ಭಾರತದ ಬೌಲರುಗಳ ಪರಾಕ್ರಮ: ತಮ್ಮ ಹೀನಾಯ ದಾಖಲೆಯನ್ನು ನ್ಯೂಜಿಲೆಂಡ್​ ಮೇಲೇರಿದ ಟೀಂ ಇಂಡಿಯಾ

India Vs New Zealand Semi final : ಇದಕ್ಕೂ ಮುನ್ನ ಇಂತಹದೊಂದು ಕಳಪೆ ದಾಖಲೆಯನ್ನು ನಿರ್ಮಿಸಿದ್ದು ಭಾರತ ತಂಡವಾಗಿತ್ತು. ಇಂಗ್ಲೆಡ್ ವಿರುದ್ಧದ ಪಂದ್ಯದಲ್ಲಿ ಬ್ಲೂ ಬಾಯ್ಸ್​ ಮೊದಲ ಹತ್ತು ಓವರುಗಳಲ್ಲಿ 1 ವಿಕೆಟ್ ನಷ್ಟಕ್ಕೆ 28 ರನ್​ಗಳಿಸಿದ್ದರು. ಇದುವೇ ವಿಶ್ವಕಪ್​ನಲ್ಲಿ ಪವರ್ ​ಪ್ಲೇನಲ್ಲಿ ಗಳಿಸಿದ ಅತೀ ಕಡಿಮೆ ಮೊತ್ತವಾಗಿತ್ತು.

zahir | news18
Updated:July 10, 2019, 2:45 PM IST
ಭಾರತದ ಬೌಲರುಗಳ ಪರಾಕ್ರಮ: ತಮ್ಮ ಹೀನಾಯ ದಾಖಲೆಯನ್ನು ನ್ಯೂಜಿಲೆಂಡ್​ ಮೇಲೇರಿದ ಟೀಂ ಇಂಡಿಯಾ
India Vs New Zealand
  • News18
  • Last Updated: July 10, 2019, 2:45 PM IST
  • Share this:
ವಿಶ್ವಕಪ್​ನ ಮೊದಲ ಸೆಮಿಫೈನಲ್​ನಲ್ಲಿ ಭಾರತೀಯ ಬೌಲರುಗಳ ಮಾರಕ ದಾಳಿ ಮುಂದೆ ನ್ಯೂಜಿಲೆಂಡ್​ ಬ್ಯಾಟ್ಸ್​ಮನ್​ಗಳು ರನ್​ಗಾಗಿ ಪರದಾಡಿದ್ದರು. ನಾಲ್ಕನೇ ಓವರ್​ನಲ್ಲೇ ಜಸ್​ಪ್ರೀತ್ ಬುಮ್ರಾ ಮಾರ್ಟಿನ್ ಗಪ್ಟಿಲ್​ರನ್ನು ಪೆವಿಲಿಯನ್​​ಗಟ್ಟುವ ಮೂಲಕ ಟೀಂ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇವೆಲ್ಲಕ್ಕಿಂತ ಮುಖ್ಯವಾಗಿ ನ್ಯೂಜಿಲೆಂಡ್ ಮೊದಲ ರನ್​ಗಳಿಸಲು ತೆಗೆದುಕೊಂಡಿದ್ದು ಬರೋಬ್ಬರಿ 17 ಎಸೆತಗಳನ್ನು. ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್​ ಸಂಘಟಿಸಿದ ಮೊದಲ ಓವರುಗಳ ದಾಳಿಗೆ ಹೇಗಿತ್ತು ಎಂಬುದಕ್ಕೆ ಇದುವೇ ಸಾಕ್ಷಿ.

ಭಾರತೀಯ ವೇಗಿಗಳ ಮುಂದೆ ರನ್ ಕದಿಯಲು ಹೆದರಿದ​ ಕೇನ್​ ವಿಲಿಯಮ್ಸನ್ ಹಾಗೂ ನಿಕೋಲ್ಸ್  ಮೊದಲ ಪವರ್​ ಪ್ಲೇನಲ್ಲಿ ಗಳಿಸಿದ್ದು ಬರೀ 27 ರನ್​ ಮಾತ್ರ. ಮೊದಲ 10 ಓವರ್​ನಲ್ಲಿ 1 ವಿಕೆಟ್​ ನಷ್ಟಕ್ಕೆ 27 ರನ್​ಗಳಿಸಿದ ಕಿವೀಸ್ ಬ್ಯಾಟ್ಸ್​ಮನ್​ಗಳು ಈ ಮೂಲಕ ವಿಶ್ವಕಪ್​ ಹೀನಾಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ವರ್ಲ್ಡ್​​ಕಪ್​ ಕ್ರಿಕೆಟ್​ನಲ್ಲಿ ಪವರ್​ ಪ್ಲೇನಲ್ಲಿ ಮೂಡಿ ಬಂದಿರುವ ಅತೀ ಕಡಿಮೆ ಮೊತ್ತದ ಕಳಪೆ ದಾಖಲೆ ಈಗ ನ್ಯೂಜಿಲೆಂಡ್ ತಂಡದ ಹೆಸರಿಗೆ ಸೇರ್ಪಡೆಯಾಗಿದೆ.

ಇದಕ್ಕೂ ಮುನ್ನ ಇಂತಹದೊಂದು ಕಳಪೆ ದಾಖಲೆಯನ್ನು ನಿರ್ಮಿಸಿದ್ದು ಭಾರತ ತಂಡವಾಗಿತ್ತು. ಇಂಗ್ಲೆಡ್ ವಿರುದ್ಧದ ಪಂದ್ಯದಲ್ಲಿ ಬ್ಲೂ ಬಾಯ್ಸ್​ ಮೊದಲ ಹತ್ತು ಓವರುಗಳಲ್ಲಿ 1 ವಿಕೆಟ್ ನಷ್ಟಕ್ಕೆ 28 ರನ್​ಗಳಿಸಿದ್ದರು. ಇದುವೇ ವಿಶ್ವಕಪ್​ನಲ್ಲಿ ಪವರ್ ​ಪ್ಲೇನಲ್ಲಿ ಗಳಿಸಿದ ಅತೀ ಕಡಿಮೆ ಮೊತ್ತವಾಗಿತ್ತು.

ಈ ಹೀನಾಯ ದಾಖಲೆಯನ್ನು ವಿಶ್ವಕಪ್​ ಅಭಿಯಾನವನ್ನು ಕೊನೆಗೊಳಿಸುವ ಮುನ್ನವೇ ಟೀಂ ಇಂಡಿಯಾ ಬೇರೊಂದು ತಂಡದ ಮೇಲೇರುವಲ್ಲಿ ಯಶಸ್ವಿಯಾಗಿದೆ. ಸೆಮಿ ಫೈನಲ್​ನಲ್ಲಿ ನ್ಯೂಜಿಲೆಂಡ್​ ಬ್ಯಾಟ್ಸ್​ಮನ್​ಗಳು 60 ಎಸೆತಗಳಲ್ಲಿ 43 ಡಾಟ್​ ಬಾಲ್ ಆಡಿದ್ದರು. ಈ ಮೂಲಕ ಬುಮ್ರಾ ಮತ್ತು ಭುವನೇಶ್ವರ ಮತ್ತು ಹಾರ್ದಿಕ್ ಪಾಂಡ್ಯ ಕಳಪೆ ದಾಖಲೆಯಲ್ಲಿ ಕಿವೀಸ್​ಗೆ​ ಅಗ್ರಸ್ಥಾನ ಒದಗಿಸುವಲ್ಲಿ ಯಶಸ್ವಿಯಾದರು.

ಇನ್ನು ವಿಶ್ವಕಪ್‌ ಆವೃತ್ತಿಯ ಇತರೆ ಕಡಿಮೆ ಪವರ್‌ಪ್ಲೇ ಸ್ಕೋರ್‌ಗಳು ಇಂತಿವೆ:
ವೆಸ್ಟ್ ಇಂಡೀಸ್ - 29/2 ( vs ಭಾರತ)
ನ್ಯೂಜಿಲೆಂಡ್ - 30/2 ( vs ವೆಸ್ಟ್​ ಇಂಡೀಸ್)ನ್ಯೂಜಿಲೆಂಡ್ - 31/1 ( vs ಆಸ್ಟ್ರೇಲಿಯಾ)
ವೆಸ್ಟ್ ಇಂಡೀಸ್ - 32/1 ( vs ಬಾಂಗ್ಲಾದೇಶ)
ಭಾರತ - 34/1 ( vs ದಕ್ಷಿಣ ಆಫ್ರಿಕಾ)
ದಕ್ಷಿಣ ಆಫ್ರಿಕಾ - 34/2 ( vs ಭಾರತ).
First published: July 10, 2019, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading