ಶಮಿ ವಿರುದ್ಧ ಅರೆಸ್ಟ್​ ವಾರೆಂಟ್; ಬಿಸಿಸಿಐ ಮುಂದಿನ ನಡೆಯೇ ಕುತೂಹಲ!

Mohammed Shami Arrest Warrant: ಕೇವಲ ಅರೆಸ್ಟ್​ ವಾರಂಟ್​ ಜಾರಿಯಾದ ತಕ್ಷಣ ಒಬ್ಬ ಆಟಗಾರನ​ ವಿರುದ್ಧ ಕ್ರಮ ಕೈಗೊಳ್ಳಲು ಅಸಾಧ್ಯ. ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದೆ.

Vinay Bhat | news18-kannada
Updated:September 3, 2019, 12:06 PM IST
ಶಮಿ ವಿರುದ್ಧ ಅರೆಸ್ಟ್​ ವಾರೆಂಟ್; ಬಿಸಿಸಿಐ ಮುಂದಿನ ನಡೆಯೇ ಕುತೂಹಲ!
ಮೊಹಮ್ಮದ್ ಶಮಿ
  • Share this:
ಬೆಂಗಳೂರು (ಸೆ. 03): ಟೀಂ ಇಂಡಿಯಾ ವೇಗಿ ಮೊಹಮ್ಮದ್​ ಶಮಿ ವಿರುದ್ಧ ಅರೆಸ್ಟ್​​ ವಾರೆಂಟ್​ ಜಾರಿ ಮಾಡಲಾಗಿದೆ. ಪತ್ನಿ ಮೇಲೆ ಹಲ್ಲೆ ದೌರ್ಜನ್ಯ ಆರೋಪ ಎದುರಿಸುತ್ತಿರುವ ಭಾರತ ತಂಡದ ಆಟಗಾರನ ವಿರುದ್ಧ ಪಶ್ಚಿಮ ಬಂಗಾಳದ ಅಲಿಪೂರ್ ಕೋರ್ಟ್​ ಬಂಧನದ ಆದೇಶ ಹೊರಡಿಸಿದೆ.

ಈ ಹಿಂದೆ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ನ್ಯಾಯಾಲಕ್ಕೆ ಹಾಜರಾಗದ ಶಮಿ ವಿರುದ್ದ ಇದೀಗ ಕೋರ್ಟ್​ ವಾರೆಂಟ್ ಜಾರಿಗೊಳಿಸಿದೆ. ಅಷ್ಟೇ ಅಲ್ಲದೆ 15 ದಿನಗಳ ಒಳಗಾಗಿ ಕೋರ್ಟ್​ಗೆ ಹಾಜರಾಗುವಂತೆ ಸೂಚಿಸಿದೆ.

ಹೀಗಿರುವಾಗ ಶಮಿ ಪ್ರಕರಣಕ್ಕೆ ಸಂಭದಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವ ನಡೆಗೆ ಮುಂದಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಬಿಸಿಸಿಐ ಹೇಳಿರುವ ಪ್ರಕಾರ, ಚಾರ್ಜ್​ಶಿಟ್​ ನೋಡುವವರೆಗೂ ನಾವೂ ಶಮಿ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ.

ಕೇವಲ ಅರೆಸ್ಟ್​ ವಾರಂಟ್​ ಜಾರಿಯಾದ ತಕ್ಷಣ ಒಬ್ಬ ಆಟಗಾರನ​ ವಿರುದ್ಧ ಕ್ರಮ ಕೈಗೊಳ್ಳಲು ಅಸಾಧ್ಯ. ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದೆ.

ಕ್ರೀಸ್ ಕಚ್ಚಿ ನಿಂತಿದ್ದ ವಿಂಡೀಸ್ ಆಟಗಾರನನ್ನು ಕೊಹ್ಲಿ ಪೆವಿಲಿಯನ್​ಗೆ ಅಟ್ಟಿದ್ದು ಈಗ ವೈರಲ್!

ಈ ಹಿಂದೆ ಕೋಲ್ಕತ್ತಾ ಪೊಲೀಸರು ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರ ದೂರಿನ ಹಿನ್ನೆಲೆ ಕ್ರಿಕೆಟಿಗನ ವಿರುದ್ಧ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 354ಎ (ಲೈಂಗಿಕ ದೌರ್ಜನ್ಯ) ವಿಭಾಗದಡಿಯಲ್ಲಿ ಚಾರ್ಜ್ ಶೀಟ್ ದಾಖಲಿಸಿದ್ದರು. ಅಷ್ಟೇ ಅಲ್ಲದೆ ತನ್ನ ಪತಿಯು ಐಪಿಎಲ್​ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ. ಪಾಕಿಸ್ತಾನ ಮಹಿಳೆ ಅಲಿಸ್ಬಾಯಿಂದ ಶಮಿ ದುಬೈನಲ್ಲಿ ಹಣ ಸ್ವೀಕರಿಸಿದ್ದಾರೆ ಈ ಬಗ್ಗೆ ನನ್ನ ಬಳಿ ಸಾಕ್ಷ್ಯವಿದೆ ಎಂದು ಹಸೀನ್ ಆರೋಪಿಸಿದ್ದರು.

ಆದರೆ, ಈ ಎಲ್ಲ ಆರೋಪಗಳನ್ನ ನಿರಾಕರಿಸಿದ್ದ ಮೊಹಮ್ಮದ್ ಶಮಿ, ನಾನು ಯಾವಾಗಲೂ ಹಸೀನ್ ಪರ ನಿಂತಿದ್ದೇನೆ. ಈಗ ಆಕೆ ಯಾಕೆ ಈ ರೀತಿ ವರ್ತಿಸುತ್ತಿದ್ದಾಳೋ ಗೊತ್ತಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದಿದ್ದರು. ಮ್ಯಾಚ್ ಫಿಕ್ಸಿಂಗ್​ನಂತಹ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗುವ ಬದಲು ಸಾಯುತ್ತೇನೆ ಎಂದು ಖಡಕ್ ಉತ್ತರ ಕೊಟ್ಟಿದ್ದರು.ಆದರೆ, ಈ ಸಂಬಂಧ ಹಸೀನ್ ಜಹಾನ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಕ್ಕೆ ಹಾಜರಾಗದ ಕಾರಣ ಮೊಹಮ್ಮದ್ ಶಮಿ ವಿರುದ್ದ ಪಶ್ಚಿಮ ಬಂಗಾಳದ ಅಲಿಪೂರ್ ಕೋರ್ಟ್​ ಬಂಧನದ ಆದೇಶ ಹೊರಡಿಸಿದೆ.

First published: September 3, 2019, 12:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading