ಆಧುನಿಕ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳು ಬೌಲರ್ಗಳ ಮೇಲೆ ಹೆಚ್ಚು ಪ್ರಭಾವ ಬೀರುವುದನ್ನು ನಾವು ನೋಡುತ್ತೇವೆ. ಅದರಲ್ಲಿಯೂ ಟಿ20 ಕ್ರಿಕೆಟ್ (T20 Cricket) ಆರಂಭವಾದ ಮೇಲೆ ಕ್ರಿಕೆಟ್ನಲ್ಲಿ (Cricket) ಬ್ಯಾಟ್ಸ್ಮನ್ಗಳ ಅಬ್ಬರ ಹೆಚ್ಚಾಗಿದೆ. ಆದರೆ ವಿಜಯ್ ಮರ್ಚೆಂಟ್ ಟ್ರೋಫಿಯ (Vijay Merchant Trophy) ಪಂದ್ಯದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದೆ. ಇಲ್ಲಿ ಬೌಲರ್ಗಳು ಬ್ಯಾಟ್ಸ್ಮನ್ಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಅಲ್ಲದೇ ಎದುರಾಳಿ ತಂಡವನ್ನು ಕೇವಲ 6 ರನ್ ಒಳಗೆ ಆಲೌಟ್ ಮಾಡುವ ಮೂಲಕ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಇದನ್ನು ಕೇಳಿದಾಗ ಒಂದು ಕ್ಷಣ ನಂಬಲು ಕಷ್ಟವಾಗುತ್ತದೆ, ಆದರೆ ಇದು ಸಂಪೂರ್ಣ ಸತ್ಯ.
ಕೇವಲ 6 ರನ್ಗೆ ಆಲೌಟ್:
ಈ ತಿಂಗಳ ಡಿಸೆಂಬರ್ 23 ರಂದು, ಸಿಕ್ಕಿಂನ ಅಂಡರ್-16 ತಂಡ ಮತ್ತು ಮಧ್ಯಪ್ರದೇಶದ ಅಂಡರ್-16 ತಂಡಗಳು ಖೋಲ್ವಾಡ್ ಜಿಮ್ಖಾನಾ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಇತ್ತ, ಮಧ್ಯಪ್ರದೇಶದ ವಿಧ್ವಂಸಕ ಬೌಲಿಂಗ್ನ ಮುಂದೆ ಸಿಕ್ಕಿಂನ ಇಡೀ ಬ್ಯಾಟ್ಸ್ಮನ್ಗಳು ಕೇವಲ 6 ರನ್ಗಳಿಗೆ ಕುಸಿದರು. ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧ್ಯಪ್ರದೇಶ ತಂಡ ಎಂಟು ವಿಕೆಟ್ ನಷ್ಟಕ್ಕೆ 414 ರನ್ ಗಳಿಸಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಸಿಕ್ಕಿಂ ಬ್ಯಾಟ್ಸ್ಮನ್ಗಳು ಕೇವಲ 43 ರನ್ಗಳಿಗೆ ಆಲೌಟ್ ಆದರು.
ಹೀಗಾಗಿ ಮೊದಲ ಇನಿಂಗ್ಸ್ ಆಧಾರದಲ್ಲಿ ಮಧ್ಯಪ್ರದೇಶ ತಂಡ 371 ರನ್ ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಸಿಕ್ಕಿಂ ತಂಡ ಬ್ಯಾಟಿಂಗ್ಗೆ ಇಳಿದಾಗ ಅವರ ಸ್ಥಿತಿ ಇನ್ನಷ್ಟು ಹೀನಾಯವಾಗಿತ್ತು. ವಾಸ್ತವವಾಗಿ ಸಿಕ್ಕಿಂನ ಇಡೀ ತಂಡ ಕೇವಲ ಆರು ರನ್ಗಳಿಗೆ ಆಲೌಟ್ ಆಯಿತು. ಈ ವೇಳೆ ತಂಡದ 8 ಆಟಗಾರರು ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಸಿಕ್ಕಿಂ ಗಳಿಸಿದ ಈ ಸ್ಕೋರ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅವನೀಶ್ ಹೆಚ್ಚಿನ ಕೊಡುಗೆ ನೀಡಿದರು. ತಂಡಕ್ಕೆ 4 ರನ್ ಕೊಡುಗೆ ನೀಡುವ ಮೂಲಕ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಮತ್ತೊಂದೆಡೆ, ನಾವು ಮಧ್ಯಪ್ರದೇಶದ ಬೌಲಿಂಗ್ ಬಗ್ಗೆ ಮಾತನಾಡಿದರೆ, ಎ ಗಿರಿರಾಜ್ ಶರ್ಮಾ 5 ಮತ್ತು ಅಲಿಫ್ ಹಸನ್ 4 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: Shreyas Iyer: ಕೊಹ್ಲಿ-ಸಚಿನ್ ಮಾಡದ ಸಾಧನೆ ಮಾಡಿದ ಶ್ರೇಯಸ್ ಅಯ್ಯರ್! ಈ ದಾಖಲೆ ಬರೆದ ಏಕೈಕ ಭಾರತೀಯ ಆಟಗಾರ
ಸಂಕ್ಷಿಪ್ತ ಸ್ಕೋರ್:
ಮಧ್ಯಪ್ರದೇಶ 414-8 ಡಿಕ್ಲೇರ್ (ಮನಲ್ ಚೌಹಾಣ್ 170, ಪ್ರತೀಕ್ ಶುಕ್ಲಾ 86, ಅಕ್ಷ್ಯದ್ 4-87)
ಸಿಕ್ಕಿಂ 43ಕ್ಕೆ ಆಲೌಟ್ ( ಆದಿತ್ಯ ಭಂಡಾರಿ 5-20, ಆಯಮ್ ಸರ್ದಾನ 3-21)
ಸಿಕ್ಕಿಂ 2ನೇ ಇನ್ನಿಂಗ್ಸ್ 6 ರನ್ಗೆ ಆಲೌಟ್ (ಗಿರ್ರಾಜ್ ಶರ್ಮಾ 5-1, ಅಲಿಫ್ ಹಸನ್ 4-5) ) ಇನಿಂಗ್ಸ್ ಮತ್ತು 365 ರನ್ಗಳಿಂದ ಮಧ್ಯಪ್ರದೇಶ ಜಯ ಸಾಧಿಸಿತು.
15 ರನ್ಗೆ ಆಲೌಟ್ ಆಗಿದ್ದ ಸಿಡ್ನಿ:
ಬಿಗ್ ಬ್ಯಾಷ್ ಲೀಗ್ ನ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್ ಗಳಿಗೆ ಆಲೌಟ್ ಆಯಿತು. ಪುರುಷರ ವಿಭಾಗದ ಕುರಿತು ಮಾತನಾಡುವುದಾದರೆ, ಇದು ಒಟ್ಟಾರೆ ಟಿ20ಯಲ್ಲಿ ಯಾವುದೇ ತಂಡದ ಕನಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಯಾವುದೇ ತಂಡ 20 ರನ್ಗಳಿಗಿಂತ ಕಡಿಮೆ ಸ್ಕೋರ್ನಲ್ಲಿ ಔಟಾಗಿರಲಿಲ್ಲ. ದೊಡ್ಡ ವಿಷಯವೆಂದರೆ ತಂಡದ ಯಾವುದೇ ಬ್ಯಾಟರ್ 5 ರನ್ಗಳ ಅಂಕಿಅಂಶವನ್ನು ಮುಟ್ಟಲು ಸಾಧ್ಯವಾಗಲಿಲ್ಲ. 5 ಆಟಗಾರರು ಖಾತೆ ತೆರೆಯಲೂ ಸಾಧ್ಯವಾಗದೆ ಕೇವಲ 35 ಎಸೆತಗಳನ್ನು ಆಡಿ ಇಡೀ ತಂಡ ಪೆವಿಲಿಯನ್ಗೆ ಮರಳಿತು.
ಸಿಡ್ನಿ ಥಂಡರ್ಸ್ನ ಆಟಗಾರರ ಸ್ಕೋರ್ಗಳನ್ನು ನೋಡಿದರೆ, ಅದು 0, 0, 3, 0, 2, 1, 1, 0, 0, 4, 1 ಈ ರೀತಿ ಕಾಣುತ್ತದೆ. ಸಿಡ್ನಿ ಥಂಡರ್ಸ್ನ ಯಾವುದೇ ಆಟಗಾರನು 4 ಕ್ಕಿಂತ ಹೆಚ್ಚು ಸ್ಕೋರ್ ಮಾಡಿಲ್ಲ. 10ನೇ ಕ್ರಮಾಂಕಕ್ಕೆ ಇಳಿದ ಬ್ರೆಂಡನ್ ಡೊಗೆನ್ ಗರಿಷ್ಠ 4 ರನ್ ಗಳಿಸಿದರು. ಅಡಿಲೇಡ್ನಿಂದ ಹೆನ್ರಿ ಥಾರ್ಟನ್ 2.5 ಓವರ್ಗಳಲ್ಲಿ 3 ರನ್ಗಳಿಗೆ 5 ವಿಕೆಟ್ ಪಡೆದರು. ಅದೇ ಸಮಯದಲ್ಲಿ ವೆಸ್ ಎಗ್ಗರ್ 2 ಓವರ್ ಗಳಲ್ಲಿ 6 ರನ್ ನೀಡಿ 4 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ