Cricketers Nicknames- ಹಿಟ್ ಮ್ಯಾನ್, ವಾಕಿಂಗ್ ಅಸಾಸಿನ್, ಸ್ಕೂಟರ್… ಕರ್ನಾಟಕ, ಭಾರತ, ವಿಶ್ವ ಕ್ರಿಕೆಟಿಗರ ಅಡ್ಡಹೆಸರುಗಳು

Cricketers and famous nicknames- ನಾವು ಎಂಎಸ್ ಧೋನಿಯನ್ನ ಮಾಹಿ ಅಥವಾ ಕ್ಯಾಪ್ಟನ್ ಕೂಲ್ ಎಂತಲೂ ಕರೆಯುತ್ತೇವೆ. ರಾಜ್ಯ, ರಾಷ್ಟ್ರ ಮತ್ತು ವಿದೇಶಗಳಲ್ಲಿ ಅನೇಕ ಕ್ರಿಕೆಟಿಗರಿಗೆ ಇಂಟರೆಸ್ಟಿಂಗ್ ಎನಿಸುವ ನಿಕ್ ನೇಮ್ ಅಥವಾ ಅಡ್ಡ ಹೆಸರುಗಳು ಇವೆ. ಅಂಥ ಹೆಸರುಗಳ ಪಟ್ಟಿ ಇಲ್ಲಿದೆ:

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

 • Share this:
  ಕೆಲ ಕ್ರಿಕೆಟ್ ಆಟಗಾರರನ್ನ ಇನ್ನೊಂದು ಅಡ್ಡಹೆಸರಿನಲ್ಲಿ ಸಂಬೋಧಿಸುವುದನ್ನು ನೀವು ಗಮನಿಸಿರಬಹುದು. ಉದಾಹರಣೆಗೆ ಎಂಎಸ್ ಧೋನಿಯನ್ನ ಕ್ಯಾಪ್ಟರ್ ಕೂಲ್ ಎಂದೇ ಕರೆಯಲಾಗುತ್ತಿತ್ತು. ಸೌರವ್ ಗಂಗೂಲಿಯನ್ನ ದಾದಾ ಎನ್ನಲಾಗುತ್ತಿತ್ತು. ಇದಕ್ಕೆಲ್ಲಾ ನಿರ್ದಿಷ್ಟ ಕಾರಣಗಳು ಇವೆ. ಎಬಿ ಡೀವಿಲಿಯರ್ಸ್ ಅನ್ನ ಮಿಸ್ಟರ್ 360 ಡಿಗ್ರಿ ಎನ್ನಲಾಗುತ್ತದೆ. ಯಾಕೆಂದರೆ ಇವರು ಯಾವ ದಿಕ್ಕಿಗೆ ಬೇಕಾದರೂ ಚೆಂಡನ್ನ ಬೌಂಡರಿ ಗೆರೆ ದಾಟಿಸಬಲ್ಲರು.

  ಹರ್ಭಜನ್ ಸಿಂಗ್ ಅವರನ್ನ ಟರ್ಬನೇಟರ್ ಎಂದು ಯಾಕೆ ಹೇಳಲಾಗುತ್ತಿತ್ತು ಎಂದರೆ ಸಿಖ್ ಜನಾಂಗದವರು ತಲೆಗೆ ಟರ್ಬನ್ ಸುತ್ತಿಕೊಳ್ಳುತ್ತಾರೆ. ಹಾಲಿವುಡ್ ಮೂವಿ ಟರ್ಮಿನೇಟರ್ ಮತ್ತು ಟರ್ಬನ್ ಮಿಶ್ರ ಮಾಡಿ ಟರ್ಬನೇಟರ್ ಎಂದು ಕರೆಯಲಾಗುತ್ತಿತ್ತು. ನವಜೋತ್ ಸಿಧು ಸಿಕ್ಸರ್ ಭಾರಿಸಲು ಫೇಮಸ್ ಆಗಿದ್ದರು. ಹಾಗಾಗಿ ಅವರಿಗೆ ಸಿಕ್ಸರ್ ಸಿಧು ಎಂದು ಸಂಬೋಧಿಸಲಾಗುತ್ತಿತ್ತು. ಕೆಲ ಹೆಸರುಗಳು ಅಧಿಕೃತವಾಗಿ ದಯಪಾಲಿಸಿದ ನಿಕ್ ನೇಮ್ ಆಗಿದ್ದರೆ ಇನ್ನೂ ಕೆಲ ಹೆಸರುಗಳು ಕ್ರಿಕೆಟ್ ಅಭಿಮಾನಿಗಳೇ ಇಟ್ಟ ಹೆಸರು ಅಥವಾ ಸಹ-ಆಟಗಾರರು ತಮಾಷೆಗೆ ಇಟ್ಟ ಹೆಸರಾಗಿವೆ.

  ಕರ್ನಾಟಕ ಕ್ರಿಕೆಟ್ ಆಟಗಾರರು ಮತ್ತವರ ಅಡ್ಡಹೆಸರು:  ಆಟಗಾರರು ಅಡ್ಡ  ಹೆಸರು
  ಅನಿಲ್ ಕುಂಬ್ಳೆ ಜಂಬೋ
  ರಾಹುಲ್ ದ್ರಾವಿಡ್ ದಿ ವಾಲ್, ಜ್ಯಾಮಿ
  ಜಾವಗಲ್ ಶ್ರೀನಾಥ್ ಜಾವಗಲ್ ಎಕ್ಸ್​ಪ್ರೆಸ್
  ವಿನಯ್ ಕುಮಾರ್ ದಾವಣಗೆರೆ ಎಕ್ಸ್​ಪ್ರೆಸ್
  ಜೆ ಅರುಣ್ ಕುಮಾರ್ ಜ್ಯಾಕ್
  ರಾಬಿನ್ ಉತ್ತಪ್ಪ ವಾಕಿಂಗ್ ಅಸಾಸಿನ್, ರಾಬೀ
  ಗುಂಡಪ್ಪ ವಿಶ್ವನಾಥ್ ವಿಶಿ

  ಭಾರತ ಕ್ರಿಕೆಟ್ ಆಟಗಾರರು ಮತ್ತವರ ಅಡ್ಡಹೆಸರು:

  ಹರ್ಭಜನ್ ಸಿಂಗ್: ಟರ್ಬನೇಟರ್, ಭಜ್ಜಿ

  ಕಪಿಲ್ ದೇವ್: ದಿ ಹರ್ಯಾಣ ಹುರಿಕೇನ್

  ಎಂಎಸ್ ಧೋನಿ: ಕ್ಯಾಪ್ಟನ್ ಕೂಲ್, ಮಾಹಿ

  ಮನ್ಸೂರ್ ಅಲಿ ಖಾನ್ ಪಟೌಡಿ: ಟೈಗರ್

  ರೋಹಿತ್ ಶರ್ಮಾ: ಹಿಟ್ ಮ್ಯಾನ್

  ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್, ಟೆಂಡ್ಲ್ಯಾ

  ಸೌರವ್ ಗಂಗೂಲಿ: ದಾದಾ, ಬೆಂಗಾಳ್ ಟೈಗರ್

  ಸುನೀಲ್ ಗವಾಸ್ಕರ್: ಲಿಟಲ್ ಮಾಸ್ಟರ್

  ವಿರೇಂದರ್ ಸೆಹ್ವಾಗ್: ನವಾಬ್ ಆಫ್ ನಜಾಫ್​ಗಡ್

  ನವಜೋತ್ ಸಿಧು: ಸಿಕ್ಸರ್ ಸಿಧು, ಶೆರ್ರಿ

  ವಿರಾಟ್ ಕೊಹ್ಲಿ: ಚೀಕು

  ಯುವರಾಜ್ ಸಿಂಗ್: ಯುವಿ

  ಶಿಖರ್ ಧವನ್: ಗಬ್ಬರ್

  ಅಜಿಂಕ್ಯ ರಹಾನೆ: ಜಿಂಕ್ಸ್

  ಸುರೇಶ್ ರೈನಾ: ಸೋನು

  ಹಾರ್ದಿಕ್ ಪಾಂಡ್ಯ: ಹೇರಿ ಅಂಡ್ ರಾಕ್​ಸ್ಟಾರ್

  ರವೀಂದ್ರ ಜಡೇಜಾ: ಜಡ್ಡು

  ಪಾರ್ಥಿವ್ ಪಟೇಲ್: ಬಚ್ಚಾ

  ಪೃಥ್ವಿ ಶಾ: ಮಿಸೈಲ್

  ಆಶೀಶ್ ನೆಹರಾ: ಪೋಪಾಟ್

  ಇರ್ಫಾನ್ ಪಠಾಣ್: ಗುಡ್ಡು ಟಟ್ಟು

  ಜಹೀರ್ ಖಾನ್: ಜಾಕ್

  ವಿವಿಎಸ್ ಲಕ್ಷ್ಮಣ್: ವೆರಿ ವೆರಿ ಸ್ಪೆಷಲ್

  ಮೋಹಿಂದರ್ ಅಮರನಾಥ್: ಜಿಮ್ಮಿ

  ಅಜಿತ್ ಅಗರ್ಕರ್: ಬಾಂಬೆ ಡಕ್

  ಚೇತೇಶ್ವರ್ ಪೂಜಾರ: ಚಿಂಟು

  ಉಮೇಶ್ ಯಾದವ್: ಬಬ್ಲೂ

  ಸಂಜು ಸ್ಯಾಮ್ಸನ್: ಚಾಚು

  ಅಕ್ಷರ್ ಪಟೇಲ್: ಬಾಪು  ವಿಶ್ವದ ಇತರೆ ಕ್ರಿಕೆಟಿಗರ ಅಡ್ಡಹೆಸರುಗಳು:

  ಎಬಿ ಡೀವಿಲಿಯರ್ಸ್, ಸೌಥ್ ಆಫ್ರಿಕಾ: ಮಿಸ್ಟರ್ 360 ಡಿಗ್ರಿ

  ಅಡಂ ಗಿಲ್​ಕ್ರಿಸ್ಟ್, ಆಸ್ಟ್ರೇಲಿಯಾ: ಗಿಲ್ಲಿ, ಚರ್ಚಿ

  ಅಲನ್ ಡೊನಾಲ್ಡ್, ಆಸ್ಟ್ರೇಲಿಯಾ: ವೈಟ್ ಲೈಟ್ನಿಂಗ್

  ಆಂಡ್ರ್ಯೂ ಫ್ಲಿಂಟಾಫ್, ಇಂಗ್ಲೆಂಡ್: ಫ್ರೆಡ್ಡೀ

  ಕ್ರಿಸ್ ಗೇಲ್, ವೆಸ್ಟ್ ಇಂಡೀಸ್: ಯೂನಿವರ್ಸ್ ಬಾಸ್

  ಕ್ಲೈವ್ ಲಾಯ್ಡ್, ವೆಸ್ಟ್ ಇಂಡೀಸ್: ಸೂಪರ್ ಕ್ಯಾಟ್

  ಡರೆನ್ ಲೆಹ್ಮಾನ್, ಆಸ್ಟ್ರೇಲಿಯಾ: ಬೂಫ್

  ಡೆನಿಸ್ ಲಿಲ್ಲೀ, ಆಸ್ಟ್ರೇಲಿಯಾ: ಫಾಟ್ (FOT)

  ಡಾನ್ ಬ್ರಾಡ್ಮಾನ್, ಆಸ್ಟ್ರೇಲಿಯಾ: ದಿ ಡಾನ್

  ಜೆಫ್ ಮಾರ್ಷ್, ಆಸ್ಟ್ರೇಲಿಯಾ: ಸ್ವ್ಯಾಂಪಿ

  ಗ್ಲೆನ್ ಮೆಕ್​ಗ್ರಾಥ್, ಆಸ್ಟ್ರೇಲಿಯಾ: ಪಿಜನ್, ಮಿಲ್ಲಾರ್ಡ್

  ಹರ್ಷೆಲ್ ಗಿಬ್ಸ್, ಸೌಥ್ ಆಫ್ರಿಕಾ: ಸ್ಕೂಟರ್

  ಇಯಾನ್ ಬಾಥಮ್, ಇಂಗ್ಲೆಂಡ್: ಬೀಫಿ

  ಜೋಯೆಲ್ ಗಾರ್ನರ್, ವೆಸ್ಟ್ ಇಂಡೀಸ್: ಬಿಗ್ ಬರ್ಡ್

  ಮಾರ್ಟಿನ್ ಕ್ರೌವ್, ನ್ಯೂಜಿಲೆಂಡ್: ಹೋಗನ್

  ಮ್ಯಾಥ್ಯೂ ಹೇಡನ್, ಆಸ್ಟ್ರೇಲಿಯಾ: ಹೇಡೋಸ್, ಬಿಗ್ ಫಿಶ್

  ಮ್ಯಾಥ್ಯೂ ಹೋಗಾರ್ಡ್, ಇಂಗ್ಲೆಂಡ್: ಓಗ್ಗೀ

  ಮೈಕೇಲ್ ಕ್ಲಾರ್ಕ್, ಆಸ್ಟ್ರೇಲಿಯಾ: ಪಪ್

  ಮೈಕೇಲ್ ಹಸ್ಸೀ, ಆಸ್ಟ್ರೇಲಿಯಾ: ಮಿಸ್ಟರ್ ಕ್ರಿಕೆಟ್

  ಮೈಕ್ ಗ್ಯಾಟಿಂಗ್, ಇಂಗ್ಲೆಂಡ್: ಫ್ಯಾಟ್ ಗ್ಯಾಟ್

  ಮುಸ್ತಾಫಿಜುರ್ ರಹಮಾನ್, ಬಾಂಗ್ಲಾದೇಶ: ಫಿಜ್

  ರಿಚರ್ಡ್ ಹ್ಯಾಡ್ಲೀ, ನ್ಯೂಜಿಲೆಂಡ್: ಪ್ಯಾಡಲ್ಸ್

  ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ: ಪಂಟರ್

  ರೊಮೇಶ್ ಕಲುವಿತರಣ, ಶ್ರೀಲಂಕಾ: ಲಿಟಲ್ ಡೈನಮೈಟ್

  ಶಾಹಿದ್ ಅಫ್ರಿದಿ, ಪಾಕಿಸ್ತಾನ: ಬೂಮ್ ಬೂಮ್

  ಶೋಯಿಬ್ ಅಖ್ತರ್, ಪಾಕಿಸ್ತಾನ: ರಾವಲ್​ಪಿಂಡಿ ಎಕ್ಸ್​ಪ್ರೆಸ್

  ವಾಸಿಂಗ್ ಅಕ್ರಂ, ಪಾಕಿಸ್ತಾನ್: ಸುಲ್ತಾನ್ ಆಫ್ ಸ್ವಿಂಗ್.
  Published by:Vijayasarthy SN
  First published: