NZ vs ENG: ನ್ಯೂಜಿಲೆಂಡ್ ವಿರುದ್ಧ ಟಿ-20; 241 ರನ್ ಸಿಡಿಸಿ ನಾವೇ ವಿಶ್ವ ಚಾಂಪಿಯನ್ ಎಂದ ಇಂಗ್ಲೆಂಡ್

76 ರನ್​ಗಳ ಭರ್ಜರಿ ಜಯದೊಂದಿಗೆ ಆಂಗ್ಲರು ಐದು ಪಂದ್ಯಗಳ ಟಿ-20 ಸರಣಿಯಲ್ಲಿ 2-2ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಂತಿಮ ಟಿ-20 ನ. 10 ರಂದು ಅಕ್ವಲೆಂಡ್​ನಲ್ಲಿ ನಡೆಯಲಿದೆ. ಡೇವಿಡ್ ಮೆಲನ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

Vinay Bhat | news18-kannada
Updated:November 8, 2019, 3:12 PM IST
NZ vs ENG: ನ್ಯೂಜಿಲೆಂಡ್ ವಿರುದ್ಧ ಟಿ-20; 241 ರನ್ ಸಿಡಿಸಿ ನಾವೇ ವಿಶ್ವ ಚಾಂಪಿಯನ್ ಎಂದ ಇಂಗ್ಲೆಂಡ್
ಇಯಾನ್ ಮಾರ್ಗನ್ ಹಾಗೂ ಡೇವಿಡ್ ಮಲನ್
Vinay Bhat | news18-kannada
Updated: November 8, 2019, 3:12 PM IST
ಬೆಂಗಳೂರು (ನ. 08): ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಟಿ-20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಇಂದು ನಡೆದ 4ನೇ ಪಂದ್ಯದಲ್ಲಿ ದಾಖಲೆ ಸೃಷ್ಟಿಸಿದ ಇಂಗ್ಲೆಂಡ್ ತಂಡ 76 ರನ್​ಗಳಿಂದ ಗೆದ್ದು ಬೀಗಿದೆ. ಡೇವಿಡ್ ಮಲನ್ ಆಕರ್ಷಕ ಅಜೇಯ ಶತಕ ಹಾಗೂ ನಾಯಕ ಇಯಾನ್ ಮಾರ್ಗನ್ ಅರ್ಧಶತಕದ ನೆರವಿನಿಂದ ವಿಶ್ವ ಚಾಂಪಿಯನ್ನರು ಜಯ ಸಾಧಿಸಿದ್ದು, ಸರಣಿ ಸಮಬಲ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿಲ್ಲ. ಜಾನಿ ಬೈರ್​ಸ್ಟೋ ಕೇವಲ 8 ರನ್​ಗೆ ನಿರ್ಗಮಿಸಿದರೆ, ಟಾಮ್ ಬಾಟನ್ 20 ಎಸೆತಗಳಲ್ಲಿ 31 ರನ್ ಬಾರಿಸಿ ಔಟ್ ಆದರು. ಬಳಿಕ ಶುರುವಾಗಿದ್ದು ಡೇವಿಡ್ ಮಲನ್ ಹಾಗೂ ನಾಯಕ ಇಮಾನ್ ಮಾರ್ಗನ್ ಆಟ.

 


Loading...



ರೋಹಿತ್ ಮಾಡಿರುವ ಕೆಲವು ಅಂಶ ಕೊಹ್ಲಿಯಿಂದ ಮಾಡಲು ಅಸಾಧ್ಯ ಎಂದ ಸೆಹ್ವಾಗ್!

ಸ್ಫೋಟಕ ಆಟವಾಡಿದ ಈ ಜೋಡಿ ಕಿವೀಸ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಸಿದ ಇವರಿಬ್ಬರು ಅಮೋಘ ಜೊತೆಯಾಟ ಆಡಿದರು. ವಿಕೆಟ್ ಪಡೆಯಲು ಹರಸಾಹಸ ಪಟ್ಟರು ನ್ಯೂಜಿಲೆಂಡ್ ವಿಫಲವಾಯಿತು. ಮಲನ್- ಮಾರ್ಗನ್ ಆರ್ಭಟಕ್ಕೆ ಕಿವೀಸ್ ಸುಸ್ತಾಗಿ ಹೋಯಿತು.

182 ರನ್​ಗಳ ಜೊತೆಯಾಟ ಆಡಿದ ಈ ಜೋಡಿ ಪೈಕಿ 19.4 ಓವರ್​ನಲ್ಲಿ ಮಾರ್ಗನ್ ಔಟ್ ಆದರು. ಕೇವಲ 41 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್ ಸಿಡಿಸಿದ ಮಾರ್ಗನ್ 91 ರನ್ ಚಚ್ಚಿದರು. ಇತ್ತ ಶತಕ ಸಿಡಿಸಿದ ಡೇವಿಡ್ ಮಲನ್ 51 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಬಾರಿಸಿ ಅಜೇಯ 103 ರನ್ ಗಳಿಸಿದರು. ಇಂಗ್ಲೆಂಡ್ 20 ಓವರ್​ಗೆ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 241 ರನ್ ಕಲೆಹಾಕಿತು.

ಇದು ಇಂಗ್ಲೆಂಡ್ ತಂಡ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಅಲ್ಲದೆ ಮಾರ್ಗಮ್- ಮಲನ್ 182 ರನ್​ಗಳ ಜೊತೆಯಾಟ ಇಂಗ್ಲೆಂಡ್ ತಂಡದ ಗರಿಷ್ಠ ಪಾರ್ಟ್ನರ್​​ಶಿಪ್​ ಆಗಿದೆ. ಮಲನ್ 51 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿದ್ದು, ಇಂಗ್ಲೆಂಡ್ ತಂಡದ ಆಟಗಾರನೊಬ್ಬ ಗಳಿಸಿದ ವೇಗದ ಶತಕವಾಗಿದೆ.

Rohit Sharma: 3 ಬಾಲ್​ಗೆ ಸತತ 3 ಸಿಕ್ಸ್ ಸಿಡಿಸಿದಾಗ ರೋಹಿತ್ ಹೀಗೆ ಅಂದುಕೊಂಡರಂತೆ!

 



ಇತ್ತ 242 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಸ್ಫೋಟಕ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ಬಳಿಕ ದಿಢೀರ್ ಕುಸಿತ ಕಂಡಿತು. ಓಪನರ್​ಗಳಾದ ಮಾರ್ಟಿನ್ ಗಪ್ಟಿಲ್ 14 ಎಸೆತಗಳಲ್ಲಿ 27 ರನ್ ಬಾರಿಸಿದರೆ, ಕಾಲಿನ್ ಮುನ್ರೊ 21 ಎಸೆತಗಳಲ್ಲಿ 30 ರನ್ ಗಳಿಸಿ ಔಟ್ ಆದರು.

ಬಳಿಕ ಬಂದ ಆಟಗಾರರ ಪೈಕಿ ನಾಯಕ ಟಿಮ್ ಸೌಥಿ 15 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿ 39 ರನ್ ಗಳಿಸಿದ್ದೇ ಹೆಚ್ಚಿನ. ಉಳಿದವರು ಸಂಪೂರ್ಣ ವೈಫಲ್ಯ ಅನುಭವಿಸಿದರು. ಪರಿಣಾಮ ನ್ಯೂಜಿಲೆಂಡ್ 16.5 ಓವರ್​ನಲ್ಲೇ 165 ರನ್​ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಮ್ಯಾಥ್ಯೂ ಪರ್ಕಿನ್ಸನ್ 4 ವಿಕೆಟ್ ಕಿತ್ತರೆ, ಕ್ರಿಸ್ ಜಾರ್ಡನ್ ವಿಕೆಟ್ ಪಡೆದರು.

ಟೀಂ ಇಂಡಿಯಾದಿಂದ ಆಸ್ಟ್ರೇಲಿಯಾ ವಿಶ್ವ ದಾಖಲೆ ಉಡೀಸ್ ; ಈ ವಿಚಾರದಲ್ಲಿ ಭಾರತವೇ ನಂಬರ್ ಒನ್!

76 ರನ್​ಗಳ ಭರ್ಜರಿ ಜಯದೊಂದಿಗೆ ಆಂಗ್ಲರು ಐದು ಪಂದ್ಯಗಳ ಟಿ-20 ಸರಣಿಯಲ್ಲಿ 2-2ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಂತಿಮ ಟಿ-20 ನ. 10 ರಂದು ಅಕ್ವಲೆಂಡ್​ನಲ್ಲಿ ನಡೆಯಲಿದೆ. ಡೇವಿಡ್ ಮೆಲನ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...