ಶ್ರೀಲಂಕಾದ ಆ್ಯಂಬುಲೆನ್ಸ್‌ನಲ್ಲಿ ನ್ಯೂಜಿಲೆಂಡ್ ಆಟಗಾರರ ಪ್ರಯಾಣ..!

3ನೇ ಟೆಸ್ಟ್​ಗಾಗಿ ಅಭ್ಯಾಸ ನಡೆಸುತ್ತಿದ್ದ ಕಿವೀಸ್ ಆಟಗಾರರಿಗೆ ಸಂಕಷ್ಟ ಎದುರಾಗಿತ್ತು. ಹೊಟೇಲ್​ನಿಂದ ದೂರದಲ್ಲಿದ್ದ ಕ್ರೀಡಾಂಗಣದಲ್ಲಿ ಕೇನ್ ವಿಲಿಯಮ್ಸನ್ ಪಡೆ ಅಭ್ಯಾಸದಲ್ಲಿ ನಿರತರಾಗಿದ್ದರು.

New Zealand

New Zealand

  • Share this:
ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಸದ್ಯ ಶ್ರೀಲಂಕಾ ಪ್ರವಾಸದಲ್ಲಿದ್ದು, ಈಗಾಗಲೇ ಉಭಯ ತಂಡಗಳು 2 ಎರಡು ಟೆಸ್ಟ್​ ಪಂದ್ಯಗಳನ್ನಾಡಿದೆ. ಮೊದಲ ಪಂದ್ಯದಲ್ಲಿ ಲಂಕಾ ತಂಡ ಗೆದ್ದರೆ, 2ನೇ ಟೆಸ್ಟ್​ನಲ್ಲಿ ನ್ಯೂಜಿಲೆಂಡ್ ಗೆಲುವು ದಾಖಲಿಸುವ ಮೂಲಕ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಸಮಬಲ ಸಾಧಿಸಿದೆ.

ಇದೇ ಖುಷಿಯಲ್ಲಿ 3ನೇ ಟೆಸ್ಟ್​ಗಾಗಿ ಅಭ್ಯಾಸ ನಡೆಸುತ್ತಿದ್ದ ಕಿವೀಸ್ ಆಟಗಾರರಿಗೆ ಸಂಕಷ್ಟ ಎದುರಾಗಿತ್ತು. ಹೊಟೇಲ್​ನಿಂದ ದೂರದಲ್ಲಿದ್ದ ಕ್ರೀಡಾಂಗಣದಲ್ಲಿ ಕೇನ್ ವಿಲಿಯಮ್ಸನ್ ಪಡೆ ಅಭ್ಯಾಸದಲ್ಲಿ ನಿರತರಾಗಿದ್ದರು. ಆ ಬಳಿಕ ಹೋಟೆಲ್​ಗೆ ಕಡೆ ಹೊರಟಿದ್ದ ತಂಡ ಅಕ್ಷರಶಃ ದಂಗಾಗಿದ್ದರು.

ಏಕೆಂದರೆ ಮಾರ್ಗ ಮಧ್ಯೆ ಇದಕ್ಕಿದ್ದಂತೆ ನ್ಯೂಜಿಲೆಂಡ್ ಆಟಗಾರರಿದ್ದ ಬಸ್ ಕೆಟ್ಟು ನಿಂತಿತು. ಅದು ಕೂಡ ಗುಡ್ಡ ಪ್ರದೇಶದ ಭಾಗದಲ್ಲಿ. ಕೆಲ ಹೊತ್ತಿನವರೆಗೂ ಪರ್ಯಾಯ ವಾಹನ ಸಿಗದೆ ಪರದಾಡಿದ್ದ ಆಟಗಾರರು ಆತಂಕಕ್ಕೀಡಾದರು. ಆ ಬಳಿಕ ಸ್ಥಳಕ್ಕೆ ಆಗಮಿಸಿದ ಆರ್ಮಿ ವಾಹನ ಹಾಗೂ ಮಿನಿ ಬಸ್​ಗಳಲ್ಲಿ ಕೆಲ ಆಟಗಾರರು ತೆರಳಿದರು.

ಇನ್ನು ಕೆಲವು ಆಟಗಾರರು ಅದೇ ಮಾರ್ಗದಲ್ಲಿ ಬಂದ ಆ್ಯಂಬುಲೆನ್ಸ್​ ಏರಬೇಕಾಯಿತು. ಹೀಗೆ ಆ್ಯಂಬುಲೆನ್ಸ್​ನಲ್ಲಿ ಹೋಟೆಲ್​ಗೆ ಪ್ರಯಾಣಿಸುವ ಆಟಗಾರರ ಈ ವಿಡಿಯೋವನ್ನು ನ್ಯೂಜಿಲೆಂಡ್​ ತಂಡದ  ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

First published: