ನೂತನ ಕ್ರಿಕೆಟ್ ಶಾಟ್​ಗೆ ಏನೆಂದು ಹೆಸರಿಡಬಹುದು?- ವಿಡಿಯೋ ವೈರಲ್

Viral Video; ಒಟಾಗೊ ತಂಡದ ಬ್ಯಾಟ್ಸ್​ಮನ್ ಆಗಿರುವ ಬ್ರೂಮ್, ವೆಲ್ಲಿಂಗ್ಟನ್ ವಿರುದ್ದದ ಪಂದ್ಯದಲ್ಲಿ ಡಿಫೆರೆಂಟ್ ಆಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ಗಮನ ಸೆಳೆದಿದ್ದಾರೆ.

zahir | news18-kannada
Updated:December 2, 2019, 2:23 PM IST
ನೂತನ ಕ್ರಿಕೆಟ್ ಶಾಟ್​ಗೆ ಏನೆಂದು ಹೆಸರಿಡಬಹುದು?- ವಿಡಿಯೋ ವೈರಲ್
ನೀಲ್ ಬ್ರೂಮ್
  • Share this:
ಟ್ವೆಂಟಿ-20 ಕ್ರಿಕೆಟ್ ಅವಿಷ್ಕಾರವಾದ ಬಳಿಕ ಅನೇಕ ರೀತಿಯ ಶಾಟ್​ಗಳ ಪ್ರಯೋಗ ಆಗುತ್ತಲೇ ಇರುತ್ತದೆ. ಕ್ರಿಕೆಟಿಂಗ್ ಶಾಟ್‌ಗಳ ಉಗಮವಾಗಿದೆ. ಇವುಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸ್ಟ್ರೇಟ್ ಡ್ರೈವ್, ತಿಲಕರತ್ನೆ ಡಿಲ್ಶಾನ್​ರ ದಿಲ್ ಸ್ಕೂಪ್, ವೀರೇಂದ್ರ ಸೆಹ್ವಾಗ್ ಅಪ್ಪರ್ ಕಟ್, ಕೆವಿನ್ ಪೀಟರ್ಸನ್ ಸ್ವಿಚ್ ಹಿಟ್, ಧೋನಿಯ ಹೆಲಿಕಾಪ್ಟರ್ ಶಾಟ್ ಹೀಗೆ ದೊಡ್ಡ ಪಟ್ಟಿಯನ್ನೇ ಮಾಡಬಹುದು.

ಇದಕ್ಕೀಗ ಹೊಸತೊಂದು ಶಾಟ್ ಸೇರ್ಪಡೆಯಾಗಿದೆ. ನ್ಯೂಜಿಲೆಂಡ್​ನ ಪ್ರತಿಷ್ಠಿತ ಫೋರ್ಡ್​ ಟ್ರೋಫಿ ಟೂರ್ನಿ ವೇಳೆ ನೀಲ್ ಬ್ರೂಮ್ ಬಾರಿಸಿದ ಹೊಡೆತ ಇದೀಗ ಭಾರೀ ವೈರಲ್ ಆಗಿದೆ.

ಒಟಾಗೊ ತಂಡದ ಬ್ಯಾಟ್ಸ್​ಮನ್ ಆಗಿರುವ ಬ್ರೂಮ್, ವೆಲ್ಲಿಂಗ್ಟನ್ ವಿರುದ್ದದ ಪಂದ್ಯದಲ್ಲಿ ಡಿಫೆರೆಂಟ್ ಆಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ಗಮನ ಸೆಳೆದಿದ್ದಾರೆ. ಅತ್ತ ಸ್ಕೂಪ್ ಎನ್ನಲಾಗದ, ಇತ್ತ ಅಪ್ಪರ್ ಕಟ್ ಎಂದು ಹೇಳಲಾಗದ ಹೊಸ ಶಾಟ್ ಇದೀಗ ಕ್ರಿಕೆಟ್​ ಲೋಕದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: Viral Video: ಹಾಡು ಮರೆತು ಇಂಗ್ಲಿಷ್ ಮಾತಾಡಿ ಮತ್ತೆ ಟ್ರೋಲ್ ಆದ ರಾನು ಮಂಡಲ್

ಈ ವಿಡಿಯೋವನ್ನು ಒಟಾಗೊ ಕ್ರಿಕೆಟ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇಂತಹದೊಂದು ಶಾಟ್ ಈ ಹಿಂದೆ ನೀವು ಎಲ್ಲಾದರೂ ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೊಂದಿಗೆ ಆದರೆ ಈ ಶಾಟ್‌ಗೆ ಏನೆಂದು ಹೆಸರಿಡುವುದು ಎಂಬ ಚರ್ಚೆ ಕೂಡ ಕ್ರಿಕೆಟ್​ ಪ್ರೇಮಿಗಳಲ್ಲಿ ಶುರುವಾಗಿದೆ.

First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading