IND vs NZ: ಗಾಳಿಯಲ್ಲಿ ಹಾರಿ ಲೆಫ್ಟ್​​ಹ್ಯಾಂಡ್​ನಲ್ಲಿ ಸೂಪರ್ ಮ್ಯಾನ್​ನಂತೆ ಕ್ಯಾಚ್ ಹಿಡಿದ ಜಡೇಜಾ!; ಇಲ್ಲಿದೆ ವಿಡಿಯೋ

New Zealand vs India: ಭಾರತಕ್ಕೆ ತಲೆನೋವಾಗಿದ್ದ ಈ ಜೋಡಿಯ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ರವೀಂದ್ರ ಜಡೇಜಾ. ನ್ಯೂಜಿಲೆಂಡ್ ಬ್ಯಾಟಿಂಗ್​ನ 72ನೇ ಓವರ್​​ನ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ನೈಲ್ ವ್ಯಾಗ್ನೆರ್ ಚೆಂಡನ್ನು ಪುಲ್ ಮಾಡುವಲ್ಲಿ ಎಡವಿದರು.

ರವೀಂದ್ರ ಜಡೇಜಾ.

ರವೀಂದ್ರ ಜಡೇಜಾ.

  • Share this:
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್​ ಪಂದ್ಯ ಮಹತ್ವದ ಘಟ್ಟಕ್ಕೆ ತಲುಪುತ್ತಿದೆ. ಭಾರತವನ್ನು 242 ರನ್​ಗೆ ಆಲೌಟ್ ಮಾಡಿ, ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 235 ರನ್​ಗೆ ಸರ್ವಪತನ ಕಂಡಿತು. ಭಾರತ 7 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದೆ.

ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿದ್ದ ಟೀಂ ಇಂಡಿಯಾ, ಬೌಲಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿತು. ಜೊತೆಗೆ ಫೀಲ್ಡಿಂಗ್​ನಲ್ಲೂ ಕೊಹ್ಲಿ ಪಡೆ ಕಮಾಲ್ ಮಾಡಿತು. ಅದರಲ್ಲು ವಿಶ್ವದ ಶ್ರೇಷ್ಠ ಫೀಲ್ಡರ್​ಗಳಲ್ಲಿ ಪ್ರಮುಖರಾದ ರವೀಂದ್ರ ಜಡೇಜಾ ಹಿಡಿದ ಒಂದು ಕ್ಯಾಚ್ ಎಲ್ಲರನ್ನೂ ನಿಬ್ಬೆರಗಾಗಿಸಿತು.

New Zealand vs India: ‘Superhuman’ Ravindra Jadeja takes a flying catch to dismiss Neil Wagner Day 2
ರವೀಂದ್ರ ಜಡೇಜಾ.


IND vs NZ: ಬುಮ್ರಾ ಕಮ್​ಬ್ಯಾಕ್; ಭಾರತೀಯ ಬೌಲರ್​ಗಳ ಮಾರಕ ದಾಳಿ; ನ್ಯೂಜಿಲೆಂಡ್ 8 ವಿಕೆಟ್ ಪತನ

9ನೇ ವಿಕೆಟ್​ಗೆ ಕೈಲ್ ಜೆಮಿಸನ್ ಹಾಗೂ ನೈಲ್ ವ್ಯಾಗ್ನೆರ್ ನ್ಯೂಜಿಲೆಂಡ್​ ತಂಡಕ್ಕೆ ಆಸರೆಯಾಗಿ ನಿಂತಿದ್ದರು. ಜೆಮಿಸನ್ ಬಿರುಸಿನ ಆಟದ ಮೊರೆಹೋದರೆ, ವ್ಯಾಗ್ನೆರ್ ಇವರಿಗೆ ಉತ್ತಮ ಸಾಥ್ ನೀಡುತ್ತಿದ್ದರು. ಈ ಜೋಡಿಯಿಂದ ಅರ್ಧಶತಕದ ಕಾಣಿಕೆ ಕೂಡ ಮೂಡಿಬಂತು.

ಹೀಗೆ ಭಾರತಕ್ಕೆ ತಲೆನೋವಾಗಿದ್ದ ಈ ಜೋಡಿಯ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ರವೀಂದ್ರ ಜಡೇಜಾ. ನ್ಯೂಜಿಲೆಂಡ್ ಬ್ಯಾಟಿಂಗ್​ನ 72ನೇ ಓವರ್​​ನ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ನೈಲ್ ವ್ಯಾಗ್ನೆರ್ ಚೆಂಡನ್ನು ಪುಲ್ ಮಾಡುವಲ್ಲಿ ಎಡವಿದರು. ಟಾಪ್ ಎಡ್ಜ್ ಆಗಿ, ಚೆಂಡು ಡೀಪ್ ಸ್ಕ್ವೇರ್​​ ಲೆಗ್​ನಲ್ಲಿ ಜಡೇಜಾ ಅವರ ತಲೆ ಮೇಲೆ ಗಾಳಿಯಲ್ಲಿ ಹಾರಿಬಂತು.

 2 ಸಿಕ್ಸರ್ ಬಾರಿಸಿದ ಬೆನ್ನಲ್ಲೇ ಮೈದಾನದಲ್ಲಿ ಮೃತಪಟ್ಟ ಕರ್ನಾಟಕದ ಕ್ರಿಕೆಟ್ ಆಟಗಾರ!

ಈ ಸಂದರ್ಭ ಜಡೇಜಾ ಅವರು ಎರಡು ಹೆಜ್ಜೆ ಹಿಂದೆಹೋಗಿ ಸೂಪರ್ ಮ್ಯಾನ್​ನಂತೆ ಜಿಗಿದು ಎಡ ಗೈನಲ್ಲಿ ಅದ್ಭುತ ಕ್ಯಾಚ್ ಹಿಡಿದರು. 41 ಎಸೆತಗಳಲ್ಲಿ 21 ರನ್ ಗಳಿಸಿದ್ದ ವ್ಯಾಗ್ನೆರ್ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ನ್ಯೂಜಿಲೆಂಡ್ 73.1 ಓವರ್​ನಲ್ಲಿ 235 ರನ್​ಗೆ ಆಲೌಟ್ ಆಯಿತು.

 First published: