HOME » NEWS » Sports » CRICKET NEW DECADE NEW RCB NEW LOGO ROYAL CHALLENGERS BENGALURU IPL FRANCHISE GOES RED AND BOLD VB

RCB: ಬೆಂಗಳೂರು ಸೇರಿಸಿ ಹೊಚ್ಚ ಹೊಸ ಲೋಗೋ ಬಿಡುಗಡೆ ಮಾಡಿದ ಆರ್​ಸಿಬಿ; ಹೇಗಿದೆ ಗೊತ್ತಾ..?

RCB New Logo: ಅಭಿಮಾನಿಗಳ ಆಸೆ ಆರ್​ಸಿಬಿ ಈಡೇರಿಸಿದೆ. ಬೆಂಗಳೂರು ಎಂಬ ಪದವನ್ನು ಆರ್​ಸಿಬಿ ತನ್ನ ಲೋಗೋದಲ್ಲಿ ಮತ್ತೆ ಸೇರಿಸಿದ್ದು’ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ನೂತನ ನಾಮಕರಣ ಮಾಡಿದೆ.

Vinay Bhat | news18-kannada
Updated:February 14, 2020, 9:56 AM IST
RCB: ಬೆಂಗಳೂರು ಸೇರಿಸಿ ಹೊಚ್ಚ ಹೊಸ ಲೋಗೋ ಬಿಡುಗಡೆ ಮಾಡಿದ ಆರ್​ಸಿಬಿ; ಹೇಗಿದೆ ಗೊತ್ತಾ..?
ಇದೀಗ ಶ್ರೀಲಂಕಾ ಕ್ರಿಕೆಟ್ ಖುದ್ದು ಆಫರ್ ನೀಡಿರುವುದರಿಂದ ಐಪಿಎಲ್​ ಲಂಕಾಗೆ ಶಿಫ್ಟ್ ಆದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ 2009 ರಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಇಂಡಿಯನ್ ಪ್ರೀಮಿಯರ್ ಲೀಗ್​ನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು.
  • Share this:
ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಕಳೆದ ಎರಡು ದಿನಗಳಿಂದ ಭಾರೀ ಸುದ್ದಿಯಲ್ಲಿತ್ತು. ತನ್ನ ಅಧಿಕೃತ ಟ್ವಿಟ್ಟರ್, ಫೇಸ್​ಬುಕ್​, ಇನ್​ಸ್ಟಾಗ್ರಾಂ ಹಾಗೂ ಯೂ ಟ್ಯೂಬ್ ಖಾತೆಯಲ್ಲಿನ ಪ್ರೊಫೈಲ್ ಫೋಟೋ ತೆಗೆದು ಸಾಕಷ್ಟು ಕುತೂಹಲ ಕೆರಳಿಸಿತ್ತು.

ಸದ್ಯ ಆರ್​ಸಿಬಿ ಹೊಸ ಲೋಗೋ, ನೂತನ ಫ್ಲಾಗ್​ನೊಂದಿಗೆ ಕಮ್​ಬ್ಯಾಕ್ ಮಾಡಿದೆ. ಈ ಮೂಲಕ ಈ  ಬಾರಿಯ ಐಪಿಎಲ್​ನಲ್ಲಿ ಹೊಸ ಪುರುಪಿನೊಂದಿಗೆ ಕಣಕ್ಕಿಳಿದು ಕಪ್​ ಗೆದ್ದೇ ಗೆಲ್ಲಿತ್ತೇವೆ ಎಂಬ ಭರವಸೆ ನೀಡಿದೆ.

RCB unveils new logo ahead of IPL 2020
ರಾಯಲ್ ಚಾಲೆಂಜರ್ಸ್​ ಬೆಂಗಲೂರು ತಂಡದ ಹೊಸ ಲೋಗೋ.


U19 World Cup: ತನಗೆ ಸಿಕ್ಕಿ ಸರಣಿ ಶ್ರೇಷ್ಠ ಟ್ರೋಫಿಯನ್ನೇ ಮುರಿದು ಹಾಕಿದ ಜೈಸ್ವಾಲ್; ಯಾಕೆ ಗೊತ್ತಾ?

ಈ ಹಿಂದೆ ಆರ್​ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು ಎಂಬ ಹೆಸರನ್ನು ಕಿತ್ತುಹಾಕಿ ಕೇವಲ ರಾಯಲ್ ಚಾಲೆಂಜರ್ಸ್​ ಎಂದು ಬರೆದುಕೊಂಡಿತ್ತು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಆರ್​ಸಿಬಿ ವಿರುದ್ಧ ಕಿಡಿ ಕಾರಿದ್ದರು.

ಸದ್ಯ ಅಭಿಮಾನಿಗಳ ಆಸೆಯನ್ನೂ ಆರ್​ಸಿಬಿ ಈಡೇರಿಸಿದೆ. ಬೆಂಗಳೂರು ಎಂಬ ಪದವನ್ನು ಆರ್​ಸಿಬಿ ತನ್ನ ಲೋಗೋದಲ್ಲಿ ಮತ್ತೆ ಸೇರಿಸಿದ್ದು’ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ನೂತನ ನಾಮಕರಣ ಮಾಡಿದೆ.

 


ಆರ್​ಸಿಬಿ ತನ್ನ ಅಧಿಕೃತ ಟ್ವಿಟ್ಟರ್, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಖಾತೆಯಲ್ಲಿನ ಪ್ರೊಫೈಲ್ ಫೋಟೋ, ಕವರ್ ಫೋಟೋ ತೆಗದು ಹಾಕಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಅಲ್ಲದೆ ಇನ್​ಸ್ಟಾಗ್ರಾಂನಲ್ಲಿ ಇದುವರೆಗೂ ಹಾಕಿದ್ದ ಎಲ್ಲಾ ಪೋಸ್ಟ್​ಗಳನ್ನು ಡಿಲೀಟ್ ಮಾಡಿತ್ತು.

New Zealand XI vs India: ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಆಟ; ಸ್ಟಾರ್ ಬ್ಯಾಟ್ಸ್​ಮನ್​ಗಳ ಪೆವಿಲಿಯನ್ ಹಾದಿ!

 ಈ ವಿಚಾರ ಆರ್​ಸಿಬಿ ಯಾವೊಬ್ಬ ಪ್ಲೇಯರ್​ಗೂ ತಿಳಿಸಿರಲಿಲ್ಲ. ಸ್ವತಃ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರೇ “ತಂಡದ ನಾಯಕನಾಗಿ ನನಗೆ ಈ ಬಗ್ಗೆ ಏನೂ ಕೂಡ ತಿಳಿಸಲೇ ಇಲ್ಲವಲ್ಲ? ಎಂದು ಟ್ವೀಟ್ ಮಾಡಿದ್ದರು. ಜೊತೆಗೆ ಎಬಿಡಿ ವಿಲಿಯರ್ಸ್​ ಕೂಡ "ನಮ್ಮ ಸೋಷಿಯಲ್ ಮಿಡಿಯಾ ಖಾತೆಗೆ ಏನಾಗಿದೆ?" ಎಂದು ಬರೆದುಕೊಂಡಿದ್ದರು.

ಕಿಂಗ್ ಕೊಹ್ಲಿ 7 ಬಾರಿ ನಾಯಕನಾಗಿ ಆರ್​ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ ಆದರೂ ಒಮ್ಮೆಯೂ ಕಪ್ ಗೆಲ್ಲಲು ಯಶಸ್ವಿಯಾಗಲಿಲ್ಲ. ಆದರೆ, ಈ ಬಾರಿ ಹಲವು ಬದಲಾವಣೆಯೊಂದಿಗೆ ಹೊಸ ಹುರುಪಿನಿಂದ ಆರ್​ಸಿಬಿ ಕಣಕ್ಕಿಳಿಯುತ್ತಿದೆ.
First published: February 14, 2020, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories