NZ vs ENG: ವಿಶ್ವಕಪ್ ಫೈನಲ್ ಬಳಿಕ ಮತ್ತೊಂದು ಮಹಾ ಕಾದಾಟಕ್ಕೆ ಸಜ್ಜಾದ ಇಂಗ್ಲೆಂಡ್-ನ್ಯೂಜಿಲೆಂಡ್!

ವಿಶ್ವದ ಎರಡು ಬಲಿಷ್ಠ ತಂಡಗಳ ಕಾದಾಟ ಕ್ರಿಕೆಟ್ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಲ್ಲದೆ ವಿಶ್ವಕಪ್​ ಫೈನಲ್ ಬಳಿಕ ಉಭಯ ತಂಡಗಳು ಸೆಣೆಸಾಟ ನಡೆಸುತ್ತಿರುವುದು ಮತ್ತೊಂದು ವಿಶೇಷ.

Vinay Bhat | news18-kannada
Updated:October 30, 2019, 2:35 PM IST
NZ vs ENG: ವಿಶ್ವಕಪ್ ಫೈನಲ್ ಬಳಿಕ ಮತ್ತೊಂದು ಮಹಾ ಕಾದಾಟಕ್ಕೆ ಸಜ್ಜಾದ ಇಂಗ್ಲೆಂಡ್-ನ್ಯೂಜಿಲೆಂಡ್!
ನ್ಯೂಜಿಲೆಂಡ್ vs ಇಂಗ್ಲೆಂಡ್
  • Share this:
ಬೆಂಗಳೂರು (ಅ. 30): 2019 ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಿದ ಎರಡು ತಂಡಗಳು ಈಗ ಮತ್ತೊಂದು ಮಹಾ ಕಾದಾಟಕ್ಕೆ ಸಜ್ಜಾಗಿದೆ. ವಿಶ್ವಕಪ್​​ ಫೈನಲ್​ನ ರೋಚಕ ಕದನದಲ್ಲಿ ಅಂತಿಮವಾಗಿ ಇಂಗ್ಲೆಂಡ್ ಚೊಚ್ಚಲ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿತು.

ಇದಾದ ಬಳಿಕ ಇಂಗ್ಲೆಂಡ್- ನ್ಯೂಜಿಲೆಂಡ್ ತಂಡ ಮುಖಾಮುಖಿಯಾಗಿಲ್ಲ. ಸದ್ಯ ಆಂಗ್ಲರು ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದು ಐದು ಪಂದ್ಯಗಳ ಟಿ-20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿಗೆ ಸಜ್ಜಾಗಿದೆ. ಕಿವೀಸ್ ಪಡೆ ವಿಶ್ವಕಪ್ ಫೈನಲ್​ ಸೋಲಿನ ಸೇಡು ತೀರಿಸಿಕೊಳ್ಳಲು ತಯಾರಾಗಿದೆ.

IND vs BAN: ಚೊಚ್ಚಲ ಡೇ ನೈಟ್ ಟೆಸ್ಟ್ ಎಷ್ಟು ಗಂಟೆಗೆ?; ಟಿಕೆಟ್​ ದರ ಕೇಳಿದ್ರೆ ಶಾಕ್ ಆಗ್ತೀರ!

ನವೆಂಬರ್ 1 ರಂದು ಕ್ರಿಸ್ಚ್​ಚರ್ಚ್​ನಲ್ಲಿ ಮೊದಲ ಟಿ-20 ನಡೆದರೆ, ಎರಡನೇ ಪಂದ್ಯ ನ. 3 ವೆಲ್ಲಿಂಗ್ಟನ್, ಮೂರನೇ ಪಂದ್ಯ ನ. 5 ನೆಲ್ಸನ್​ನಲ್ಲಿ, ನಾಲ್ಕನೇ ಪಂದ್ಯ ನ. 8 ರಂದು ನೇಪಿಯರ್​​ ಹಾಗೂ ಅಂತಿಮ ಪಂದ್ಯ ನ. 10 ರಂದು ಅಕ್ವಲೆಂಡ್​ನಲ್ಲಿ ಆಯೋಜಿಸಲಾಗಿದೆ.

ಇನ್ನು ಐದು ದಿನದ ಎರಡು ಪಂದ್ಯಗಳ ಟೆಸ್ಟ್​ ಸರಣಿ ಕೂಡ ನಡೆಯಲಿದೆ. ಮೊದಲ ಟೆಸ್ಟ್​ ನ. 21 ರಂದು ಮೌಂಟ್ ಮೌಂಗಾನಿಯಲ್ಲಿ ಆರಂಭವಾದರೆ, 2ನೇ ಟೆಸ್ಟ್​ ನ. 29 ರಿಂದ ಹ್ಯಾಮಿಲ್ಟನ್​ನಲ್ಲಿ ಶುರುವಾಗಲಿದೆ.

ವಿಶ್ವದ ಎರಡು ಬಲಿಷ್ಠ ತಂಡಗಳ ಕಾದಾಟ ಕ್ರಿಕೆಟ್ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಲ್ಲದೆ ವಿಶ್ವಕಪ್​ ಫೈನಲ್ ಬಳಿಕ ಉಭಯ ತಂಡಗಳು ಸೆಣೆಸಾಟ ನಡೆಸುತ್ತಿರುವುದು ಮತ್ತೊಂದು ವಿಶೇಷ.

IND vs BAN: ಭಾರತ vs ಬಾಂಗ್ಲಾದೇಶ ಮೊದಲ ಟಿ-20 ಪಂದ್ಯದಲ್ಲಿ ಮಹತ್ತರ ಬದಲಾವಣೆ..?ಆದರೆ, ಇಂಜುರಿಯಿಂದಾಗಿ ಕೇನ್ ವಿಲಿಯಮ್ಸನ್ ಟಿ-20 ಸರಣಿಯಿಂದ ಹಿಂದೆ ಸರಿದಿರುವುದು ನ್ಯೂಜಿಲೆಂಡ್ ತಂಡಕ್ಕೆ ಹಿನ್ನಡೆಯಾಗಿದೆ. ಇವರ ಬದಲು ಟಿಮ್ ಸೌಥಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ. ಇತ್ತ ಆಸ್ಟ್ರೇಲಿಯಾ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸುತ್ತಿದ್ದಾರೆ.

First published:October 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ