ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದ ನ್ಯೂಜಿಲೆಂಡ್; ಸೇಡು ತೀರಿಸಿಕೊಳ್ಳುವತ್ತ ಕಿವೀಸ್!

ಕಾಲಿನ್ ಗ್ರ್ಯಾಂಡ್​ಹೋಮ್ ಹಾಗೂ ಅನುಭವಿ ರಾಸ್ ಟೇಲರ್ ಅತ್ಯುತ್ತಮ ಜೊತೆಯಾಟ ಆಡಿದರು. ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ ಈ ಜೋಡಿ ಬಿರುಸಿನ ಆಟ ಪ್ರದರ್ಶಿಸಿತು.

Vinay Bhat | news18-kannada
Updated:November 5, 2019, 12:24 PM IST
ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದ ನ್ಯೂಜಿಲೆಂಡ್; ಸೇಡು ತೀರಿಸಿಕೊಳ್ಳುವತ್ತ ಕಿವೀಸ್!
ಸಂಭ್ರಮಿಸುತ್ತಿರುವ ನ್ಯೂಜಿಲೆಂಡ್ ತಂಡದ ಆಟಗಾರರು
  • Share this:
2019 ವಿಶ್ವಕಪ್ ವಿಜೇತ ತಂಡ ಇಂಗ್ಲೆಂಡ್ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಟಿ-20 ಸರಣಿ ಆಡುತ್ತಿದೆ. ಇಂದು ನಡೆದ ಮೂರನೇ ಟಿ-20 ಪಂದ್ಯದಲ್ಲಿ ಕಿವೀಸ್ 14 ರನ್​ಗಳ ಗೆಲುವು ಸಾಧಿಸಿದ್ದು 5 ಪಂದ್ಯಗಳ ಟಿ-20 ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ.

ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್​ಗಳ ಜಯ ಕಂಡರೆ, 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ 21 ರನ್​ಗಳಿಂದ ಗೆದ್ದು ಬೀಗಿತ್ತು. ಸದ್ಯ ಇಂದು ನಡೆದ ಮೂರನೇ ಪಂದ್ಯದಲ್ಲೂ ಜಯಿಸಿ ಆಂಗ್ಲರಿಗೆ ಶಾಕ್ ನೀಡಿದೆ. ಇನ್ನೆರಡು ಪಂದ್ಯ ಬಾಕಿ ಉಳಿದಿದ್ದು, ಒಂದು ಪಂದ್ಯ ಗೆದ್ದರೆ ಕಿವೀಸ್ ಸರಣಿ ವಶಪಡಿಸಿಕೊಳ್ಳಲಿದೆ. ಈ ಮೂಲಕ ವಿಶ್ವಕಪ್ ಸೇಡು ತೀರಿಕೊಳ್ಳಲು ಕಾಯುತ್ತಿದೆ.

 IND vs BAN: ಭಾರತ- ಬಾಂಗ್ಲಾದೇಶ 2ನೇ ಟಿ-20 ಪಂದ್ಯ ನಡೆಯುವುದು ಅನುಮಾನ!

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಾಲಿನ್ ಮುನ್ರೊ(6) ಹಾಗೂ ಟಿಮ್ ಸೈಫರ್ಟ್​(7) ಆರಂಭದಲ್ಲೇ ಪೆವಿಲಿಯನ್ ಸೇರಿಕೊಂಡರೆ, ಮಾರ್ಟಿನ ಗಪ್ಟಿಲ್ 17 ಎಸೆತಗಳಲ್ಲಿ 33 ರನ್ ಬಾರಿಸಿ ನಿರ್ಗಮಿಸಿದರು.

ನಂತರ ಕಾಲಿನ್ ಗ್ರ್ಯಾಂಡ್​ಹೋಮ್ ಹಾಗೂ ಅನುಭವಿ ರಾಸ್ ಟೇಲರ್ ಅತ್ಯುತ್ತಮ ಜೊತೆಯಾಟ ಆಡಿದರು. ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ ಈ ಜೋಡಿ ಬಿರುಸಿನ ಆಟ ಪ್ರದರ್ಶಿಸಿತು. ಗ್ರ್ಯಾಂಡ್​ಹೋಮ್ ಆಕರ್ಷಕ ಅರ್ಧಶತಕ ಸಿಡಿಸಿ 35 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಚಚ್ಚಿ 55 ರನ್ ಬಾರಿಸಿದರೆ, ಟೇಲರ್ 24 ಎಸೆತಗಳಲ್ಲಿ 27 ರನ್ ಗಳಿಸಿದರು.

ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್​ಗೆ 7 ವಿಕೆಟ್ ಕಳೆದುಕೊಂಡು 180 ರನ್ ಪೇರಿಸಿತು. ಇಂಗ್ಲೆಂಡ್ ಪರ ಟಾಮ್ ಕುರ್ರನ್ 2 ವಿಕೆಟ್ ಕಿತ್ತರೆ, ಸ್ಯಾಮ್ ಕುರ್ರನ್, ಸಖಿದ್ ಮೊಹಮ್ಮದ್, ಪ್ಯಾಟ್ರಿಕ್ ಬ್ರೌನ್ ಹಾಗೂ ಮ್ಯಾಥ್ಯೂ ಪರ್ಕನ್ಸನ್ ತಲಾ 1 ವಿಕೆಟ್ ಪಡೆದರು.

181 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ಪರ ಓಪನರ್ ಟಾಮ್ ಬಾಂಟನ್(18) ಬೇಗನೆ ಔಟ್ ಆದರು. ಆದರೆ, 2ನೇ ವಿಕೆಟ್​ಗೆ ಡೇವಿಡ್ ಮಲನ್ ಹಾಗೂ ಜೇಮ್ಸ್​ ವಿನ್ಸ್​ ಸ್ಪೋಟಕ ಆಟವಾಡಿದರು. 10 ಓವರ್ ಆಗುವ ಹೊತ್ತಿಗೆನೆ ತಂಡದ ಮೊತ್ತವನ್ನು 90ರ ಅಂಚಿಗೆ ತಂದಿಟ್ಟರು.

ಯುವತಿಯಿಂದ ಸ್ಟಾರ್ ಕ್ರಿಕೆಟಿಗನ ವಿರುದ್ಧ ವಿಡಿಯೋ ಕಾಲ್​ನಲ್ಲಿ ಹಸ್ತಮೈಥುನ ಮಾಡಿದ ಆರೋಪ!

ಮಲನ್ 34 ಎಸೆತಗಳಲ್ಲಿ 55 ರನ್ ಬಾರಿಸಿದರೆ, ವಿನ್ಸ್ 39 ಎಸೆತಗಳಲ್ಲಿ 49 ರನ್ ಕಲೆಹಾಕಿದರು. ಇವರಿಬ್ಬರು ಔಟ್ ಆಗಿದ್ದೇ ತಡ ಇಂಗ್ಲೆಂಡ್ ದಿಢೀರ್ ಕುಸಿತ ಕಂಡಿತು. ಉಳಿದ ಬ್ಯಾಟ್ಸ್​ಮನ್​ಗಳು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.

ಪರಿಣಾಮ ಇಂಗ್ಲೆಂಡ್ 20 ಓವರ್​ಗೆ 7 ವಿಕೆಟ್ ಕಳೆದುಕೊಂಡು 166 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು. ನ್ಯೂಜಿಲೆಂಡ್ ಪರ ಲೂಕಿ ಫರ್ಗಿಸನ್ ಹಾಗೂ ಬ್ಲೈರ್ ಡಿಕ್ನೆರ್ ತಲಾ 2 ವಿಕೆಟ್ ಪಡೆದರೆ, ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟನರ್ 1 ವಿಕೆಟ್ ಕಿತ್ತರು.

14 ರನ್​ಗಳ ಗೆಲುವಿನೊಂದಿಗೆ ನ್ಯೂಜಿಲೆಂಡ್ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. ಅರ್ಧಶತಕ ಸಿಡಿಸಿ ಅತ್ಯುತ್ತಮ ಆಟ ಪ್ರದರ್ಶಿಸಿದ ಕಾಲಿನ್ ಗ್ರ್ಯಾಂಡ್​ಹೋಮ್​​ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

 

First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ