No more biryani: ಬಿರಿಯಾನಿ ತಿನ್ನುವಂತಿಲ್ಲ ಪಾಕ್ ಆಟಗಾರರು; ಕೋಚ್ ಮಿಸ್ಬಾ ಖಡಕ್ ವಾರ್ನಿಂಗ್!

ಹಣ್ಣಿನಾಂಶ ಇರುವ ಆಹಾರ ಅಧಿಕ ತಿನ್ನಬೇಕು. ಬಾರ್ಬೆಕ್ಯೂ ಅಥವಾ ಖಾದ್ಯಗಳನ್ನು ಮುಟ್ಟಬಾರದು ಎಂದು ಮಿಸ್ಬಾ ಪಾಕ್ ಆಟಗಾರರಿಗೆ ಸೂಚನೆ ನೀಡಿದ್ದಾರೆ.

Vinay Bhat | news18-kannada
Updated:September 17, 2019, 11:06 AM IST
No more biryani: ಬಿರಿಯಾನಿ ತಿನ್ನುವಂತಿಲ್ಲ ಪಾಕ್ ಆಟಗಾರರು; ಕೋಚ್ ಮಿಸ್ಬಾ ಖಡಕ್ ವಾರ್ನಿಂಗ್!
ಪಾಕಿಸ್ತಾನ ಕ್ರಿಕೆಟ್ ತಂಡ
Vinay Bhat | news18-kannada
Updated: September 17, 2019, 11:06 AM IST
ಬೆಂಗಳೂರು (ಸೆ. 17): ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಮಿಸ್ಬಾ ಉಲ್ ಹಖ್ ಆಟಗಾರರಿಗೆ ಖಡಕ್ ಸೂಚನೆಯೊಂದನ್ನು ನೀಡಿದ್ದಾರೆ.

2019ರ ಐಸಿಸಿ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಪಾಕ್ ಆಟಗಾರರ ಫಿಟ್​ನೆಸ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಇದಕ್ಕಾಗಿ ನೂತನ ಕೋಚ್ ತಂಡದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದಾರೆ.

ಪಾಕ್ ಆಟಗಾರರು ಫಿಟ್ ಆಗಿರುಬೇಕು. ಹೀಗಾಗಿ ಬಿರಿಯಾನಿ ತಿನ್ನಬೇಡಿ, ಕೊಬ್ಬಿನ ಅಂಶವಿರುವ ಮಾಂಸ ಹಾಗೂ ಸಿಹಿ ಮುಟ್ಟಲೇಬೇಡಿ ಎಂದು ಆಟಗಾರರಿಗೆ ಮಿಸ್ಬಾ ವಾರ್ನಿಂಗ್ ಮಾಡಿದ್ದಾರೆ.

ಟಿ-20ಯಲ್ಲಿ 200ಕ್ಕೂ ಅಧಿಕ ರನ್ ಚಚ್ಚುವ ಗುರಿ; ಇಬ್ಬರು ಸ್ಟಾರ್ ಆಟಗಾರರನ್ನು ಹೊರಗಿಟ್ಟ ಕೊಹ್ಲಿ

ಕೊಬ್ಬಿನಾಂಶ ಹೆಚ್ಚಾಗಿರುವ ಆಹಾರ ತಯಾರು ಮಾಡದಂತೆ ಆಹಾರ ಸರಬರಾಜು ಮಾಡುವ ಕಂಪೆನಿಗೂ ಮಿಸ್ಬಾ ಹೇಳಿದ್ದಾರೆ.

ಹಣ್ಣಿನಾಂಶ ಇರುವ ಆಹಾರ ಅಧಿಕ ತಿನ್ನಬೇಕು. ಬಾರ್ಬೆಕ್ಯೂ ಅಥವಾ ಖಾದ್ಯಗಳನ್ನು ಮುಟ್ಟಬಾರದು ಎಂದು ಮಿಸ್ಬಾ ಸೂಚನೆ ನೀಡಿದ್ದಾರೆ.

41 ಎಸೆತಗಳಲ್ಲಿ ಸ್ಕಾಟ್ಲೆಂಡ್ ಬ್ಯಾಟ್ಸ್​ಮನ್​ ಶತಕ; 120 ಎಸೆತಗಳಲ್ಲಿ ಹರಿದು ಬಂದ ರನ್​ ಎಷ್ಟು ಗೊತ್ತಾ?
Loading...

ಮಿಸ್ಬಾ ಅವರು ನೂತನ ಕೋಚ್ ಆಗಿ ಅಧಿಕಾರ ಸ್ವೀಕರಿಸುವಾಗ, 'ನನ್ನ ಮೇಲೆ ಸಾಕಷ್ಟು ಭರವಸೆಯಿದೆ. ಎರಡೂ ಹುದ್ದೆ ಹೆಗಲ ಮೇಲಿರುವುದರಿಂದ ಹೆಚ್ಚಿನ ಜವಾಬ್ದಾರಿಯಿದ್ದು, ಎಲ್ಲ ಸವಾಲುಗಳಿಗೂ ಸಿದ್ಧವಿದ್ದೇನೆ' ಎಂದು ಹೇಳಿದ್ದರು. ಅದರಂತೆ ಮಿಸ್ಬಾ ಪಾಕಿಸ್ತಾನ ತಂಡವನ್ನು ಮೇಲುತ್ತುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

First published:September 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...