ಕ್ರಿಕೆಟ್​​​ನಲ್ಲಿ ಹೀಗೂ ಔಟ್ ಆಗ್ತಾರೆ; ನ್ಯೂಜಿಲೆಂಡ್ ಆಟಗಾರ್ತಿ ವಿಕೆಟ್ ಒಪ್ಪಿಸಿದ್ದು ಹೇಗೆ ನೋಡಿ!

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಗವರ್ನರ್ ಜನರಲ್ ಇಲೆವೆಲ್ ವನಿತೆಯರ ನಡುವಣ ಏಕದಿನ ಅಭ್ಯಾಸ ಪಂದ್ಯದಲ್ಲಿ ಕಿವೀಸ್ ಆಟಗಾರ್ತಿ ಕೇಟೀ ಪರ್ಕಿನ್ಸ್​​ ಅವರು ಔಟ್ ಆದ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Vinay Bhat | news18
Updated:March 13, 2019, 5:17 PM IST
ಕ್ರಿಕೆಟ್​​​ನಲ್ಲಿ ಹೀಗೂ ಔಟ್ ಆಗ್ತಾರೆ; ನ್ಯೂಜಿಲೆಂಡ್ ಆಟಗಾರ್ತಿ ವಿಕೆಟ್ ಒಪ್ಪಿಸಿದ್ದು ಹೇಗೆ ನೋಡಿ!
ನ್ಯೂಜಿಲೆಂಡ್ ಆಟಗಾರ್ತಿ ಔಟ್ ಆದ ಪರಿ
  • News18
  • Last Updated: March 13, 2019, 5:17 PM IST
  • Share this:
ಬ್ಯಾಟ್ಸ್​ಮನ್​​ ಹೊಡೆದ ಚೆಂಡು ಸಹ ಆಟಗಾರ್ತಿಯ ಬ್ಯಾಟ್​ಗೆ ತಾಗಿ ವಿಚಿತ್ರ ರೀತಿಯಲ್ಲಿ ಔಟ್ ಆದ ಘಟನೆ ಕ್ಯಾನ್​​​​ಬೆರಾದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ನಡೆದಿದೆ.

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಗವರ್ನರ್ ಜನರಲ್ ಇಲೆವೆಲ್ ವನಿತೆಯರ ನಡುವಣ ಏಕದಿನ ಅಭ್ಯಾಸ ಪಂದ್ಯದಲ್ಲಿ ಕಿವೀಸ್ ಆಟಗಾರ್ತಿ ಕೇಟೀ ಪರ್ಕಿನ್ಸ್​​ ಅವರು ಔಟ್ ಆದ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

45ನೇ ಓವರ್​​​ನ ಹೀದರ್ ಗ್ರಹಾಂರ 5ನೇ ಎಸೆತದಲ್ಲಿ ಬ್ಯಾಟ್ಸ್​ಮನ್​​​ ಪರ್ಕಿನ್ಸ್​ ಅವರು ಚೆಂಡನ್ನು ನೇರವಾಗಿ ಬೌಂಡರಿಗೆ ಅಟ್ಟಲು ಬ್ಯಾಟ್ ಬೀಸಿದರು. ಆದರೆ, ಈ ಸಂದರ್ಭ ನಾನ್​ ಸ್ಟ್ರೈಕ್​​ನಲ್ಲಿದ್ದ ಮಾರ್ಟಿನ್​​ ಅವರ ಬ್ಯಾಟ್​​ಗೆ ಬಾಲ್ ತಾಗಿ ನೇರವಾಗಿ ಚೆಂಡು ಬೌಲರ್ ಕೈ ಸೇರಿದೆ.

ಇದನ್ನೂ ಓದಿ: 'ನಾಯಕನಿಗೇ ಎದುರು ಮಾತಾಡ್ತೀಯಾ?'; ಬುಮ್ರಾಗೆ ಖಡಕ್ ವಾರ್ನಿಂಗ್ ನೀಡಿದ ಕೊಹ್ಲಿ

ಈ ಮೂಲಕ ಊಹಿಸಲಾಗದ ರೀತಿಯಲ್ಲಿ ಬ್ಯಾಟ್ಸ್​ಮನ್​​ ಔಟ್ ಆದ ರೀತಿಯನ್ನು ಕಂಡು ಎಲ್ಲರು ಒಮ್ಮೆ ಗಾಭರಿಗೊಂಡರು.

 ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ವನಿತೆಯರು ನಿಗದಿತ 50 ಓವರ್​ಗೆ 323 ರನ್ ಚಚ್ಚಿದರು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಗವರ್ನರ್ ಜನರಲ್ ಇಲೆವೆಲ್ ತಂಡ 38.2 ಓವರ್​​ಗಳಲ್ಲಿ ಕೇವಲ 157 ರನ್​ಗೆ ಆಲೌಟ್ ಆಗಿ ಸೋಲಿಗೆ ಶರಣಾಯಿತು. ನ್ಯೂಜಿಲೆಂಡ್ ತಂಡ 166 ರನ್​ಗಳ ಭರ್ಜರಿ ಜಯ ಸಾಧಿಸಿತು.

First published:March 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading