IPL 2020: ಚೀನಾ ವಸ್ತು ಬ್ಯಾನ್​ ಮಾಡಿ ಆಂದೋಲನದ ಮಧ್ಯೆಯೇ ವಿವೋ ಜೊತೆಗಿನ ಒಪ್ಪಂದ ರದ್ದು ಅಸಾಧ್ಯ ಎಂದ ಬಿಸಿಸಿಐ

ವಿವೋ ಜೊತೆ ಐದು ವರ್ಷದ ಒಪ್ಪಂದವನ್ನು ಬಿಸಿಸಿಐ ಮಾಡಿಕೊಂಡಿದೆ. ಇದು 2022ರಲ್ಲಿ ಅಂತ್ಯಗೊಳ್ಳಲಿದ್ದು, ಪ್ರತಿವರ್ಷ 440 ಕೋಟಿ ರೂ ಹಣ ಬಿಸಿಸಿಐಗೆ ಸಂದಾಯವಾಗುತ್ತಿದೆ.

ಐಪಿಎಲ್​

ಐಪಿಎಲ್​

  • Share this:
ಗಡಿ ಭಾಗದಲ್ಲಿ ಚೀನಾ ಉಪಟಳ ಹೆಚ್ಚುತ್ತಿದ್ದಂತೆ, ಇತ್ತ ಭಾರತೀಯರು ಚೀನಾ ವಸ್ತುಗಳನ್ನು ಬ್ಯಾನ್​ ಮಾಡುವಂತೆ ಆಂದೋಲನ ಆರಂಭಿಸಿದ್ದಾರೆ. ಚೀನಾ ವಸ್ತುಗಳನ್ನು ಹಾಗೂ ಚೀನಾ ಆಪ್​ಗಳನ್ನು ಬಳಕೆ ಮಾಡದಂತೆ ಆಗ್ರಹಿಸಿಲಾಗುತ್ತಿ. ಈ ಮಧ್ಯೆ ಚೀನಾ ಮೊಬೈಲ್​ಗಳ ಮೇಲೂ ನಿಷೇಧ ಹೇರುವಂತೆ ಆಗ್ರಹ ಕೇಳಿ ಬಂದಿತ್ತು. ಈ ಎಲ್ಲ ಬೆಳವಣಿಗೆ ಮಧ್ಯೆ ಐಪಿಎಲ್​ಗೆ ಚೀನಾ ಮೊಬೈಲ್​ ಸಂಸ್ಥೆ ವಿವೋ ಪ್ರಾಯೋಜಕತ್ವ​ ಮಾಡುತ್ತಿರುವ ವಿಚಾರ ಸಾಕಷ್ಟು ಚರ್ಚೆ ಆಗಿದೆ. ಇದಕ್ಕೆ ಈಗ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ವಿವೋ ಜೊತೆಗಿನ ಒಪ್ಪಂದ ರದ್ದು ಅಸಾಧ್ಯ ಎಂದಿದೆ.

ಐಪಿಎಲ್​ಗೆ ವಿವೋ ಸ್ಪಾನ್ಸರ್​ ಮಾಡುತ್ತಿರುವ ವಿಚಾರ ಈ ಮೊದಲಿನಿಂದಲೂ ಚರ್ಚೆಯಲ್ಲೇ ಇದೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದು, ಒಪ್ಪಂದ ರದ್ದು ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು.

ಇದಕ್ಕೆ ಉತ್ತರಿಸಿರುವ ಬಿಸಿಸಿಐನ ಖಜಾಂಚಿ ಅರುಣ್​ ಧುಮಾಲ್​, "ವಿವೋ ಸಂಸ್ಥೆ ತನ್ನ ಮೊಬೈಲ್​ಗಳನ್ನು ಇಲ್ಲಿ ಮಾರಾಟ ಮಾಡುತ್ತದೆ. ಇದಕ್ಕಾಗಿ ಅವರು ಭಾರತದಲ್ಲಿ ಪ್ರಮೋಷನ್​ ಮಾಡುತ್ತಿದ್ದಾರೆ. ಮೊಬೈಲ್​ ಮಾರಾಟದಿಂದ ಬಂದ ಹಣವನ್ನು ಈ ಕಂಪೆನಿ ಸ್ಪಾನ್ಸರ್​ಶಿಪ್​ಗೆ ಬಳಕೆ ಮಾಡುತ್ತಿದ್ದಾರೆ. ಸ್ಪಾನ್ಸರ್​ ಶಿಪ್​ ಹಣದಲ್ಲಿ ಶೇ.42 ತೆರಿಗೆಯನ್ನು ಬಿಸಿಸಿಐ ಸರ್ಕಾರಕ್ಕೆ ನೀಡುತ್ತಿದೆ. ಇದರಿಂದ ನಮ್ಮ ಆರ್ಥಿಕತೆಗೆ ಲಾಭ," ಎಂದಿದ್ದಾರೆ.

"ಐಪಿಎಲ್​ಗೆ ಅವರು ಸ್ಪಾನ್ಸರ್​ಶಿಪ್ ಮಾಡಲಿಲ್ಲ ಎಂದಾದರೆ ಅಷ್ಟೂ ಹಣವನ್ನು ಚೀನಾಗೆ ತೆಗೆದುಕೊಂಡು ಹೋಗುತ್ತಾರೆ. ಆದರೆ, ಒಂದಷ್ಟು ಹಣವನ್ನು ಅವರು ಸ್ಪಾನ್ಸರ್​ಶಿಪ್​ಮೇಲೆ ಉಪಯೋಗಿಸುವುದರಿಂದ ಅಷ್ಟು ಹಣ ನಮ್ಮ ದೇಶಕ್ಕೆ ಸಂದಾಯವಾದಂತಾಗುತ್ತದೆ," ಎನ್ನುತ್ತಾರೆ ಅರುಣ್​​.

"ಭಾರತದಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಲು ಚೀನಾ ಕಂಪನಿಯವರಿಗೆ ಗುತ್ತಿಗೆ ನೀಡಿದರೆ ಅದು ಚೀನಾ ಸಂಸ್ಥೆಗೆ ಸಹಾಯ ಮಾಡಿದಂತಾಗುತ್ತದೆ. ಆದರೆ, ಸ್ಪಾನ್ಸರ್​ ಪಡೆಯುವುದರಿಂದ ನಮ್ಮ ದೇಶಕ್ಕೆ ಲಾಭ," ಎಂಬುದು ಅರುಣ್​ ಅವರ ಅಭಿಪ್ರಾಯ.

ವಿವೋ ಜೊತೆ ಐದು ವರ್ಷದ ಒಪ್ಪಂದವನ್ನು ಬಿಸಿಸಿಐ ಮಾಡಿಕೊಂಡಿದೆ. ಇದು 2022ರಲ್ಲಿ ಅಂತ್ಯಗೊಳ್ಳಲಿದ್ದು, ಪ್ರತಿವರ್ಷ 440 ಕೋಟಿ ರೂ ಹಣ ಬಿಸಿಸಿಐಗೆ ಸಂದಾಯವಾಗುತ್ತಿದೆ.
First published: