದ ಕೆಳಗಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದಿದ್ದಾರೆ.

ಇನ್ನು ಈ ಬಾರಿ ತಂಡದ ಬಲ ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಮುಂಬರುವ ಹರಾಜಿನಲ್ಲಿ ಆರ್​ಸಿಬಿ ತಂಡಕ್ಕೆ ನಿರ್ದಿಷ್ಟ ಆಟಗಾರರ ಆಯ್ಕೆ ಕಡೆ ಹೆಚ್ಚು ಗಮನಹರಿಸಲಿದ್ದೇವೆ ಎಂದು ತಿಳಿಸಿದ್ದಾರೆ. 12 ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ತಂಡವು 3 ಬಾರಿ ಫೈನಲ್​ ಪ್ರವೇಶಿಸಿದೆ. ಆದರೆ ಅಂತಿಮ ಹಂತದಲ್ಲಿ ಎಡವಿ ಕಪ್ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು.

ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾದರೆ ಏನು ಮಾಡಬೇಕು: ಈಗ ಫೋನ್​ಗಳನ್ನು ಪತ್ತೆ ಹಚ್ಚುವುದು ಮತ್ತಷ್ಟು ಸುಲಭ

2009ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಫೈನಲ್​ಗೆ ಲಗ್ಗೆಯಿಟ್ಟಿದ್ದ ರಾಯಲ್ ಚಾಲೆಂಜರ್ಸ್​​ ತಂಡ ಡೆಕ್ಕನ್ ಚಾರ್ಜರ್ಸ್​(ಹೈದರಾಬಾದ್) ವಿರುದ್ಧ 6 ರನ್​ಗಳಿಂದ ಸೋಲುನುಭವಿಸಿತ್ತು.

ಇನ್ನು 2011ರಲ್ಲಿ ನ್ಯೂಜಿಲೆಂಡ್ ಆಟಗಾರ ಡೆನಿಯಲ್ ವಿಟ್ಟೊರಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಆರ್​ಸಿಬಿ ಫೈನಲ್ ಪ್ರವೇಶಿಸಿತ್ತು. ಆದರೆ ಚೆನ್ನೈ ಸೂಪರ್​ ಕಿಂಗ್ಸ್​ ನೀಡಿದ್ದ 205 ರನ್​ಗಳನ್ನು ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್​ ಕೇವಲ 147 ರನ್​ಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರು. ಈ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಅವಕಾಶವನ್ನು ಎರಡನೇ ಬಾರಿ ಕೈ ತಪ್ಪಿಸಿಕೊಂಡಿದ್ದರು.

ಇದನ್ನೂ ಓದಿ: ಜಿಯೋ  ಡಿಟಿಹೆಚ್​ ಎಫೆಕ್ಟ್: ಗ್ರಾಹಕರಿಗೆ ಉಚಿತ ಸೇವೆ, ಕ್ಯಾಶ್​ಬ್ಯಾಕ್ ಆಫರ್ ​ನೀಡಿದ ಡಿಶ್ ಟಿವಿ ಕಂಪೆನಿಗಳುಇದಾದ ಬಳಿಕ ತಂಡದ ಸಾರಥ್ಯವಹಿಸಿದ್ದ ಕೊಹ್ಲಿ, 2016ರಲ್ಲಿ ರಾಯಲ್​ ಚಾಲೆಂಜರ್ಸ್​ ತಂಡವನ್ನು ಫೈನಲ್​ಗೆ ತಂದು ನಿಲ್ಲಿಸಿದ್ದರು. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆರ್​​ಸಿಬಿ ಅದ್ಭುತ ಪ್ರದರ್ಶನ ನೀಡಿದರೂ ಕೊನೆಯಲ್ಲಿ ಎಡವಿ 8 ರನ್​ಗಳಿಂದ ಸೋಲುಪ್ಪಿಕೊಂಡಿತ್ತು.

ಇದನ್ನೂ ಓದಿ: ನನ್ನ ಮಗಳು ನನ್ನ ಬಳಿ ಬರೋದಿಲ್ಲ..: ಅಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?

First published:September 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ