• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Kane Williamson: ಕೇನ್ ವಿಲಿಯಮ್ಸನ್​ರಿಂದ ಮತ್ತೊಂದು ದ್ವಿಶತಕ: ಹಾಡಿಹೊಗಳಿದ ವಿವಿಎಸ್ ಲಕ್ಷಣ್

Kane Williamson: ಕೇನ್ ವಿಲಿಯಮ್ಸನ್​ರಿಂದ ಮತ್ತೊಂದು ದ್ವಿಶತಕ: ಹಾಡಿಹೊಗಳಿದ ವಿವಿಎಸ್ ಲಕ್ಷಣ್

Kane Williamson

Kane Williamson

ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ನಾಯಕನ ಆಟವಾಡಿ, ನ್ಯೂಜಿಲೆಂಡ್ ತಂಡಕ್ಕೆ ಭರ್ಜರಿ ಗೆಲವು ತಂದುಕೊಟ್ಟಿದ್ದ ವಿಲಿಯಮ್ಸನ್, ಎರಡನೇ ಪಂದ್ಯದಲ್ಲೂ ತಮ್ಮ ಅಮೋಘ ಆಟ ಮುಂದುವರೆಸಿದ್ದಾರೆ.

 • Share this:

  ಪ್ರವಾಸಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ನಾಯಕ ಕೇನ್ ವಿಲಿಯಮ್ಸನ್ ನಾಲ್ಕನೇ ಬಾರಿ ಟೆಸ್ಟ್​ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದು ತಂಡದ ಮೊತ್ತ 600ರತ್ತ ಸಾಗುತ್ತಿದೆ. ಅಲ್ಲದೆ ಕೇನ್ ಸತತವಾಗಿ ಮೂರು ಟೆಸ್ಟ್​ಗಳಲ್ಲಿ ಮೂರಂಕಿ ಗೆರೆ ದಾಟಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ತಾನೇ ವಿಶ್ವದ ನಂಬರ್ ಒನ್ ಟೆಸ್ಟ್​ ಬ್ಯಾಟ್ಸ್​ಮನ್ ಎಂದು ಸಾಬೀತು ಪಡಿಸಿದ್ದಾರೆ. ಸದ್ಯ ಕಿವೀಸ್ ನಾಯಕನನ್ನು ಭಾರತ ತಂಡದ ಮಾಜಿ ಬ್ಯಾಟಿಂಗ್ ದಿಗ್ಗಜ ವಿವಿಎಸ್ ಲಕ್ಷಣ್ ಹಾಡಿಹೊಗಳಿದ್ದು, ಕ್ರಿಕೆಟ್‌ನಲ್ಲಿ ಹೆಸರು ಗಳಿಸಲು ಪ್ರಯತ್ನಿಸುತ್ತಿರುವ ಯಾವುದೇ ಯುವಕನಿಗೆ ಕೇನ್​ ವಿಲಿಯಮ್ಸನ್​ ನಿಜವಾದ ರೋಲ್ ಮಾಡೆಲ್ ಎಂದು ಮೆಚ್ಚಯಗೆಯ ಮಾತನ್ನಾಡಿದ್ದಾರೆ.


  ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ನಾಯಕನ ಆಟವಾಡಿ, ನ್ಯೂಜಿಲೆಂಡ್ ತಂಡಕ್ಕೆ ಭರ್ಜರಿ ಗೆಲವು ತಂದುಕೊಟ್ಟಿದ್ದ ವಿಲಿಯಮ್ಸನ್, ಎರಡನೇ ಪಂದ್ಯದಲ್ಲೂ ತಮ್ಮ ಅಮೋಘ ಆಟ ಮುಂದುವರೆಸಿದ್ದಾರೆ.


  Sourav Ganguly: ಗುಣಮುಖರಾಗುತ್ತಿರುವ ದಾದಾ: ನಾಳೆ ಆಸ್ಪತ್ರೆಯಿಂದ ಸೌರವ್​​​ ಗಂಗೂಲಿ ಡಿಸ್ಚಾರ್ಜ್  ಸದ್ಯ ಐಪಿಎಲ್​ನಲ್ಲಿ ವಿಲಿಯಮ್ಸನ್ ಪ್ರತಿನಿಧಿಸುವ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ವಿವಿಎಸ್ ಲಕ್ಷಣ್ ಕಿವೀಸ್ ನಾಯಕನ್ನು ಮನಸಾರೆ ಕೊಂಡಾಡಿದ್ದಾರೆ.


  "ಕೇನ್‌ ವಿಲಿಯಮ್ಸನ್ ಅವರ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಂಡು ಅಚ್ಚರಿ ಆಗಿಲ್ಲ. ಅವರಲ್ಲಿನ ಬದ್ಧತೆ ನಿಜಕ್ಕೂ ನಂಬಲು ಸಾಧ್ಯವಾಗದಿರುವುದು. ಯಾವುದೇ ಯುವ ಕ್ರಿಕೆಟಿಗನಾದ್ರೂ ಅನುಕರಿಸಲು ವಿಲಿಯಮ್ಸನ್​ ನಿಜವಾದ ಆದರ್ಶಪ್ರಾಯರಾಗಿದ್ದಾರೆ. ಪ್ರತಿ ಪಂದ್ಯಕ್ಕೂ ಅವರು ತಮ್ಮನ್ನು ತಾವು ಸಿದ್ಧ ಪಡಿಸಿಕೊಳ್ಳುವ ರೀತಿಯಿಂದಲೇ ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ. ಹೋಗಾಗಿ ಯುವ ಪ್ರತಿಭೆಗಳಿಗೆ ಮಾದರಿಯಾಗಿ ನಿಂತಿದ್ದಾರೆ," ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.  ಎರಡನೇ ಟೆಸ್ಟ್​ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 297 ರನ್​ಗೆ ಸರ್ವಪತನ ಕಂಡಿತು. ಪಾಕ್ ಪರ ಅಜರ್ ಅಲಿ 93, ನಾಯಕ ರಿಜ್ವಾನ್ 61 ಹಾಗೂ ಫಾಹೀಮ್ ಅಶ್ರಫ್ 48 ರನ್ ಗಳಿಸಿದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್ ಬೇಗನೆ 71 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.


  BBL 10: ಇಡೀ ಪಂದ್ಯದ ಚಿತ್ರಣ ಬದಲಿಸಿದ ಎರಡು ಅದ್ಭುತ ಕ್ಯಾಚ್​ಗಳು​..!


  ಈ ಸಮಯದಲ್ಲಿ ಒಂದಾದ ಕೇನ್ ವಿಲಿಯಮ್ಸನ್‌ ಹಾಗೂ ನಿಕೋಲಸ್‌ ಜೋಡಿ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸಿದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 369ರನ್‌ಗಳ ಜತೆಯಾಟ ಆಡಿದರು. ಎರಡನೇ ದಿನದಾಟದ ಅಂತ್ಯಕ್ಕೆ ವಿಲಿಯಮ್ಸನ್‌ 289 ಎಸೆತಗಳನ್ನು ಎದುರಿಸಿ 23 ಬೌಂಡರಿ ಸಹಿತ 179* ರನ್ ಬಾರಿಸಿ ಅಜೇಯರಾಗುಳಿದರೆ. ಇನ್ನೂ ಹೆನ್ರಿ ನಿಕೋಲಸ್ 291 ಎಸೆತಗಳನ್ನು ಎದುರಿಸಿ 18 ಬೌಂಡರಿ, 1 ಸಿಕ್ಸರ್ ಸಹಿತ 157 ರನ್‌ಗಳಿಸಿ ಔಟಾದರು.


  ಇಂದು ಮೂರನೇ ದಿನದಾಟ ಆರಂಭಿಸಿರುವ ನ್ಯೂಜಿಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಅದರಲ್ಲೂ ನಾಯಕ ಕೇನ್ ದ್ವಿಶತಕ ಸಿಡಿಸಿ 364 ಎಸೆತಗಳಲ್ಲಿ 28 ಬೌಂಡರಿಯೊಂದಿಗೆ 238 ರನ್ ಗಳಿಸಿದರು.

  Published by:Vinay Bhat
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು