• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • New Zealand XI vs India: ಅಭ್ಯಾಸ ಪಂದ್ಯ; ಮೊದಲ ದಿನವೇ ಟೀಂ ಇಂಡಿಯಾ ಆಲೌಟ್; 4 ಬ್ಯಾಟ್ಸ್​ಮನ್​ಗಳು ಶೂನ್ಯ!

New Zealand XI vs India: ಅಭ್ಯಾಸ ಪಂದ್ಯ; ಮೊದಲ ದಿನವೇ ಟೀಂ ಇಂಡಿಯಾ ಆಲೌಟ್; 4 ಬ್ಯಾಟ್ಸ್​ಮನ್​ಗಳು ಶೂನ್ಯ!

ಕ್ರೈಸ್ಟ್ಚರ್ಚ್ನಲ್ಲಿ ಸಾಗುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದೆ. ಹನುಮಾ ವಿಹಾರಿ ಹಾಗೂ ರಿಷಭ್ ಪಂತ್ ನಾಳೆ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕ್ರೈಸ್ಟ್ಚರ್ಚ್ನಲ್ಲಿ ಸಾಗುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದೆ. ಹನುಮಾ ವಿಹಾರಿ ಹಾಗೂ ರಿಷಭ್ ಪಂತ್ ನಾಳೆ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಪೂಜಾರ ಹಾಗೂ ಹನುಮಾ ವಿಹಾರಿ ತಂಡಕ್ಕೆ ಆಸರೆಯಾಗಿ ನಿಂತರು. 38 ರನ್​​ಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಇವರಿಬ್ಬರು ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

  • Share this:

ಹ್ಯಾಮಿಲ್ಟನ್ (ಫೆ. 14): ಇಲ್ಲಿನ ಸೇಡನ್ ಪಾರ್ಕ್​ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಮೊದಲ ದಿನವೇ ಕಳಪೆ ಪ್ರದರ್ಶನ ತೋರಿದ್ದಾರೆ. ಕೇವಲ 263 ರನ್​ಗೆ ಆಲೌಟ್ ಆಗಿದೆ.


ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 5 ರನ್ ಆಗುವ ಹೊತ್ತಿಗೆನೇ ತನ್ನ 3 ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾ ಓಪನರ್​ಗಳು ಏಕದಿನದಂತೆ ಇಲ್ಲುಕೂಡ ವೈಫಲ್ಯ ಅನುಭವಿಸಿದರು. ಪೃಥ್ವಿ ಶಾ 4 ಎಸೆತಗಳಲ್ಲಿ ಸೊನ್ನೆ ಸುತ್ತಿದರೆ, ಮಯಾಂಕ್ ಅಗರ್ವಾಲ್ 1 ರನ್​ಗೆ ಔಟ್ ಆದರು.RCB: ಬೆಂಗಳೂರು ಸೇರಿಸಿ ಹೊಚ್ಚ ಹೊಸ ಲೋಗೋ ಬಿಡುಗಡೆ ಮಾಡಿದ ಆರ್​ಸಿಬಿ; ಹೇಗಿದೆ ಗೊತ್ತಾ..?


ಉತ್ತಮ ಫಾರ್ಮ್​ನಲ್ಲಿರುವ ಶುಭ್ಮನ್ ಗಿಲ್ ಮೊದಲ ಎಸೆತದಲ್ಲೇ ಪೆವಿಲಿಯನ್ ಸೇರಿಕೊಂಡರು. ಬಳಿಕ ಚೇತೇಶ್ವರ್ ಪೂಜಾರ ಜೊತೆಯಾದ ಅಜಿಂಕ್ಯಾ ರಹಾನೆ ಕೊಂಚಹೊತ್ತು ಕ್ರೀಸ್​ನಲ್ಲಿದ್ದರಷ್ಟೆ. ರಹಾನೆ ಆಟ 18 ರನ್​ಗೆ ಅಂತ್ಯವಾಯಿತು.


ಈ ಸಂದರ್ಭ ಪೂಜಾರ ಹಾಗೂ ಹನುಮಾ ವಿಹಾರಿ ತಂಡಕ್ಕೆ ಆಸರೆಯಾಗಿ ನಿಂತರು. 38 ರನ್​​ಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಇವರಿಬ್ಬರು ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 195 ರನ್​ಗಳ ಅಮೋಘ ಜೊತೆಯಾಟ ಆಡಿದರು. ಪೂಜಾರ ಅರ್ಧಶತಕ ಸಿಡಿಸಿದರೆ, ವಿಹಾರಿ ಸೆಂಚುರಿ ಬಾರಿಸಿದರು.U19 World Cup: ತನಗೆ ಸಿಕ್ಕ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?


ಪೂಜಾರ 211 ಎಸೆತಗಳಲ್ಲಿ 93 ರನ್​ಗೆ ಔಟ್ ಆಗುವ ಮೂಲಕ ಶತಕ ವಂಚಿತರಾದರೆ, ವಿಹಾರಿ 182 ಎಸೆತಗಳಲ್ಲಿ 101 ರನ್ ಗಳಿಸಿ ನಿವೃತ್ತಿ ಪಡೆದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಬಂದ ಬೆನ್ನಲ್ಲೆ ಹಿಂತಿರುಗಿದರು. ರಿಷಭ್ ಪಂತ್ 7 ರನ್​ಗೆ ಔಟ್ ಆದರೆ, ವೃದ್ದಿಮಾನ್ ಸಾಹ ಹಾಗೂ ಆರ್. ಅಶ್ವಿನ್ ಸೊನ್ನೆ ಸುತ್ತಿದರು. ಜಡೇಜಾ 8 ರನ್ ಗಳಿಸಿದರು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ.


ಅಂತಿಮವಾಗಿ ಭಾರತ 78.5 ಓವರ್​ನಲ್ಲಿ 263 ರನ್​ಗೆ ಸರ್ವಪತನ ಕಂಡಿತು. ಇಲ್ಲಿಗೆ ಮೊದಲ ದಿನದಾಟವನ್ನು ಅಂತ್ಯಗೊಳಿಸಲಾಯಿತು. ನ್ಯೂಜಿಲೆಂಡ್ ಪರ ಸ್ಕಾಟ್ ಕುಗೆಲೈಜ್ನ್ ಹಾಗೂ ಇಶ್ ಸೋಧಿ ತಲಾ 3 ವಿಕೆಟ್ ಕಿತ್ತರೆ, ಜಾಕ್ ಗಿಬ್​ಸನ್ 2 ವಿಕೆಟ್ ಪಡೆದರು.


First published: