ಪಾಕ್ ದಾಳಿಗೆ ನಲುಗಿದ ಕಿವೀಸ್ ಪಡೆಗೆ ನೀಶಮ್ ಆಸರೆ: ಸರ್ಫರಾಜ್ ಬಳಗಕ್ಕೆ ಸ್ಪರ್ಧಾತ್ಮಕ ಮೊತ್ತದ ಸವಾಲು

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್​ಗೆ ಆರಂಭದಲ್ಲೇ ಪಾಕ್ ಬೌಲರ್​ಗಳು ಉತ್ತರ ನೀಡಿದ್ದರು. ಮೊದಲ ಹತ್ತು ಓವರ್‌ಗಳಲ್ಲೇ ತಂಡದ ಪ್ರಮುಖ 3 ವಿಕೆಟುಗಳನ್ನು ಕಿವೀಸ್ ಕಳೆದುಕೊಂಡಿತು.

zahir | news18
Updated:June 26, 2019, 8:27 PM IST
ಪಾಕ್ ದಾಳಿಗೆ ನಲುಗಿದ ಕಿವೀಸ್ ಪಡೆಗೆ ನೀಶಮ್ ಆಸರೆ: ಸರ್ಫರಾಜ್ ಬಳಗಕ್ಕೆ ಸ್ಪರ್ಧಾತ್ಮಕ ಮೊತ್ತದ ಸವಾಲು
ICC
  • News18
  • Last Updated: June 26, 2019, 8:27 PM IST
  • Share this:
ಬರ್ಮಿಂಗ್‌ಹ್ಯಾಮ್: ವಿಶ್ವಕಪ್‌ನ 33ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡವು ಪಾಕಿಸ್ತಾನಕ್ಕೆ 238 ರನ್​ಗಳ ಗುರಿ ನೀಡಿದೆ. ಜೇಮ್ಸ್ ನೀಶಮ್ (97) ಹಾಗೂ ಕಾಲಿನ್ ಡಿ ಗ್ರ್ಯಾಂಡ್‌ಹೋಮ್(64) ಅವರ ಅಮೋಘ ಬ್ಯಾಟಿಂಗ್​ ನೆರವಿನಿಂದ ಕಿವೀಸ್ ತಂಡ ಆರು ವಿಕೆಟ್ ನಷ್ಟಕ್ಕೆ 237 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್​ಗೆ ಆರಂಭದಲ್ಲೇ ಪಾಕ್ ಬೌಲರ್​ಗಳು ಶಾಕ್ ನೀಡಿದ್ದರು. ಮೊದಲ ಹತ್ತು ಓವರ್‌ಗಳಲ್ಲೇ ತಂಡದ ಪ್ರಮುಖ 3 ವಿಕೆಟುಗಳನ್ನು ಕಿವೀಸ್ ಕಳೆದುಕೊಂಡಿತು. ಅಮೀರ್, ಶಹೀನ್ ದಾಳಿಯನ್ನು ಎದುರಿಸಲು ಎಡವಿದ ಮಾರ್ಟನ್ ಗಪ್ಟಿಲ್ (5), ಕಾಲಿನ್ ಮನ್ರೊ (12) ಜತೆಗೆ ರಾಸ್ ಟೇಲರ್ (3) 38 ರನ್​ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು.

ಈ ಹಂತದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಆಸರೆಯಾದರು. ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದ್ದ ನಾಯಕನಿಗೆ ಜೇಮ್ಸ್ ನೀಶಮ್ ಸಾಥ್ ನೀಡಿದರು. ಅದರಂತೆ ನಿಧಾನಗತಿಯಲ್ಲಿ ರನ್​ ಪೇರಿಸಿದ ಈ ಜೋಡಿ 25 ಓವರ್​ಗಳಲ್ಲಿ ತಂಡದ ಮೊತ್ತವನ್ನು 75ರ ಗಡಿ ದಾಟಿಸಿದರು.

ಆದರೆ 26ನೇ ಓವರ್​ ಎಸೆಯಲು ಬಂದ ಶದಾಬ್ ಖಾನ್ ಕೇನ್ ವಿಲಿಯಮ್ಸನ್(41) ​ರನ್ನು ಹೊರಗಟ್ಟುವ ಮೂಲಕ ತಂಡಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಸಂಕಷ್ಟದ ಸ್ಥಿತಿಯಲ್ಲಿ ಜೊತೆಗೂಡಿದ ಜೇಮ್ಸ್ ನೀಶಮ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಕಿವೀಸ್ ತಂಡವನ್ನು ಮೇಲೆಕ್ಕೆತ್ತುವ ಕಾಯಕಕ್ಕೆ ಕೈ ಹಾಕಿದರು.

ರಕ್ಷಣಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಪಾಕ್ ಬೌಲರುಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದರು. ವೈಯುಕ್ತಿಕ ಮೊತ್ತ 50 ದಾಟುತ್ತಿದ್ದಂತೆ ಗೇರ್ ಬದಲಿಸಿದ ನೀಶಮ್ ಪಾಕ್ ವೇಗಿಗಳ ವಿರುದ್ಧ ತಿರುಗಿ ಬಿದ್ದರು. ಪರಿಣಾಮ ರನ್​ ಗತಿಯಲ್ಲಿ ವೇಗ ಪಡೆದುಕೊಂಡಿತು.

ಮತ್ತೊಂದೆಡೆ ಪಾಕ್ ಬೌಲರ್​ಗಳನ್ನು ಲೀಲಾಜಾಲವಾಗಿ ದಂಡಿಸಿದ ಡಿ ಗ್ರ್ಯಾಂಡ್‌ಹೋಮ್ ಕಿವೀಸ್ ರನ್​ ಏರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಆರು ಭರ್ಜರಿ ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ 71 ಎಸೆತಗಳಲ್ಲಿ ಡಿ ಗ್ರ್ಯಾಂಡ್‌ಹೋಮ್ 64 ರನ್​ ಚಚ್ಚಿದರೆ, ನೀಶಮ್ ಐದು ಬೌಂಡರಿ ಹಾಗೂ ಮೂರು ಸೂಪರ್ ಸಿಕ್ಸರ್​ಗಳೊಂದಿಗೆ 112 ಎಸೆತಗಳಲ್ಲಿ 97 ರನ್​ ಸಿಡಿಸಿದರು. ಈ ಇಬ್ಬರ ಅದ್ಭುತ ಜೊತೆಯಾಟ ಪರಿಣಾಮ ನ್ಯೂಜಿಲೆಂಡ್ ನಿಗದಿತ 50 ಒವರ್​ಗಳಲ್ಲಿ 237 ರನ್​ಗಳನ್ನು ಪೇರಿಸುವಂತಾಯಿತು. ಇನ್ನು ಪಾಕ್ ಪರ ಮಾರಕ ದಾಳಿ ಸಂಘಟಿಸಿದ ಶಾಹೀನ್ ಆಫ್ರಿದಿ 3 ವಿಕೆಟ್ ಪಡೆದರೆ ಮತ್ತು ಮೊಹಮ್ಮದ್ ಅಮೀರ್ ಹಾಗೂ ಶದಬ್ ಖಾನ್ ತಲಾ ಒಂದು ವಿಕೆಟನ್ನು ಕಬಳಿಸಿದರು.

ಇದನ್ನೂ ಓದಿ: 'ಕೇಸರಿ' ಜೆರ್ಸಿ ಬಗ್ಗೆ ರಾಜಕೀಯ ನಾಯಕರ ತಗಾದೆ: ಹೇಗಿದೆ ಗೊತ್ತಾ ಟೀಂ ಇಂಡಿಯಾದ ಹೊಸ ಜೆರ್ಸಿ?
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ