HOME » NEWS » Sports » CRICKET NO ONE SAID A WORD WHEN INDIA HAD NO CHANCE WARNE SHUTS UP VAUGHAN ZP

ಟೀಮ್​ ಇಂಡಿಯಾವನ್ನು ಟೀಕಿಸಿದ ಮೈಕಲ್ ವಾನ್​ಗೆ ತಿರುಗೇಟು ನೀಡಿದ ಶೇನ್ ವಾರ್ನ್

ವಾನ್ ಅವರ ಈ ಟೀಕೆಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಮಾಜಿ ಸ್ಪಿನ್ ದಂತಕಥೆ ಶೇನ್ ವಾರ್ನ್​, ದ್ವಿತೀಯ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ಕಳಪೆ ಆಟವಾಡಿದೆ ಎಂದು ತಿರುಗೇಟು ನೀಡಿದ್ದಾರೆ.

news18-kannada
Updated:February 16, 2021, 9:04 PM IST
ಟೀಮ್​ ಇಂಡಿಯಾವನ್ನು ಟೀಕಿಸಿದ ಮೈಕಲ್ ವಾನ್​ಗೆ ತಿರುಗೇಟು ನೀಡಿದ ಶೇನ್ ವಾರ್ನ್
Shane Warne, Michael Vaughan
  • Share this:
ಚೆನ್ನೈನ ಎಂಎ ಚಿದಂಬರಂ ಮೈದಾನದ ಪಿಚ್​ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಫೆ.13 ರಿಂದ ಶುರುವಾದ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 329 ರನ್​ ಪೇರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಕೇವಲ 134 ರನ್​ಗಳಿಗೆ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಇದು ಟೆಸ್ಟ್​ ಕ್ರಿಕೆಟ್​ಗೆ ಉತ್ತಮ ಪಿಚ್ ಅಲ್ಲ ಎಂದು ಟೀಕಿಸಿದ್ದರು.

ಏಕೆಂದರೆ ಎರಡು ಅವಧಿಗಿಂತ ಮೊದಲೇ ಮೊದಲ ಇನಿಂಗ್ಸ್​ ಮುಗಿದಿದೆ. ಮೊದಲನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ರೀತಿಯಲ್ಲಿ ಭಾರತ ಮೊದಲನೇ ಟೆಸ್ಟ್​ನಲ್ಲಿ ಬ್ಯಾಟಿಂಗ್ ಮಾಡಿದ್ದರೆ ಪಂದ್ಯ ಡ್ರಾನಲ್ಲಿ ಅಂತ್ಯವಾಗುತ್ತಿತ್ತು. ಇಂತಹ ಕಳಪೆ ಪಿಚ್ ಆಘಾತಕಾರಿ ಎಂದು ಮೈಕೆಲ್ ವಾನ್ ತಿಳಿಸಿದ್ದರು.

ವಾನ್ ಅವರ ಈ ಟೀಕೆಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಮಾಜಿ ಸ್ಪಿನ್ ದಂತಕಥೆ ಶೇನ್ ವಾರ್ನ್​, ದ್ವಿತೀಯ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ಕಳಪೆ ಆಟವಾಡಿದೆ ಎಂದು ತಿರುಗೇಟು ನೀಡಿದ್ದಾರೆ.ಅಲ್ಲದೆ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತಾಗ ಯಾರೂ ಕೂಡ ಪಿಚ್​ ಚೆನ್ನಾಗಿರಲಿಲ್ಲ ಎಂದು ಹೇಳಿರಲಿಲ್ಲ. ಈ ಪಂದ್ಯದಲ್ಲಿ ಪಿಚ್ ಎರಡೂ ತಂಡಗಳಿಗೆ ಸಮನಾಗಿತ್ತು. ಇಲ್ಲಿ ಇಂಗ್ಲೆಂಡ್ ಕಳಪೆ ಆಟವಾಡಿದೆ. ಹಾಗೆಯೇ ರೋಹಿತ್ ಶರ್ಮಾ, ರಿಷಭ್ ಪಂತ್, ಅಜಿಂಕ್ಯಾ ರಹಾನೆ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ತೋರಿಸಿಕೊಟ್ಟಿದ್ದಾರೆ ಎಂದು ವಾರ್ನ್​ ತಿರುಗೇಟು ನೀಡಿದ್ದಾರೆ.
Published by: zahir
First published: February 15, 2021, 7:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories