• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್ ಸರಣಿ: ಹೊಸ ವೇಳಾಪಟ್ಟಿ ಪ್ರಕಟ; ಡಿ. 26ರಿಂದ ಮೊದಲ ಟೆಸ್ಟ್

ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್ ಸರಣಿ: ಹೊಸ ವೇಳಾಪಟ್ಟಿ ಪ್ರಕಟ; ಡಿ. 26ರಿಂದ ಮೊದಲ ಟೆಸ್ಟ್

ಭಾರತ ಸೌತ್ ಆಫ್ರಿಕಾ ಕ್ರಿಕೆಟ್ ಪಂದ್ಯ

ಭಾರತ ಸೌತ್ ಆಫ್ರಿಕಾ ಕ್ರಿಕೆಟ್ ಪಂದ್ಯ

South Africa-India Cricket Series: ಸೌತ್ ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ಸರಣಿಯ ಪರಿಷ್ಕೃತ ವೇಳಾಪಟ್ಟಿಯನ್ನ ಪ್ರಕಟಿಸಲಾಗಿದೆ. ಅದರಂತೆ ಡಿ. 26ರಂದು ಆರಂಭವಾಗಿ ಜ. 23ರವರೆಗೆ 3 ಟೆಸ್ಟ್ ಮತ್ತು 3 ಓಡಿಐ ಪಂದ್ಯಗಳು ನಡೆಯಲಿವೆ.

  • Cricketnext
  • 3-MIN READ
  • Last Updated :
  • Share this:

ನವದೆಹಲಿ, ಡಿ. 6: ದಕ್ಷಿಣ ಆಫ್ರಿಕಾದಲ್ಲಿ ಭಾರತದ ಕ್ರಿಕೆಟ್ ಪ್ರವಾಸ ಡಿ. 26ರಂದು ಆರಂಭವಾಗಲಿದೆ. ಕ್ರಿಕೆಟ್ ಸೌತ್ ಆಫ್ರಿಕಾ ಸಂಸ್ಥೆ ಇಂದು ಸೋಮವಾರ ಹೊಸ ವೇಳಾಪಟ್ಟಿ ಪ್ರಕಟಿಸಿದೆ. ಡಿ. 17ರಂದು ಆರಂಭವಾಗಬೇಕಿದ್ದ ಕ್ರಿಕೆಟ್ ಸರಣಿಯನ್ನ ಓಮೈಕ್ರಾನ್ ವೈರಸ್ ಕಾರಣಕ್ಕೆ ಒಂದು ವಾರ ಮುಂದಕ್ಕೆ ಹಾಕಲಾಗಿದೆ. ಡಿ. 26ರಂದು ಆರಂಭಗೊಂಡು ಜನವರಿ 23ರವರೆಗೆ ಸರಣಿ ನಡೆಯಲಿದೆ. ಈ ವೇಳೆ, ಮೂರು ಟೆಸ್ಟ್ ಹಾಗು ಮೂರು ಏಕದಿನ ಪಂದ್ಯಗಳ ಸರಣಿಗಳು ನಡೆಯಲಿವೆ. ಈ ಪಂದ್ಯಗಳ ವೇಳಾಪಟ್ಟಿ ಮತ್ತು ಸ್ಥಳಗಳನ್ನ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.


ಈ ಮುಂಚೆ ಕ್ರಿಕೆಟ್ ಪ್ರವಾಸದಲ್ಲಿ ನಿಗದಿ ಮಾಡಲಾಗಿದ್ದ ಟಿ20 ಸರಣಿಯನ್ನ ಕೋವಿಡ್ ಕಾರಣಕ್ಕೆ ಕೈಬಿಡಲಾಗಿದೆ. ಆದರೆ, ನಾಲ್ಕು ಪಂದ್ಯಗಳ ಟಿ20 ಸರಣಿ ರದ್ದಾಗಿಲ್ಲ, ಬದಲಾಗಿ ಮುಂದೂಡಿಕೆ ಆಗಿದೆ. ಮುಂದಿನ ವರ್ಷ ಸೂಕ್ತ ಸಮಯ ನೋಡಿ ಟಿ20 ಸರಣಿಯನ್ನ ಆಡಿಸಲಾಗುವುದು ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.


ಸೆಂಚೂರಿಯನ್, ಜೋಹಾನ್ಸ್​ಬರ್ಗ್, ಕೇಪ್​ಟೌನ್ ಮತ್ತು ಪಾರ್ಲ್ ನಗರಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳ ಪಂದ್ಯಗಳು ನಡೆಯಲಿವೆ. ಕೇಪ್​ಟೌನ್​ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಒಂದು ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳು ನಿಗದಿಯಾಗಿವೆ. ಪಾರ್ಲ್ ನಗರದ ಬೋಲ್ಯಾಂಡ್ ಪಾರ್ಕ್ ಸ್ಟೇಡಿಯಂನಲ್ಲಿ ಎರಡು ಏಕದಿನ ಪಂದ್ಯಗಳು ನಡೆಯಲಿವೆ.


ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಮತ್ತು ವಿಶ್ವಕಪ್:


ಈಗ ನಡೆಯುವ ಪ್ರತಿಯೊಂದು ಪಂದ್ಯವೂ ಬಹಳ ಮಹತ್ವದ್ದಾಗಿದೆ. ಪ್ರತಿಯೊಂದು ಟೆಸ್ಟ್ ಪಂದ್ಯದ ಫಲಿತಾಂಶವೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಅಂಕಪಟ್ಟಿಗೆ ಮುಖ್ಯವಾಗುತ್ತದೆ. ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಭಾರತ ಈಗ ವಿಶ್ವದ ನಂಬರ್ ಟೆಸ್ಟ್ ತಂಡದ ಪಟ್ಟವನ್ನು ಮತ್ತೆ ಪಡೆದಿದೆ. ಹಾಗೆಯೇ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 42 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈಗ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದರೆ ಅಂಕಪಟ್ಟಿಯಲ್ಲಿ ಮೇಲೇರುವ ಸಾಧ್ಯತೆ ಇದೆ.


ಇದನ್ನೂ ಓದಿ: Abu Dhabi T10: ಗ್ಲೇಡಿಯೇಟರ್ಸ್ ಚಾಂಪಿಯನ್- ಟೂರ್ನಿಯಲ್ಲಿ ಹೆಚ್ಚು ರನ್, ವಿಕೆಟ್ ಗಳಿಸಿದವರ ಪಟ್ಟಿ


ಇನ್ನು, ಏಕದಿನ ಕ್ರಿಕೆಟ್ ಸರಣಿಯೂ ಮಹತ್ವದ್ದಾಗಿದೆ. ಇದು ಐಸಿಸಿ ವರ್ಲ್ಡ್ ಕಪ್ ಸೂಪರ್ ಲೀಗ್​ನ ಭಾಗವಾಗಿದೆ. 2023ರ ವಿಶ್ವಕಪ್​ಗೆ ಈ ಸೂಪರ್ ಲೀಗ್ ಕ್ವಾಲಿಫಯರ್ ಆಗಿದೆ.


ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ಸರಣಿ ವೇಳಾಪಟ್ಟಿ:


ಟೆಸ್ಟ್ ಸರಣಿ:
1) ಡಿ. 26-30: ಸೂಪರ್ ಸ್ಪೋರ್ಟ್ ಪಾರ್ಕ್, ಸೆಂಚೂರಿಯನ್
2) ಜ. 3-7: ವಾಂಡರರ್ಸ್, ಜೋಹಾನ್ಸ್​ಬರ್ಗ್
3) ಜ. 11-15: ನ್ಯೂಲ್ಯಾಂಡ್ಸ್, ಕೇಪ್ ಟೌನ್


ಏಕದಿನ ಸರಣಿ:
1) ಜ. 19: ಬೋಲ್ಯಾಂಡ್ ಪಾರ್ಕ್, ಪಾರ್ಲ್
2) ಜ. 21: ಬೋಲ್ಯಾಂಡ್ ಪಾರ್ಕ್, ಪಾರ್ಲ್
3) ಜ. 23: ನ್ಯೂಲೆಂಡ್ಸ್, ಕೇಪ್ ಟೌನ್


ಇದನ್ನೂ ಓದಿ: Interesting Facts- ಮೂರು ಮಾದರಿ ಕ್ರಿಕೆಟ್​ನಲ್ಲಿ 50 ಗೆಲುವು ಕಂಡ ವಿಶ್ವದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ


ಟೀಮ್ ಇಂಡಿಯಾ ಶೀಘ್ರದಲ್ಲೇ ಪ್ರಕಟ:


ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಇನ್ನೂ ಪ್ರಕಟ ಆಗಿಲ್ಲ. ಈ ವಾರ ಪ್ರಕಟವಾಗುವ ನಿರೀಕ್ಷೆ ಇದೆ. ಬಹಳಷ್ಟು ಪ್ರತಿಭಾನ್ವಿತ ಆಟಗಾರರು ತಂಡದ ಬಾಗಿಲು ಬಡಿಯುತ್ತಿರುವುದು ಆಯ್ಕೆಗಾರರಿಗೆ ತಲೆಬಿಸಿ ತಂದಿದೆ. ನ್ಯೂಜಿಲೆಂಡ್ ವಿರುದ್ಧ ಮಯಂಕ್ ಅಗರ್ವಾಲ್, ಶುಬ್ಮನ್ ಗಿಲ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ಮೊಹಮ್ಮದ್ ಸಿರಾಜ್ ಗಾಢ ಛಾಪು ಮೂಡಿಸಿದ್ದಾರೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅನುಪಸ್ಥಿತಿ ಕಾಡದ ರೀತಿಯಲ್ಲಿ ಶುಬ್ಮನ್ ಗಿಲ್ ಮತ್ತು ಮಯಂಕ್ ಅಗರ್ವಾಲ್ ಬ್ಯಾಟ್ ಮಾಡಿದ್ಧಾರೆ. ಯಾರನ್ನ ಕೈಬಿಡಬೇಕು, ಯಾರನ್ನ ಆಯ್ಕೆ ಮಾಡಬೇಕು ಎಂದು ನಿರ್ಧರಿಸುವುದು ಸವಾಲಿನ ಕೆಲಸವೇ ಸರಿ.


ಅಲ್ಲದೇ, ಭಾರತ ಎ ತಂಡ ಬಹುತೇಕ ಸೌತ್ ಆಫ್ರಿಕಾ ಪ್ರವಾಸದ ಅಂಚಿನಲ್ಲಿದೆ. ಅಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಟೀಮ್ ಇಂಡಿಯಾದ ಬಾಗಿಲು ತೆರೆಯುವ ಸಾಧ್ಯತೆ ಉಂಟು.


ಇದನ್ನೂ ಓದಿ: ಡಿಫರೆಂಟ್ ಆಗಿ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ಡೇವಿಡ್ ವಾರ್ನರ್: ವಿಡಿಯೋ ನೋಡಿ


ಏಕದಿನ ತಂಡಕ್ಕೆ ರೋಹಿತ್ ಕ್ಯಾಪ್ಟನ್?


ಟಿ20 ಕ್ರಿಕೆಟ್ ತಂಡದ ಕ್ಯಾಪ್ಟನ್ಸಿಯನ್ನ ತ್ಯಜಿಸಿದ್ದ ವಿರಾಟ್ ಕೊಹ್ಲಿ ಅವರಿಂದ ಏಕದಿನ ಕ್ರಿಕೆಟ್ ತಂಡದ ನಾಯಕತ್ವವನ್ನೂ ಕಸಿದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಏಕದಿನ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾ ಅವರನ್ನಾ ನಾಯಕರನ್ನಾಗಿ ಮಾಡುವ ನಿರೀಕ್ಷೆ ಇದೆ. ಟಿ20 ಮತ್ತು ಓಡಿಐ ಎರಡಕ್ಕೂ ಒಬ್ಬರೇ ನಾಯಕರಾಗುವುದು ಸಮಂಜಸ ಎಂಬ ಅಭಿಪ್ರಾಯ ದಟ್ಟವಾಗಿದೆ. ಹೀಗಾಗಿ, ರೋಹಿತ್ ಅವರಿಗೆ ಚುಟುಕು ಮಾದರಿ ಕ್ರಿಕೆಟ್ ತಂಡಗಳ ನಾಯಕತ್ವ ವಹಿಸಬಹುದು.


ಇನ್ನು, ಟೆಸ್ಟ್ ತಂಡಕ್ಕೆ ಮಾತ್ರ ವಿರಾಟ್ ಕೊಹ್ಲಿ ನಾಯಕರಾಗಿ ಮುಂದುವರಿಯುತ್ತಾರೆ. ಟಿ20 ಮತ್ತು ಏಕದಿನ ತಂಡಗಳಲ್ಲಿ ಅವರು ಆಟಗಾರನಾಗಿ ಮಾತ್ರ ಆಡಲಿದ್ಧಾರೆ.

top videos
    First published: