New Zealand vs Pakistan, ICC Cricket World Cup 2019: ಪಾಕ್ ವಿರುದ್ಧ ನ್ಯೂಜಿಲೆಂಡ್​ಗೆ ಆರಂಭಿಕ ಆಘಾತ

ಇನ್ನು ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ನ್ಯೂಜಿಲೆಂಡ್‌ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಪಾಕ್ ವಿರುದ್ದ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸುವ ಇರಾದೆಯಲ್ಲಿದೆ

zahir | news18
Updated:June 26, 2019, 5:14 PM IST
New Zealand vs Pakistan, ICC Cricket World Cup 2019: ಪಾಕ್ ವಿರುದ್ಧ ನ್ಯೂಜಿಲೆಂಡ್​ಗೆ ಆರಂಭಿಕ ಆಘಾತ
ಅಮೀರ್
  • News18
  • Last Updated: June 26, 2019, 5:14 PM IST
  • Share this:
ಬರ್ಮಿಂಗ್‌ಹ್ಯಾಮ್: ಐಸಿಸಿ ಏಕದಿನ ವಿಶ್ವಕಪ್‌ನ 33ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ. ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯವು ಮಳೆಯಿಂದಾಗಿ ತಡವಾಗಿ ಆರಂಭವಾಗಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಸೆಮಿಫೈನಲ್ಸ್‌ ಆಸೆ ಜೀವಂತವಾಗಿರಿಸಿಕೊಂಡಿರುವ ಪಾಕಿಸ್ತಾನ ತಂಡಕ್ಕೆ ಈ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಿದ್ದು, ನ್ಯೂಜಿಲೆಂಡ್ ವಿರುದ್ದ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರಲು ಯೋಜನೆ ಹಾಕಿಕೊಂಡಿದೆ.

ಸರ್ಫರಾಜ್‌ ಪಡೆಯು ಮುಂದಿನ ಹಂತವನ್ನು ಪ್ರವೇಶಿಸಬೇಕಿದ್ದರೆ, ಕಿವೀಸ್ ವಿರುದ್ದ ಸೇರಿದಂತೆ ಉಳಿದ ಮೂರು ಪಂದ್ಯಗಳಲ್ಲೂ ಜಯ ಸಾಧಿಸಬೇಕಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉತ್ತಮ ರನ್​ರೇಟ್​ ಮೂಲಕ ಜಯ ಸಾಧಿಸುವತ್ತ ಪಾಕ್ ಆಟಗಾರರು ಶ್ರೇಷ್ಠ ಪ್ರದರ್ಶನ ನೀಡುವ ಸಾಧ್ಯತೆಯಿದೆ.

ಪಾಕ್ ಪರ ಮೊಹಮ್ಮದ್ ಅಮೀರ್ ಬೌಲಿಂಗ್​ನಲ್ಲಿ ಮಿಂಚಿದರೂ ಉಳಿದ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರುತ್ತಿಲ್ಲ. ಇನ್ನು ಬಾಬರ್ ಆಜಂ ಹಾಗೂ ಹ್ಯಾರಿಸ್ ಸೊಹೇಲ್ ಬ್ಯಾಟಿಂಗ್​ನಲ್ಲಿ ಒಂದಷ್ಟು ಮಿಂಚಿದ್ದು ಬಿಟ್ಟರೆ ತಂಡದಿಂದ ಸಂಘಟಿತ ಪ್ರದರ್ಶನ ಮೂಡುತ್ತಿಲ್ಲ ಎಂಬ ಚಿಂತೆಯಲ್ಲಿದೆ ಪಾಕ್ ತಂಡ.

ಇನ್ನು ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ನ್ಯೂಜಿಲೆಂಡ್‌ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಪಾಕ್ ವಿರುದ್ದ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸುವ ಇರಾದೆಯಲ್ಲಿದೆ. ತಂಡದ ಸಂಕಷ್ಟದ ಸ್ಥಿತಿಯಲ್ಲೂ ಕೂಲ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ನೆರವಿಗೆ ಬರುತ್ತಿದ್ದು, ಹಾಗೆಯೇ ಇತರೆ ಆಟಗಾರರು ಸಹ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಕಿವೀಸ್ ಪಡೆಯೇ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಇತ್ತೀಚಿನ ವರದಿ ಬಂದಾಗ ನ್ಯೂಜಿಲೆಂಡ್ ತಂಡವು 12.3 ಓವರ್​ ಮುಕ್ತಾಯಕ್ಕೆ 4 ವಿಕೆಟ್ ಕಳೆದುಕೊಂಡು 46 ರನ್​ ಬಾರಿಸಿದೆ. ಕ್ರೀಸ್​ನಲ್ಲಿ ನಾಯಕ ವಿಲಿಯಮ್ಸನ್ ಹಾಗೂ ಜೇಮ್ಸ್ ನೀಶಮ್ ಬ್ಯಾಟ್​ ಬೀಸುತ್ತಿದ್ದಾರೆ. ಪಾಕ್ ಪರ ಶಾಹೀನ್ ಅಫ್ರಿದಿ ಮಾರಕ ದಾಳಿ ಸಂಘಟಿಸಿ 3 ವಿಕೆಟ್ ಕಿತ್ತರೆ, ಅಮೀರ್ 1 ವಿಕೆಟ್ ಕಬಳಿಸಿದ್ದಾರೆ.

ಉಭಯ ತಂಡಗಳು ಇಂತಿವೆ:ಪಾಕಿಸ್ತಾನ: ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಮ್, ಮೊಹಮ್ಮದ್ ಹಫೀಜ್, ಹ್ಯಾರಿಸ್ ಸೊಹೇಲ್, ಸರ್ಫರಾಜ್ ಅಹ್ಮದ್ (ನಾಯಕ), ಇಮಾದ್ ವಾಸಿಂ, ಶಾದಾಬ್ ಖಾನ್, ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್, ಶಾಹೀನ್ ಅಫ್ರಿದಿ

ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲಾಥಮ್ , ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ