• Home
  • »
  • News
  • »
  • sports
  • »
  • Cricket News: ರನ್​ ಗಳಿಸುವಾಗ ಕುಸಿದು ಬಿದ್ದ ಕ್ರಿಕೆಟಿಗ, ಹೃದಯಾಘಾತದಿಂದ ಸ್ಥಳದಲ್ಲಿಯೇ ಸಾವು

Cricket News: ರನ್​ ಗಳಿಸುವಾಗ ಕುಸಿದು ಬಿದ್ದ ಕ್ರಿಕೆಟಿಗ, ಹೃದಯಾಘಾತದಿಂದ ಸ್ಥಳದಲ್ಲಿಯೇ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Cricket News: ರನ್ ಗಳಿಸಲು ಓಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಪೀಚ್ ಮೇಲೆ ಬಿದ್ದು ಯುವ ಕ್ರಿಕೆಟಿಗ ಸಾವನ್ನಪ್ಪಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.

  • Share this:

ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಯುವ ಕ್ರಿಕೆಟ್ (Cricket)​ ಆಟಗಾರ ಸಾವನ್ನಪ್ಪಿದ (Death) ಘಟನೆ ನಡೆದಿವೆ. ಉತ್ತರ ಪ್ರದೇಶದ ಕಾನ್ಪುರ (Kanpur) ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಾನ್ಪುರ ಜಿಲ್ಲೆಯ ಬಿಲಹೌರ್‌ನ ಬಿಐಸಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ 16 ವರ್ಷದ ಬ್ಯಾಟ್ಸ್‌ಮನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮೃತ ಆಟಗಾರನ ಹೆಸರು ಅನುಜ್ ಪಾಂಡೆ (Anuj Pandey)(ವಯಸ್ಸು 16) ಎಂದು ತಿಳಿದುಬಂದಿದೆ. ಈ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 16 ವರ್ಷದ ಬಾಲಕ ಅನುಜ್ ಪಾಂಡೆ ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಸಾವನ್ನಪ್ಪಿದ್ದಾರೆ.


ಅನುಜ್ ರನ್ ಗಳಿಸಲು ಓಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೃದಯಾಘಾತವಾಯಿತು. ಆದ್ದರಿಂದ ಅನುಜ್​ ಎಡವಿ ಪೀಚ್ ಮೇಲೆ ಬಿದ್ದು ಸ್ವಲ್ಪ ಸಮಯದ ನಂತರ ಸಾವನ್ನಪ್ಪಿರುವುದಾಗಿ ತಿಳಿದುಬಂಡಿದೆ. ಮೃತ ಅನುಜ್ ಅವರಿಗೆ ಈ ಹಿಂದೆ ಯಾವುದೇ ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.


ನಿಜವಾಗಿಯೂ ಆ ವೇಳೆ ಏನಾಯಿತು?:


ಈ ಕುರಿತು ಮೃತ ಬಾಲಕನ ತಂದೆ ಅಮಿತ್ ಪಾಂಡೆ ಸಹ ಇದರ ಕುರಿತು ದುಃಖದಲ್ಲಿ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಅಮಿತ್ ಪಾಂಡೆ ಅವರಿಗೆ ಸುಮಿತ್ ಮತ್ತು ಅನುಜ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಅನುಜ್ (ವಯಸ್ಸು 16) ತನ್ನ ಸ್ನೇಹಿತರೊಂದಿಗೆ ಬಿಐಸಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಡಲು ಹೋಗಿದ್ದ. ಅನುಜ್ ರನ್ ಪಡೆಯಲು ಓಡುವಾಗ ಏಕಾಏಕಿ ಕುಸಿದು ಬಿದ್ದರು. ಮೈದಾನದಲ್ಲಿ ಹಾಜರಿದ್ದ ವ್ಯಕ್ತಿಗಳು ಅನುಜ್​ ಅವರ ಕೈ ಮತ್ತು ಪಾದಗಳನ್ನು ಉಜ್ಜಲು ಪ್ರಾರಂಭಿಸಿದರು. ಆದರೆ ಅನುಜ್ ಯಾವುದೇ ರೀತಿ ಕದಲದ ಕಾರಣ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಮನೆಯವರು ಅನುಜ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಅವರನ್ನು ಸಿಎಚ್‌ಸಿ ಬಿಲ್ಹೌರ್‌ಗೆ ಕರೆದೊಯ್ಯಲು ಹೇಳಿದರು. ಅಲ್ಲಿಗೆ ತಲುಪಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.


ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ಗಾಯದ ಬಗ್ಗೆ ಬಿಗ್ ಅಪ್‌ಡೇಟ್, ODI ಮಾತ್ರವಲ್ಲ ಟೆಸ್ಟ್ ಸರಣಿಯಿಂದಲೂ ಔಟ್​?


ಸೀನುವಾಗ ಸಾವನ್ನಪ್ಪಿದ ವ್ಯಕ್ತಿ:


ಈ ನಡುವೆ ಮೀರತ್ ನಲ್ಲೂ ಇಂತಹದ್ದೇ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ 25 ವರ್ಷದ ವ್ಯಕ್ತಿಯೊಬ್ಬ ಸೀನುವಿಕೆಯಿಂದ ಹಠಾತ್ತನೆ ಸಾವನ್ನಪ್ಪಿದ್ದಾನೆ. ನಾಲ್ವರು ಯುವಕರು ಒಟ್ಟಿಗೆ ಇದ್ದಾಗ ಒಬ್ಬಾತ ಕೆಮ್ಮಿದ ನಂತರ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ಇತರರು ಅವನನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಸಾವನ್ನಪ್ಪಿದ್ದರು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.


ಈ ಎರಡು ಘಟನೆಗಳ ನಂತರ ಅನೇಕ ಜನರು ಆಘಾತಕ್ಕೊಳಗಾಗಿದ್ದಾರೆ. ಇದನ್ನು ಸುಲಭವಾಗಿ ನಂಬುವುದು ಯಾರಿಗೂ ಕಷ್ಟ. ಅನುಜ್ ಪಾಂಡೆಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಈ ವಯಸ್ಸಿನಲ್ಲಿ ಅವರಿಗೆ ಹೇಗೆ ಹೃದಯಾಘಾತವಾಯಿತು ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವ ಪೀಳಿಗೆಯ ಆರೋಗ್ಯದ ಬಗ್ಗೆಯೂ ಚರ್ಚೆ ಆರಂಭವಾಗಿದೆ.


ಕೈಬೆರಳು ಗಾಯ ಮಾಡಿಕೊಂಡಿರುವ ರೋಹಿತ್​ ಶರ್ಮಾ:


ಇನ್ನು, ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ಯಾಚ್​ ಹಿಡಿಯುವ ವೇಳೆ ಎಡಗೈ ಹೆಬ್ಬೆರಳು ಬಲವಾಗಿ ನೆಲಕ್ಕೆ ಬಡಿದ ಕಾರಣ ಗಾಯಗೊಂಡಿದ್ದಾರೆ. ಈಗಾಗಲೇ ಅವರು ಮುಂದಿನ ಏಕದಿನ ಸರಣಿಗೆ ಅಲಭ್ಯರಾಗಿರಲಿದ್ದಾರೆ ಎಂದು ತಿಳಿದುಬಂದಿದೆ.

Published by:shrikrishna bhat
First published: