ಪ್ಯಾಂಟ್ ಜಾರಿದ್ದನ್ನೂ ಲೆಕ್ಕಿಸದೆ ರೋಚಕ ರನೌಟ್​ ಮಾಡಿದ ಆಸೀಸ್ ಆಟಗಾರ; ಇಲ್ಲಿದೆ ವಿಡಿಯೋ

ಸಿಂಗಲ್ ರನ್​ಗಾಗಿ ಫೀಲ್ಡಿಂಗ್ ಮಾಡುತ್ತಿದ್ದ ಲಬುಸ್ಚಗ್ನೆ ಇರುವ ಕಡೆ ಬ್ಯಾಟ್ಸ್​ಮನ್​ ಚೆಂಡನ್ನು ಅಟ್ಟುತ್ತಾನೆ. ತಕ್ಷಣವೇ ಲಬುಸ್ಚಗ್ನೆ ಡೈವ್ ಹೊಡೆದು ಚೆಂಡನ್ನು ಹಿಡಿದು ರನೌಟ್​ಗೆ ಕೀಪರ್ ಬಳಿ ಚೆಂಡು ಎಸೆಯುತ್ತಾರೆ.

Vinay Bhat | news18-kannada
Updated:September 30, 2019, 11:19 AM IST
ಪ್ಯಾಂಟ್ ಜಾರಿದ್ದನ್ನೂ ಲೆಕ್ಕಿಸದೆ ರೋಚಕ ರನೌಟ್​ ಮಾಡಿದ ಆಸೀಸ್ ಆಟಗಾರ; ಇಲ್ಲಿದೆ ವಿಡಿಯೋ
ಮಾರ್ನಸ್ ಲಬುಸ್ಚಗ್ನೆ
  • Share this:
ಬೆಂಗಳೂರು (ಸೆ. 30): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಮಾರ್ನಸ್ ಲಬುಸ್ಚಗ್ನೆ ಕಳೆದ ಆ್ಯಶಸ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಈ ಮೂಲಕ ಆ್ಯಶಸ್ ಕಪ್ ಆಸ್ಟ್ರೇಲಿಯಾ ತನ್ನಲ್ಲೆ ಉಳಿಸಿಕೊಳ್ಳಲು ಸ್ಟೀವ್ ಸ್ಮಿತ್ ಜೊತೆ ಮಾರ್ನಸ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು.

ಮೈದಾನದಲ್ಲಿ ಸದಾ ಚುರುಕಾಗಿರುವ ಲಬುಸ್ಚಗ್ನೆ ಸದ್ಯ ಎದುರಾಳಿಯಲ್ಲಿ ವಿಶೇಷವಾಗಿ ರನೌಟ್ ಮಾಡಿ ಸುದ್ದಿಯಲ್ಲಿದ್ದಾರೆ.

ದೇಶೀಯ ಪಂದ್ಯವಾದ ಮಾರ್ಶ್​ ಓನ್ ಡೇ ಕಪ್​ನಲ್ಲಿ ಕ್ವೀನ್ಸ್​​ಲೆಂಡ್ ಪರ ಆಡುತ್ತಿರುವ ಲಬುಸ್ಚಗ್ನೆ ಎದುರಾಳಿ ತಂಡದ ಬ್ಯಾಟ್ಸ್​ಮನ್ ಅನ್ನು ರನೌಟ್ ಮಾಡಿದ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

Asia Cup 2020: ಪಾಕಿಸ್ತಾನಕ್ಕೆ ಬಂದು ಆಡುವುದಾದರೆ ಟೀಂ ಇಂಡಿಯಾಕ್ಕೆ ರಕ್ಷಣೆ ನೀಡಲು ಸಿದ್ಧ; ಪಿಸಿಬಿ

ಸಿಂಗಲ್ ರನ್​ಗಾಗಿ ಫೀಲ್ಡಿಂಗ್ ಮಾಡುತ್ತಿದ್ದ ಲಬುಸ್ಚಗ್ನೆ ಇರುವ ಕಡೆ ಬ್ಯಾಟ್ಸ್​ಮನ್​ ಚೆಂಡನ್ನು ಅಟ್ಟುತ್ತಾನೆ. ತಕ್ಷಣವೇ ಲಬುಸ್ಚಗ್ನೆ ಡೈವ್ ಹೊಡೆದು ಚೆಂಡನ್ನು ಹಿಡಿದು ರನೌಟ್​ಗೆ ಕೀಪರ್ ಬಳಿ ಚೆಂಡು ಎಸೆಯುತ್ತಾರೆ.

ಆದರೆ, ರನೌಟ್​ಗೆಂದು ಬಾಲ್ ಎಸೆಯುವಾಗ ಲಬುಸ್ಚಗ್ನೆ ಅವರ ಪ್ಯಾಂಟ್ ಜಾರಿದೆ. ಅದನ್ನು ಲೆಕ್ಕಿಸದೆ ರನೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಕ್ಷಣ ಮೈದಾನದಲ್ಲಿ ಈ ಘಳಿಗೆ ನಗೆ ಪಾಟಲಿಗೆ ಕಾರಣವಾಯಿತು.

First published:September 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading