ಶ್ರೀಲಂಕಾ ಪೊಲೀಸರು 2011ರ ವಿಶ್ವಕಪ್ ಫೈನಲ್ ಮ್ಯಾಚ್ ಫಿಕ್ಸಿಂಗ್ ಆರೋಪ ಸಂಬಂಧ ನಡೆಸುತ್ತಿದ್ದ ತನಿಖೆಯನ್ನು ಕೈ ಬಿಟ್ಟಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಯಿಂದ ಹಿಂದೆ ಸರಿಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಂದಿನ ತಂಡದ ನಾಯಕ ಕುಮಾರ ಸಂಗಕ್ಕರ ಮತ್ತು ಪ್ರಮುಖ ಬ್ಯಾಟ್ಸ್‌ಮನ್ ಮಾಹೇಲ ಜಯವರ್ಧನೆ ಅವರನ್ನು ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಈ ಹೇಳಿಕೆ ನೀಡಿದ್ದಾರೆ.
ಶ್ರೀಲಂಕಾದ ಮಾಜಿ ಕ್ರೀಡಾ ಸಚಿವರು 2011ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಶ್ರೀಲಂಕಾ ತಂಡ ಫೈನಲ್‌ನಲ್ಲಿ ಬೇಕೆಂದೆ ಟೀಂ ಇಂಡಿಯಾ ವಿರುದ್ಧ ಸೋತಿತ್ತು ಎಂದು ಗಂಭೀರ ಆರೋಪ ಮಾಡಿದ್ದರು.
Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್ಮನ್ಗಳು ಇವರೇ..!
ಟೂರ್ನಿ ಮುಗಿದು 10 ವರ್ಷಗಳು ಕಳೆದ ನಂತರ ಇಂಥದ್ದೊಂದು ಗಂಭೀರ ಆರೋಪ ಹೊರಬಂದಿದ್ದನ್ನು ಶ್ರೀಲಂಕಾದ ಮಾಜಿ ಕ್ರಿಕೆಟಿಗರಾದ ಹಾಗೂ ಆ ವಿಶ್ವಕಪ್‌ನಲ್ಲಿ ಆಡಿದ್ದ ಕುಮಾರ ಸಂಗಕ್ಕಾರ ಮತ್ತು ಮತ್ತು ಮಹೇಲಾ ಜಯವರ್ಧನೆ ಕಟುವಾಗಿ ಟೀಕಿಸಿದ್ದರು.
ಪ್ರಕರಣ ಕುರಿತು ಅಂದು ತಂಡಲ್ಲಿದ್ದ ಮಾಜಿ ಆಟಗಾರರು, ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥರನ್ನ ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಆಟಗಾರರು ಮತ್ತು ಅಧಿಕಾರಿಗಳು ನೀಡಿದ ಉತ್ತರ, ತೃಪ್ತಿ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ತನಿಖೆಯನ್ನ ಕೈಬಿಟ್ಟಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ನಾವು ಕೇಂದ್ರ ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗೆ ಈಗಾಗಲೇ ವರದಿ ಸಲ್ಲಿಸಿದ್ದೇವೆ. ನಡೆದ ಆಂತರಿಕ ಸಂವಾದದ ಬಳಿಕ ನಾವು ತನಿಖೆಯನ್ನು ಮುಗಿಸಿದ್ದೇವೆ. ಪಂದ್ಯ ಫಿಕ್ಸ್ ಆಗಿರುವುದಕ್ಕೆ ನಮಗೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ“ ಎಂದು ಪೊಲೀಸ್ ಮಹಾನಿರ್ದೇಶಕ ಜಗತ್ ಫೊನ್ಸೇಕ ತಿಳಿಸಿದ್ದಾರೆ.
ABD ಫೇವರೇಟ್ IPL ತಂಡದ ನಾಯಕ ಕೊಹ್ಲಿ ಅಲ್ಲ.. ಮತ್ಯಾರು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ