ಹ್ಯಾಮಿಲ್ಟನ್ (ಜ. 29): ಇಲ್ಲಿನ ಸೆಡಾನ್ ಪಾರ್ಕ್ನಲ್ಲಿ ನಡೆದ ಮೂರನೇ ಟಿ-20ಯ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೂಪರ್ ಓವರ್ನಲ್ಲಿ ಅಮೋಘ ಗೆಲುವು ಸಾಧಿಸಿತು. ಈ ಮೂಲಕ ಐದು ಟಿ-20 ಸರಣಿಯಲ್ಲಿ ಭಾರತ 3-0 ಮುನ್ನಡೆ ಸಾಧಿಸಿದೆ. ಅಲ್ಲದೆ ನ್ಯೂಜಿಲೆಂಡ್ ನೆಲದಲ್ಲಿ ಭಾರತ ಚೊಚ್ಚಲ ಬಾರಿಗೆ ಟಿ-20 ಸರಣಿ ವಶಪಡಿಸಿಕೊಂಡ ಸಾಧನೆ ಮಾಡಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ಕೂಡ ನಾಯಕ ಕೇನ್ ವಿಲಿಯಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದ್ದು, ಪಂದ್ಯ ಟೈ ಆಯಿತು.
Match tied! We're going to a Super Over! 🤯 https://t.co/gwwx8JDckl
— ICC (@ICC) January 29, 2020
ಹೀಗಾಗಿ ಸೂಪರ್ ಓವರ್ ನಡೆಸಲಾಯಿತು. ಸೂಪರ್ ಓವರ್ನಲ್ಲಿ ನ್ಯೂಜಿಲೆಂಡ್ ಪರ ಮೊದಲು ಬ್ಯಾಟ್ ಮಾಡಲು ಬಂದ ಕೇನ್ ವಿಲಿಯಮ್ಸನ್(11) ಹಾಗೂ ಮಾರ್ಟಿನ್ ಗಪ್ಟಿಲ್(5) 17 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದರು.
New Zealand score 17/0 👏
Can India chase it?#NZvIND pic.twitter.com/RqCGlR3YlU
— ICC (@ICC) January 29, 2020
ಕೊನೆಯ 2 ಎಸೆತದಲ್ಲಿ ಭಾರತಕ್ಕೆ ಗೆಲ್ಲಲು 10 ರನ್ಗಳ ಅವಶ್ಯಕತೆಯಿತ್ತು. ಕ್ರೀಸ್ನಲ್ಲಿದ್ದ ಹಿಟ್ಮ್ಯಾನ್ 5ನೇ ಎಸೆತವನ್ನು ಸಿಕ್ಸ್ಗೆ ಅಟ್ಟಿದರೆ, ಕೊನೆಯ ಬಾಲ್ ಅನ್ನು ಸಿಕ್ಸ್ ಸಿಡಿಸಿ ಭಾರತಕ್ಕೆ ಗೆಲುವು ತಂದಿಟ್ಟರು. ರೋಹಿತ್ 15 ರನ್ ಗಳಿಸಿದರೆ, ರಾಹುಲ್ 5 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಟಿಮ್ ಸೌಥೀ ಬೌಲಿಂಗ್ ಮಾಡಿದ್ದರು.
IPL 2020: ಐಪಿಎಲ್ನ ಒಂದೇ ತಂಡದಲ್ಲಿ ಅಬ್ಬರಿಸಲಿದ್ದಾರೆ ಧೋನಿ-ಕೊಹ್ಲಿ-ಎಬಿಡಿ; ಎದುರಾಳಿ ರಸೆಲ್-ಪಂತ್-ಐಯರ್!
India win!
Rohit Sharma hits the final two balls for six to win the game 🤯 #NZvIND pic.twitter.com/CXFdI9chHl
— ICC (@ICC) January 29, 2020
ಈ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಪರ ಓಪನರ್ಗಳಾದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಸ್ಫೋಟಕ ಆರಂಭ ಒದಗಿಸಿದರು. ರೋಹಿತ್ ಬೌಂಡರಿ- ಸಿಕ್ಸರ್ಗಳ ಮಳೆ ಸುರಿಸಿದರೆ ರಾಹುಲ್ ಇವರಿಗೆ ಉತ್ತಮ ಸಾಥ್ ನೀಡಿದರು.
ಅತ್ಯುತ್ತಮ ಜೊತೆಯಾಟ ಆಡಿದ ಈ ಜೋಡಿ 9 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 89ಕ್ಕೆ ತಂದಿಟ್ಟಿತು. ಭಾರತ ರೋಹಿತ್ ಅವರ 65 ರನ್, ನಾಯಕ ವಿರಾಟ್ ಕೊಹ್ಲಿ ಅವರ 38 ಹಾಗೂ ಕೆ ಎಲ್ ರಾಹುಲ್ ಅವರ 27 ರನ್ಗಳ ನೆರವಿನಿಂದ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಬಾರಿಸಿತು.
— Rahul ® (@RahulSadhu009) January 29, 2020
ಬಳಿಕ ಬಂದ ಬ್ಯಾಟ್ಸ್ಮನ್ಗಳು ಕಲೆಹೊತ್ತು ಕ್ರೀಸ್ನಲ್ಲಿದ್ದು ಔಟ್ ಆದರೆ, ನಾಯಕ ಕೇನ್ ವಿಲಿಯಮ್ಸನ್ ಮಾತ್ರ ಕ್ರೀಸ್ ಕಚ್ಚಿ ಆಡಿದರು. ಕಠಿಣ ಸಂದರ್ಭದಲ್ಲಿ ನಾಯಕನ ಆಟವಾಡಿದ ಕೇನ್ ವಿಲಿಯಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಅರ್ಧಶತಕ ಸಿಡಿಸಿ ಬಿರುಸಿನ ಆಟವಾಡಿದ ವಿಲಿಯಮ್ಸನ್ ತಂಡದ ಗೆಲುವಿಗೆ ಹೋರಾಟ ನಡೆಸಿದರು.
20ನೇ ಓವರ್ನಲ್ಲಿ ನ್ಯೂಜಿಲೆಂಡ್ಗೆ ಗೆಲ್ಲಲು 9 ರನ್ಗಳ ಅವಶ್ಯಕತೆಯಿತ್ತು. ಶಮಿ ಅವರ ಮೊದಲ ಎಸೆತದಲ್ಲೇ ರಾಸ್ ಟೇಲರ್ ಚೆಂಡನ್ನು ಸಿಕ್ಸ್ಗೆ ಅಟ್ಟಿದರು. ಆದರೆ, ಕೇನ್ 3ನೇ ಎಸೆತದಲ್ಲಿ ಔಟ್ ಆಗುವ ಮೂಲಕ ಆಘಾತ ನೀಡಿದರು. ಈ ಸಂದರ್ಭ ಪಂದ್ಯ ಮತ್ತಷ್ಟು ರೋಚಕತೆ ಹುಟ್ಟಿಸಿತು.
ಕೇನ್ ಕೇವಲ 48 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಿಡಿಸಿ ಅಜೇಯ 95 ರನ್ ಚಚ್ಚಿದರು. ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ಗೆ ಗೆಲ್ಲಲು 1 ರನ್ಗಳ ಅವಶ್ಯಕತೆಯಿತ್ತು. ಆದರೆ, ರಾಸ್ ಟೇಲರ್(17) ಕ್ಲೀನ್ ಬೌಲ್ಡ್ ಆಗುವ ಮೂಲಕ ಪಂದ್ಯ ಟೈ ಆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ